Video: ಲಿಫ್ಟ್ ನಲ್ಲಿ ತುಂಟಾಟ ಮಾಡಲು ಹೋಗಿ, ಅಪಾಯದಲ್ಲಿ ಸಿಲುಕಿದ ಬಾಲಕ: ಮಕ್ಕಳ ವಿಷಯದಲ್ಲಿ ಬಹಳ ಎಚ್ಚರವಾಗಿರಿ

ಮಕ್ಕಳ ವಿಷಯ ಬಂದಾಗ ಮೊದಲ ಆದ್ಯತೆಯನ್ನು ಅವರ ಸುರಕ್ಷತೆಗೆ ನೀಡಬೇಕಾಗುವುದು. ಏಕೆಂದರೆ ಅವರಿಗೆ ಎಲ್ಲಾ ವಿಷಯಗಳ ಅರಿವು ಕಿರಿಯ ವಯಸ್ಸಿನಲ್ಲೇ ಇರುವುದಿಲ್ಲ. ಅವರಿಗೆ ಪ್ರತಿಯೊಂದನ್ನು ತಿಳಿ ಹೇಳುವ, ಯಾವುದು ಸರಿ ಹಾಗೂ ಯಾವುದು ತಪ್ಪು ಎನ್ನುವ ವಿಷಯಗಳನ್ನು ಕೂಡಾ ತಿಳಿಸಿ ಹೇಳಬೇಕು. ಇಲ್ಲವಾದಲ್ಲಿ ಅವರು ತುಂಟಾಟ ಗಳಿಂದಲೇ ಕೆಲವು ಬಾರಿ ಅ ಪಾ ಯ ಅಥವಾ ಸಂ ಕ ಷ್ಟ ಗಳನ್ನು ತಂದುಕೊಳ್ಳುವ ಸಾಧ್ಯತೆಗಳು ಕೂಡಾ ಇರುತ್ತವೆ. ಅಲ್ಲದೇ ಮಕ್ಕಳನ್ನು ಹೊರಗೆ ಕಳುಹಿಸುವ ಅನೇಕ ಸಂದರ್ಭಗಳಲ್ಲಿ ಪೋಷಕರು ಒಂದು ಕಣ್ಣು ಅವರ ಮೇಲೆ ಇರಬೇಕಾದ ಅಗತ್ಯ ಕೂಡಾ ಇರುತ್ತದೆ.

ಇಂತಹುದೇ ಒಂದು ನಿದರ್ಶನ ಅಂದರೆ ಮಕ್ಕಳು ಹೇಗೆ ಹೊರಗೆ ಹೋದಂತಹ ಸಂದರ್ಭದಲ್ಲಿ ತುಂಟಾಟ ಮಾಡುತ್ತಲೇ ಅಪಾಯಕ್ಕೆ ಸಿಲುಕಬಹುದೆಂಬುದನ್ನು ಸ್ಪಷ್ಟವಾಗಿ ತಿಳಿಸುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಬಾಲಕನೊಬ್ಬನು ಹೇಗೆ ಲಿಫ್ಟ್ ಒಂದರಲ್ಲಿ ಸಿಲುಕಿಕೊಂಡ ಎಂಬುದನ್ನು ನೋಡಬಹುದು. ಆದರೆ ಅದೃಷ್ಟವಶಾತ್ ಸಮಯ ಕ್ಕೆ ಸರಿಯಾಗಿ ಬಂದ ರಕ್ಷಣಾ ತಂಡದಿಂದಾಗಿ ಬಾಲಕನಿಗೆ ಯಾವುದೇ ತೊಂದರೆಯಾಗುವ ಮುನ್ನವೇ ವಿಷಯ ಒಂದು ಸುಖಾಂತ್ಯವನ್ನು ಕಂಡಿದೆ.

ಇಷ್ಟಕ್ಕೂ ಈ ಘಟನೆ ಏನು ಎನ್ನುವುದಾದರೆ ಚೀನಾದ ಫುಜಾವು ಸಿಟಿಯಲ್ಲಿ ನಡೆದಿದೆಯೆನ್ನಲಾದ ಈ ಘಟನೆಯಲ್ಲಿ ಬಾಲಕನೊಬ್ಬ ಕಟ್ಟಡವೊಂದರ ಲಿಫ್ಟ್ ಏರಿದ್ದಾನೆ. ಆದರೆ ಬಾಲಕ ಅಲ್ಲಿ ಕೂಡಾ ತುಂಟಾಟವನ್ನು ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾನೆ. ಲಿಫ್ಟ್ ನ ಬಾಗಿಲುಗಳು ಮುಚ್ಚಬಾರದೆಂದು ಆತ ತನ್ನ ಬಳಿಯಿದ್ದಂತಹ ಛತ್ರಿಯ ಹಿಡಿಯನ್ನು ಲಿಫ್ಟ್ ನ ಎರಡು ಬಾಗಿಲುಗಳು ಮುಚ್ಚಿಕೊಳ್ಳುವಾಗ ಅವುಗಳ ಮಧ್ಯೆ ಇಟ್ಟಿದ್ದಾನೆ‌. ಆದರೆ ಆತ ಅಂದುಕೊಂಡಂತೆ ಅಲ್ಲಿ ನಡೆದಿಲ್ಲ. ಛತ್ರಿಯ ಕಂಬಿಯನ್ನು ಮೀರಿ ಡೋರ್ ಕ್ಲೋಸ್ ಆಗಿದೆ. ಅಲ್ಲದೇ ಲಿಫ್ಟ್ ಇದ್ದಕ್ಕಿದ್ದಂತೆ ಫ್ರೀ ಫಾಲ್ ಮೋಷನ್ ಗೆ ಹೋಗಿದೆ.

ಬಾಲಕ ಛತ್ರಿಯ ಕಂಬಿಯನ್ನು ಹಿಡಿಯುವ ಪ್ರಯತ್ನ ಮಾಡಿದಾಗ ಅದು ಅವನ ಸಮೇತ ಮೇಲೆ ಹೋದಾಗ ಆತ ಅದನ್ನು ಬಿಟ್ಟು ಸುಮ್ಮನಾಗಿದ್ದಾನೆ. ಅದೃಷ್ಟ ವಶಾತ್ ಫ್ರೀ ಫಾಲ್ ಆದ ಲಿಫ್ಟ್ 25 ನೇ ಅಂತಸ್ತಿನಲ್ಲಿ ನಿಂತಿದೆ. ಕೂಡಲೇ ಕಟ್ಟಡದ ರಕ್ಷಣಾ ತಂಡವು ಸ್ಥಳಕ್ಕೆ ಆಗಮಿಸಿದೆ. ಲಿಫ್ಟ್ ನ ಬಾಗಿಲು ತೆರೆದುಕೊಂಡ ಕೂಡಲೇ ಬಾಲಕನನ್ನು ಹೊರಗೆ ಕಳೆದುಕೊಂಡಿದ್ದಾರೆ. ನಿಜಕ್ಕೂ ಬಾಲಕನ ಅದೃಷ್ಟ ಎಂದೇ ನಾವು ಹೇಳಬಹುದಾಗಿದೆ‌, ಇಲ್ಲವಾದರೆ ಎಂತಹ ಅ ನಾ ಹು ತ ಸಂಭವಿಸಬಹುದಿತ್ತು ಎಂಬುದನ್ನು ಊಹಿಸುವುದು ಕೂಡಾ ಸಾಧ್ಯವಿಲ್ಲ.

ವಿಡಿಯೋ ನೋಡಿ

ಲಕ್ಷಾಂತರ ಜನರು ಈ ವೀಡಿಯೊವನ್ನು ನೋಡಿದ್ದು ಸಾವಿರಾರು ಜನರು ಇದಕ್ಕೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ‌ ಅದರಲ್ಲಿ ಅನೇಕರು ಇದು ಫ್ರೀ ಫಾಲ್ ಅಲ್ಲವೇ ಅಲ್ಲ, ಹಾಗೇನಾದ್ರೂ ಫ್ರೀ ಫಾಲ್ ಆಗಿದ್ದರೆ ಆ ಬಾಲಕ ಬದುಕಿರುತ್ತಿರಲಿಲ್ಲ, ಲಿಫ್ಟ್ ನಾರ್ಮಲ್ ಸ್ಪೀಡ್ ನಲ್ಲೇ ಇದೆ ಎಂದಿದ್ದಾರೆ. ಕೆಲವರು ಬಾಲಕನ ಅದೃಷ್ಟ ಚೆನ್ನಾಗಿದೆ ಎಂದೇ ಹೇಳಿದ್ದಾರೆ. ಒಟ್ಟಾರೆ ವೀಡಿಯೋ ನಿಜವೋ ಸುಳ್ಳೋ ಎನ್ನುವುದಕ್ಕಿಂತ ಮಕ್ಕಳ ವಿಷಯದಲ್ಲಿ ಎಚ್ಚರ ವಹಿಸಬೇಕು ಎನ್ನುವುದಕ್ಕೆ ಮಾತ್ರ ಒಂದು ಉತ್ತಮವಾದ ಉದಾಹರಣೆಯಂತೂ ಆಗಿದೆ ಎನ್ನಬಹುದು. ಲಿಫ್ಟ್ ಗಳಲ್ಲಿ ಮಕ್ಕಳು ಆಡಲು ಹೋದರೆ ಸಾಕಷ್ಟು ಗಮನ ವಹಿಸಬೇಕಾಗುವುದು.