Video: ಶುರುವಾಯಿತು ಮಂಗಗಳ ಕ್ಲಾಸ್; ಯುವಕ ಕಲಿಸಿದನು ಅ ಆ.. ನೋಡಿ ಹೇಗೆ ಕಲಿಯುತ್ತಿವೆ ಮಂಗಗಳು

ಸೋಶಿಯಲ್ ಮೀಡಿಯಾದಲ್ಲಿ ನಾವು ಕಲ್ಪನೆಯನ್ನೇ ಮಾಡದಂತಹ ಅನೇಕ ವಿಚಿತ್ರ ವಿಡಿಯೋಗಳು ಹಾಗೂ ನಂಬಲಿಕ್ಕೆ ಸಾಧ್ಯವಾಗದಂತಹ ವಿಡಿಯೋಗಳು ದಿನಾಲು ಸಾಕಷ್ಟು ನೋಡಲು ಸಿಗುತ್ತವೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳು ಸಾಕಷ್ಟು ಫನ್ನಿಯಾಗಿರುತ್ತವೆ. ಎಲ್ಲ ಪ್ರಾಣಿಗಳಲ್ಲಿ ಮಂಗ ಮಾಡುವ ತುಂಬಾ ವಿಚಿತ್ರ ಚೇಷ್ಟೆಗಳಿಂದ ಎಲ್ಲರ ಗಮನವನ್ನು ತನ್ನ ಕಡೆಗೆ ಸೆಳೆಯುತ್ತದೆ. ಈಗ ಇಲ್ಲಿ ನೋಡುವ ವಿಡಿಯೋ ಒಂದು ಇದೇ ರೀತಿಯದ್ದಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಮಂಗಗಳು ಅಕ್ಷರ ಜ್ಞಾನ ಪಡೆಯುತ್ತಿವೆ. ಯುವಕನೊಬ್ಬ ಎರಡು ಮಂಗಗಳಿಗೆ ಅಕ್ಷರ ಜ್ಞಾನವನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾನೆ. ಮಂಗಗಳಿಗೆ ಬಾಳೆಹಣ್ಣಿನ ಆಮಿಷವನ್ನು ತೋರಿಸಿ ಅಕ್ಷರ ಜ್ಞಾನವನ್ನು ನೀಡುವ ಪ್ರಯತ್ನ ಪ್ರಸ್ತುತ ಯುವಕ ಮಾಡಿದ್ದಾನೆ. ಯುವಕ ಒಂದು ನೋಟ್ ಬುಕ್ ಮತ್ತು ಮಾರ್ಕರ್ ತೆಗೆದುಕೊಂಡು ಮಂಗಗಳಿಗೆ ಅ.. ಆ.. ಅಕ್ಷರಗಳನ್ನು ಕಲಿಸುತ್ತಿದ್ದಾನೆ. ಆದರೆ ಮಂಗಗಳು ಮಾತ್ರ ಕಲಿಯುವ ಹೆಸರನ್ನೇ ಎತ್ತುತ್ತಿಲ್ಲ. ಈ ಮಂಗಗಳು ಯುವಕ ಬರೆಯುವುದನ್ನಷ್ಟೇ ನೋಡುತ್ತಿವೆ. ಆದರೆ ಬರೆಯಲು ಪೆನ್ನು ನೀಡಿದಾಗ ಅದನ್ನು ತೆಗೆದುಕೊಂಡು ಅದರ ವಾಸನೆ ಮತ್ತು ತಿನ್ನಲು ನೋಡುತ್ತಿವೆ. ಯುವಕ ಮಾತ್ರ ಗಟ್ಟಿಯಾಗಿ ಓದಿಸಿ ಬರೆಯಲು ಪ್ರಯತ್ನ ಮಾಡಿಯೇ ಮಾಡುತ್ತಿದ್ದಾನೆ. ಮಂಗಗಳು ಮಾತ್ರ ಆತನ ಮಾತನ್ನು ಕೇಳದೆ ದೂರ ಓಡಲು ಪ್ರಯತ್ನಿಸುತ್ತಿವೆ. ಯುವಕ ಏನೇ ಪ್ರಯತ್ನ ಮಾಡಿದರೂ ಮಂಗಗಳು ಮಾತ್ರ ಸರಿಯಾಗಿ ಗಮನವೇ ನೀಡುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಯುವಕ ಮಾಡಿದ ಈ ಪ್ರಯತ್ನಕ್ಕೆ ನೇಟಿಜನ್ಸ್ ಗಳು ವಾ ವಾ ಎನ್ನುವುದರ ಜೊತೆಗೆ ಈತನ ಪ್ರಯತ್ನಕ್ಕೆ ತುಂಬಾ ಇಷ್ಟ ಪಟ್ಟಿದ್ದಾರೆ.

ವಿಡಿಯೋ ನೋಡಿ

ಪ್ರಸ್ತುತ ವೀಡಿಯೊವನ್ನು ಯುಟ್ಯೂಬ್ ನಲ್ಲಿ The Khurapati Indian ಹೆಸರಿನ ಚಾನೆಲ್ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 3 ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ. ಜನರು ಈ ವೀಡಿಯೋವನ್ನು ತುಂಬಾ ಇಷ್ಟ ಪಟ್ಟಿದ್ದಾರೆ ಹಾಗೂ ತಮ್ಮ ಕಮೆಂಟ್ಗಳನ್ನು ನೀಡಿದ್ದಾರೆ.