Video; ರಿಯಲ್ ಸೂಪರ್ ಫಾದರ್! ಕ್ಷಣಾರ್ಧದಲ್ಲಿ ತನ್ನ ಜೀವದ ಕುಡಿಯನ್ನು ಉಳಿಸಿಕೊಂಡ ಸೂಪರ್ ತಂದೆ!
ಇಂದಿನ ಸಮಯದಲ್ಲಿ ರಸ್ತೆಯ ಮೇಲೆ ವಾಹನಗಳು ಅಸಂಖ್ಯವಾಗಿ ಹೆಚ್ಚಾಗಿವೆ. ಹೀಗಾಗಿ ರಸ್ತೆಯ ಮೇಲೆ ಸಂಚರಿಸುವಾಗ ತಮ್ಮ ಜೀವವನ್ನು ಮುಷ್ಟಿಯಲ್ಲಿ ಹಿಡಿದುಕೊಂಡು ಸುತ್ತಾಡಬೇಕಾಗುತ್ತದೆ. ಕಾರಣ ಆಪತ್ತು ಯಾವಾಗ ಎಲ್ಲಿ ಯಾವ ರೀತಿ ಬಂದು ಅಪ್ಪಳಿಸುತ್ತದೆ ಎಂಬುದು ತಿಳಿದುಕೊಳ್ಳಲು ಸಾಧ್ಯವೇ ಇಲ್ಲ. ಸದ್ಯ ಇಲ್ಲಿ ನೋಡಲಿರುವ ವಿಡಿಯೋ ಇದೇ ವಿಷಯಕ್ಕೆ ಅನುಸರಿಸಿದ ಉದಾಹರಣೆಯಾಗಿದೆ.
ಪ್ರಸ್ತುತ ವಿಡಿಯೋದಲ್ಲಿ ತಂದೆ ತನ್ನ ಪುಟ್ಟ ಮಗುವನ್ನು ಟು ವೀಲರ್ ಮೇಲೆ ಕುಳ್ಳಿರಿಸಿ ತಾನು ಬದಿಗೆ ನಿಂತಿದ್ದಾನೆ. ಅಷ್ಟರಲ್ಲಿ ತಂದೆ ಸಹಜವಾಗಿ ಹಿಂದೆ ನೋಡಲು ಪಿಕ್ ಅಪ್ ವಾಹನದ ರೂಪದಲ್ಲಿ ಯಮರಾಜ ವೇಗವಾಗಿ ಬಳಿಯಲ್ಲಿಯೇ ಬಂದಿದ್ದ. ಅದನ್ನು ನೋಡಿದ ತಕ್ಷಣ ತಂದೆ ತನ್ನ ಮಗುವಿನ ಜೊತೆಗೆ ಹಠಾತ್ ಬದಿಗೆ ಸರದಿದ್ದಾನೆ. ತಂದೆಯು ಮಗನೊಂದಿಗೆ ಬದಿಗೆ ಸರದದ್ದೇ ತಡ ವಾಹನವು ಬೈಕಿಗೆ ವೇಗದಲ್ಲಿ ಗುದ್ದಿ ಮುಂದೆ ತೆಗೆದುಕೊಂಡು ಹೋಗಿದೆ. ಈ ಸಂದರ್ಭದಲ್ಲಿ ಸೆಕೆಂಡಿನ ಒಂದೇ ಒಂದು ಮೈಕ್ರೋಸೆಕೆಂಡ್ ಹೆಚ್ಚು ಕಡಿಮೆಯಾದರೂ ಮಗುವಿನ ಜೊತೆಗೆ ತಂದೆಯು ಸಹ ಸ್ಮಶಾನ ಸೇರಬೇಕಾಗುತ್ತಿತ್ತು. ಇಬ್ಬರ ಅದೃಷ್ಟ ತುಂಬಾ ಚೆನ್ನಾಗಿತ್ತು. ಅದರಲ್ಲೂ ಈ ವಿಡಿಯೋದಲ್ಲಿ ಕಂಡು ಬರುವ ಪ್ರಕಾರ ತಂದೆಯ ಸಮಯಪ್ರಜ್ಞೆ, ನಿಜಕ್ಕೂ ಅದ್ಭುತವೇ ಆಗಿತ್ತು ಎಂದು ಹೇಳಬಹುದು. ಈ ಸಮಯಪ್ರಜ್ಞೆಯಿಂದಾಗಿಯೇ ಮಗು ಮತ್ತು ತಂದೆ ಯಾವುದೇ ರೀತಿಯ ಅನಾಹುತಕ್ಕೆ ಗುರಿಯಾಗದೆ ಸುಖರೂಪವಾಗಿ ಉಳಿದಿದ್ದಾರೆ. ತಂದೆಯ ಚಾಣಾಕ್ಷತನ ಹಾಗೂ ಸಮಯಪ್ರಜ್ಞೆಗೆ ನೆಟ್ಟಿಗರು ತಲೆಬಾಗಿದ್ದಾರೆ. ಹಾಗೂ ತಂದೆಗೆ ಸೂಪರ್ ಫಾದರ್ ಎಂದು ಗುಣಗಾನ ಮಾಡುತ್ತಿದ್ದಾರೆ.
ವಿಡಿಯೋ ನೋಡಿ
View this post on Instagram
ಸೂಪರ್ ಫಾದರ್ ತಂದೆ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ankita_18110 ಈ ಹೆಸರಿನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿದ್ದಾರೆ.