Video: ಸಮುದ್ರ ತೀರದಲ್ಲಿ ಆಡುತ್ತಿತ್ತು ಮಗು, ಅಷ್ಟರಲ್ಲೇ ಬಂತು ಶಾರ್ಕ್! ಮುಂದೆ…
ಫ್ಲೋರಿಡಾ:- ಫ್ಲೋರಿಡಾದ ಕೋಕೋ ಬೀಚ್ ನಲ್ಲಿಯ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋ ತುಂಬಾ ಭ’ಯಾನಕ ವಾಗಿದೆ. ಏಕೆಂದರೆ ಈ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತೆ, ಈ ವಿಡಿಯೋದಲ್ಲಿ ಒಂದು ಮಗು ಸಮುದ್ರ ದಂಡೆಯಲ್ಲಿ ಆಟವಾಡುತ್ತಿರುತ್ತದೆ, ಅಷ್ಟರಲ್ಲಿ ಆ ಮಗುವಿನ ಬೇಟೆ ಮಾಡಲು ಹಿಂದಿನಿಂದ ಒಂದು ಶಾರ್ಕ್ ಬರುತ್ತೆ. ದೇವರ ಆಶೀರ್ವಾದ ಒಂದು ತಲೆಯ ಮೇಲಿದ್ದರೆ ಎಂಥ ವಿಪರೀತ ಪರಿಸ್ಥಿತಿಯಿಂದಲೂ ಉಳಿದು ಬರುವ ಹಾಗೆ ಆ ಮಗುವಿನ ರಕ್ಷಣೆಗಾಗಿ ಅಲ್ಲಿದ್ದ ಒಬ್ಬ ಪೊಲೀಸ್ ಅಧಿಕಾರಿ ಸಾಕ್ಷಾತ್ ದೇವರ ಹಾಗೆ ಬರುತ್ತಾರೆ. ಈ ಘಟನೆಯನ್ನು ಕೇಳಿ ನಿಮಗೆ ಫಿಲ್ಮ್ ಹಾಗೆ ಅನಿಸಬಹುದು ಆದರೆ ಇದು ನಿಜವಾಗಿ ಘಟಿಸಿದೆ. ಮಗು ತನ್ನನ್ನು ಬೇಟೆಯಾಡಲು ಶಾರ್ಕ್ ಬರುತ್ತಿದೆ ಎಂದು ಮಗು ಅಂದುಕೊಂಡಿತ್ತು. ಆದರೆ ಅಲ್ಲಿದ್ದ ಒಬ್ಬ ಆಫ್ ಡ್ಯೂಟಿ ಪೊಲೀಸ ಆಫೀಸರ್ Adrian Kosicki ಈ ನೀರಿನಲ್ಲಿಯ ಚಲನವಲನ ಕಂಡು ನಿಖರವಾಗಿ ಇದು ಶಾರ್ಕ್ ಇದೆ ಎಂದು ಮನದಲ್ಲಿ ಅರಿತುಕೊಂಡರು.
ವಾಸ್ತವವಾಗಿ, ಪೊಲೀಸ್ ಅಧಿಕಾರಿ Adrian Kosicki ಅವರು ತಮ್ಮ ಪತ್ನಿಯೊಂದಿಗೆ ಸಮುದ್ರ ದಂಡೆಯಲ್ಲಿ ತಿರುಗಾಡುವ ಸಲುವಾಗಿ ಹೋಗಿದ್ದರು. ಅಷ್ಟರಲ್ಲಿ ಅವರು ನೀರಿನ ಚಲನವಲನ ಕಂಡು ಇದು ಶಾರ್ಕ್ ಬೇಟೆ ಯಾಡಲು ಬರುತ್ತಿದೆ ಎಂದು ಅರಿತುಕೊಂಡರು. ಶಾರ್ಕ್ ನಿಧಾನವಾಗಿ ಆಡುತ್ತಿದ್ದ ಮಗುವಿನ ಹತ್ತಿರ ಹೋಗುತ್ತಿತ್ತು. ಇದನ್ನು ನೋಡಿ ಈ ಪೊಲೀಸ್ ಅಧಿಕಾರಿ ಸಮಯ ವ್ಯರ್ಥ ಮಾಡದೆ ನೀರಿನಲ್ಲಿ ಧುಮಕಿ ಮಗುವನ್ನು ಉಳಿಸುತ್ತಾರೆ. ಈ ವಿಡಿಯೋವನ್ನು ಕೋಕೋ ಬೀಚ್ ನ ಪೊಲೀಸ್ ಅಧಿಕಾರಿ ಮತ್ತು ಫೈಯರ್ ಅವರು ಈ ವಿಡಿಯೋ ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನೀವು ನೋಡಬಹುದು ಪೊಲೀಸ್ ಅಧಿಕಾರಿ Adrian ಅವರು ನೀರಲ್ಲಿ ಧುಮಕಿ ಮಗುವನ್ನು ಎಳೆಯಲು ಪ್ರಾರಂಭ ಮಾಡುತ್ತಾರೆ.
ಈ ವಿಡಿಯೋದ ಹಿಂಬದಿಯಲ್ಲಿ ಪೊಲೀಸ ಅಧಿಕಾರಿಯ ಧ್ವನಿಯನ್ನು ನೀವು ಸಹಜವಾಗಿ ಕೇಳಬಹುದು. ಅರ್ರೆ ನೋಡಿ ಆ ಬದಿಗೆ ಶಾರ್ಕ್ ಇದೆ……ಮತ್ತು ಇದನ್ನು ಹೇಳುತ್ತಲೇ Adrian Kosicki ನೀರಿನಲ್ಲಿ ಹಾರಿ ಹುಡುಗನನ್ನು ಹೊರತಗೆಯಲು ಪ್ರಯತ್ನ ಮಾಡುತ್ತಾರೆ.
ಫಾಕ್ಸ್ ನ್ಯೂಜ ದ ಪ್ರಕಾರ, ಶಾರ್ಕ್ ಇದೆ ಇಲ್ಲವೋ ಎಂಬುದು ಗುರುತಿಸಲು ಸಾಧ್ಯವಾಗಿಲ್ಲ. ಪೊಲೀಸ ವಿಭಾಗ ತಮ್ಮ ಅಧಿಕಾರಿಯನ್ನು ಶ್ಲ್ಯಾಘಿಸುತ್ತ ಬರೆದಿದ್ದಾರೆ, ‘Adrian ಅವರಿಗೆ ತುಂಬಾ ತುಂಬಾ ಧನ್ಯವಾದಗಳು, ನಾವು ಇದುವರೆಗೆ ಗುರಿತಿಸಲು ಸಾಧ್ಯವಾಗಿಲ್ಲ ಅದೇನೆಂದರೆ ಶಾರ್ಕ್ ನ ಗುರಿ ಏನಿತ್ತು ಎಂದು ಆದರೆ ಈ ಪುಟ್ಟ ಬಾಲಕನಿಗೆ ಒಂದು ಸುಂದರವಾದ ಕಥೆ ಸಿಕ್ಕಂತಾಗಿದೆ”.
Close call: an police officer saved a young boy from a potential shark encounter in Cocoa Beach, Florida, on July 16.
— Globalnews.ca (@globalnews) July 20, 2020
RELATED: https://t.co/BMOXxdeCjv pic.twitter.com/aJoLPShDwL
ಈ ವಿಡಿಯೋ ಎರಡು ದಿವಸಗಳ ಮುಂಚೆ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಲಾಗಿದೆ ಮತ್ತು ಇದುವರೆಗೆ ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಸಾವಿರಕ್ಕಿಂತ ಹೆಚ್ಚು ಕಾಮೆಂಟ್ಸ್ ಹಾಗೂ ಲೈಕ್ಸ್ ಗಳು ಬಂದಿವೆ. ಒಬ್ಬ ಯುಜರ್ ತನ್ನ ಕಾಮೆಂಟ್ ನಲ್ಲಿ,'” ಈ ಪೊಲೀಸ್ ಅಧಿಕಾರಿ ತುಂಬಾ ಶೌರ್ಯದ ಕೆಲಸ ಮಾಡಿದ್ದಾರೆ ” ಎಂದು ಬರೆದಿದ್ದಾರೆ. ಇನ್ನೊಬ್ಬ ಯುಜರ್,’ ಭಗವಂತನ ದಯೆಯಿಂದ ಮಗು ಸುರಕ್ಷಿತವಾಗಿದೇ’ ಎಂದು ಬರೆದಿದ್ದಾರೆ.
Brevard Times ನ ಅನುಸಾರ, ಜುಲೈ ಮತ್ತು ಆಕ್ಟೊಬರ್ ತಿಂಗಳಲ್ಲಿ ಆಗಾಗ್ಗೆ ಶಾರ್ಕ್ ಸಮುದ್ರ ದಂಡೆಯಲ್ಲಿರುವ ಜನರ ಮೇಲೆ ದಾ’ಳಿ ಮಾಡುತ್ತದೆ. ಏಕೆಂದರೆ ಈ ಸಮಯದಲ್ಲಿಯ ತಾಪಮಾನ ತುಂಬಾ ಉಷ್ಣವಾಗಿರುತ್ತದೆ.