Video: ಸಿಂಹವು ತನ್ನ ಕರುವನ್ನು ಎತ್ತಿಕೊಂಡು ಹೋಯಿತ್ತೆಂದು ಸಿಟ್ಟಿಗೆದ್ದು ತಾಯಿ ಎಮ್ಮೆ ಮಾಡಿದ್ದನ್ನು ನೋಡಿದರೆ ನೀವು ಆ#ಶ್ಚರ್ಯ ಪಡುವಿರಿ!!!!

‘ತಾಯಿಯೇ ದೇವರು’, ‘ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ’ ಈ ಎಲ್ಲ ಗಾದೆ ಮಾತುಗಳನ್ನು ಚಿಕ್ಕವರಿದ್ದಾಗಲೇ ಕೇಳಿದ್ದೇವೆ. ತಾಯಿಯ ಕುರಿತು ಎಷ್ಟೇ ಹೊಗಳಿದರು ಸಾಲದು. ಏಕೆಂದರೆ ತಾಯಿಯು ತನ್ನ ಮಕ್ಕಳಿಗಾಗಿ ಏನೆಲ್ಲಾ ಮಾಡುತ್ತಾಳೆ, ಮಕ್ಕಳ ಸಲುವಾಗಿ ತನ್ನ ಜೀವವೇ ಮುಡಿಪಾಗಿಡುತ್ತಾಳೆ. ತಾಯಿಗೆ ತನ್ನ ಹೆತ್ತ ಮಗು ಎಂದರೆ ಪಂಚ ಪ್ರಾಣ. ತಾಯಿ ತನ್ನ ಮಗುವಿಗೆ ಏನೇ ಆದರೂ ಸಹಿಸಿಕೊಳ್ಳಲಾರಳು. ತಾಯಿಯ ಪ್ರೀತಿಗೆ ಯಾವುದೇ ಪ್ರೀತಿ ಸರಿಸಾಟಿ ಅಲ್ಲ. ಈ ಜಗತ್ತಿನಲ್ಲಿ ನಿಷ್ಕಲ್ಮಶವಾದ ಪ್ರೀತಿ ದೊರೆಯುವದು ಕೇವಲ ತಾಯಿಯಿಂದ ಮಾತ್ರ. ಏನೂ ಅಪೇಕ್ಷೆ ಇಲ್ಲದೆ ಪ್ರೀತಿಸುವಳು ತಾಯಿ.

ಮನುಷ್ಯನೇ ಆಗಲಿ ಅಥವಾ ಪ್ರಾಣಿನೆ ಆಗಲಿ ಭಾವನೆ ಒಂದೇ ಇರುತ್ತವೆ ಅನ್ನೋದಕ್ಕೆ ಈ ವೀಡಿಯೋ ನೆ ಸಾಕ್ಷಿ. ತಾಯಿ ತನ್ನ ಮಗುವಿಗಾಗಿ ಏನನ್ನೂ ಮಾಡಲು ಸಿದ್ಧವಾಗಿರುತ್ತಾಳೆ ಅನ್ನೋದಕ್ಕೆ ಈ ವೀಡಿಯೋ ಉದಾಹರಣೆಯಾಗಿದೆ. ಸೋಶಿಯಲ್ ಮಿಡಿಯಾದಲ್ಲಿ ಈ ವೀಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತಾಯಿ ಮತ್ತು ಮಗುವಿನ ನಡುವಿನ ಬಾಂಧವ್ಯ ಎಷ್ಟು ಗಟ್ಟಿಯಾಗಿರುತ್ತದೆ ಎಂಬುದು ನಾವು ಕಾಣಬಹುದು. ಪ್ರಸ್ತುತ ವಿಡಿಯೋ ಸಿಂಹಗಳು ಮತ್ತು ಕಾಡೆಮ್ಮೆಯ ನಡುವೆ ನಡೆದ ಘಟನೆಯ ವೀಡಿಯೋ ಇದಾಗಿದೆ.

ಪ್ರಸ್ತುತ ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಒಂದು ಕಾಡೆಮ್ಮೆ ತನ್ನ ಕರುವನ್ನು ಕರೆದುಕೊಂಡು ಹೊರಟಿತ್ತು. ಎಮ್ಮೆ ಮತ್ತು ಕರು ಹೊರೆತು ಯಾವುದೇ ಎಮ್ಮೆಗಳು ಇರಲಿಲ್ಲ. ಇದನ್ನು ಗಮನಿಸಿದ ಸಿಂಹದ ಗುಂಪೊಂದು ಈ ಎಮ್ಮೆಯ ಕರುವನ್ನು ಹೇಗಾದರೂ ಮಾಡಿ ಬೇ#ಟೆಯಾಡಬೇಕು ಎಂದು ನಿರ್ಧರಿಸಿದವು. ಸುಮಾರು ಆರು ಸಿಂಹಗಳು ಒಟ್ಟಿಗೆ ಕೂಡಿ ಈ ಎಮ್ಮೆಯ ಹಿಂದೆ ಹಿಂದೆ ಹೊರಟವು ಇದನ್ನು ಗಮನಿಸಿದ ತಾಯಿ ತುಂಬಾ ಹೆದರಿತು ಆದರೆ ಅದು ತನ್ನ ಧೈರ್ಯದಿಂದ ಕರುವನ್ನು ಕರೆದುಕೊಂಡು ಮುಂದೆ ಮುಂದೆ ಸಾಗುತ್ತಿತ್ತು. ಹಿಂದಿನಿಂದ ಆರು ಸಿಂಹಗಳು ಹಾಗೆ ಬರುತ್ತಿದ್ದವು, ತನ್ನ ಕರುವನ್ನು ಸುರಕ್ಷಿತವಾಗಿ ಮುಂದೆ ಮುಂದೆ ಸಾಗುತ್ತ ಕರೆದುಕೊಂಡು ಹೋಗುತ್ತಿದ್ದಾಗ ಕರು ಸ್ವಲ್ಪ ಹಿಂದೆ ಬಿದ್ದಿತ್ತು ಇದನ್ನು ಗಮನಿಸಿದ ಒಂದು ಸಿಂಹ ಓಡಿ ಹೋಗಿ ಆ ಕರುವನ್ನು ತನ್ನ ಬಾಯಿಯಲ್ಲಿ ಹಿಡಿದುಕೊಂಡು ಓಡಿ ಹೋಯಿತು.

ತಾಯಿ ಎಮ್ಮೆ ಹಿಂದೆ ತಿರುಗಿ ನೋಡುವಷ್ಟರಲ್ಲಿ ಸಿಂಹ ಕರುವನ್ನು ಬಾಯಲ್ಲಿ ಹಿಡಿದುಕೊಂಡು ಹೊರಟಿತ್ತು ಆಗ ಸಿಟ್ಟಿಗೆದ್ದ ತಾಯಿ ಎಮ್ಮೆ ಅಲ್ಲಿದ್ದ ಸಿಂಹಗಳ ಜೊತೆಗೆ ಹೋ#ರಾಟ ಮಾಡಲು ಶುರುಮಾಡಿತು, ಎಮ್ಮೆಯ ರೌ#ದ್ರ ಅವತಾರ ನೋಡಿ ಅಲ್ಲಿದ್ದ ಸಿಂಹಗಳು ಸಹ ಹಿಂದೆ ಸರಿದವು ಆಗ ಎಮ್ಮೆ ತನ್ನ ಕರುವನ್ನು ಬಾಯಿಯಲ್ಲಿ ಹಿಡಿದುಕೊಂಡು ಹೋಗಿದ ಸಿಂಹದ ಹಿಂದೆ ಬೆನ್ನು ಹತ್ತಿತ್ತು, ಸಿಂಹ ಓಡುತ್ತ ಕಾಡಿನ ಮಧ್ಯದಲ್ಲಿ ಹೋಯಿತು ಆದರೂ ಸಹ ಈ ಎಮ್ಮೆ ಅದರ ಹಿಂದೆ ರಭಸದಿಂದ ಹೋಯಿತು. ತಾಯಿ ಎಮ್ಮೆಯ ರಭಸ ಕಂಡು ಆ ಸಿಂಹ ಸಹ ಹೆದರಿತು ತಕ್ಷಣವೇ ತನ್ನ ಬಾಯಿಯಲ್ಲಿದ್ದ ಕರುವನ್ನು ಕೆಳಗೆ ಬಿಟ್ಟು ಅಲ್ಲಿಂದ ಓಡಿ ಹೋಯಿತು. ತದನಂತರ ತಾಯಿ ಎಮ್ಮೆ ತನ್ನ ಕರುವನ್ನು ಕರೆದುಕೊಂಡು ಬಂದಿತು. ನೋಡಿ ಆರು ಸಿಂಹಗಳು ಇದ್ದರು ಸಹ ಒಂದು ಎಮ್ಮೆಗೆ ಏನೂ ಮಾಡಲು ಸಾಧ್ಯವಾಗಲಿಲ್ಲ ಏಕೆಂದರೆ ಮಗುವಿಗಾಗಿ ತಾಯಿ ಏನನ್ನು ಸಹ ಮಾಡಬಹುದು ಅನ್ನೋದನ್ನು ಆ ಸಿಂಹಗಳು ಅರಿತಿದ್ದವು.

ವಿಡಿಯೋ ನೋಡಿ

 
 
 
 
 
View this post on Instagram
 
 
 
 
 
 
 
 
 
 
 

A post shared by wildearth 🐆 (@wildwilduniverse)

ಪ್ರಸ್ತುತ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಅಲ್ಲದೆ ಎಷ್ಟೋ ಜನರು ತಾಯಿ ಎಮ್ಮೆಯ ಧೈರ್ಯದ ಕುರಿತು ಕಾಮೆಂಟ್ ಮಾಡಿದ್ದಾರೆ.