Video; ಸೀರೆಯನ್ನು ತೊಟ್ಟು ಯುವತಿ ಮಾಡುತ್ತಿದ್ದಾಳೆ ಜಿಮ್ ನಲ್ಲಿ ಹೇವಿ ಕಸರತ್ತು! ನೋಡಿ ಆಕೆಯ ವಿಶೇಷ ದೃಶ್ಯ.

ಇಂದಿನ ಸಮಯದಲ್ಲಿ ಹೆಚ್ಚಿನ ಜನರು ತಮ್ಮ ಆರೋಗ್ಯದ ಕಡೆಗೆ ಎಕ್ಸರ್ಸೈಜ್ ಮೂಲಕ ಗಮನ ನೀಡುವದನ್ನು ನೋಡುತ್ತೇವೆ. ಕೆಲವರು ವಾಕಿಂಗ್ ಮಾಡಿದರೆ, ಕೆಲವರು ಯೋಗ ಸಾಧನೆಗೆ ಮಹತ್ವ ನೀಡುತ್ತಾರೆ. ಇನ್ನು ಕೆಲವರು ರನ್ನಿಂಗ್ ಮಾಡಿದರೆ ಮತ್ತೆ ಕೆಲವರು ಜಿಮ್ ನಲ್ಲಿ ಹೋಗಿ ಬೇವರಿಳಿಸುತ್ತಾರೆ. ಕೆಲವರು ಇದ್ಯಾವುದೂ ಮಾಡುವದು ಆಗಲಿಲ್ಲ ಎಂದರೆ ಕೊನೆಪಕ್ಷ ಆಹಾರದ ಕಡೆಗಾದರೂ ಗಮನ ನೀಡುತ್ತಾರೆ.

ಇತ್ತೀಚೆಗೆ ಹದಿಹರೆಯದ ಯುವಕ ಯುವತಿಯರು ಹೆಚ್ಚಾಗಿ ಜಿಮ್ ಕಡೆಗೆ ಆಕರ್ಷಿತರಾಗಿದ್ದಾರೆ. ಈಗ ಜಿಮ್ ನಲ್ಲಿಯದೇ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿರುವ ಮುಖ್ಯ ಕಾರಣ ಯುವತಿಯೊಬ್ಬಳು ಸೀರೆಯನ್ನು ತೊಟ್ಟು ಕಸರತ್ತು ಮಾಡುತ್ತಿದ್ದಾಳೆ, ಅದು ಹೇವಿಯಾಗಿ. ಇಲ್ಲಿ ಯುವತಿ ಸುಮಾರು ಮಧ್ಯ ವಯಸ್ಸಿನವಳಾಗಿದ್ದರೂ ಆಕೆಯ ಆಕ್ಟಿವಿಟಿ ನೋಡಿ ದಂಗಾಗುತ್ತಿರಿ. ಆಕೆ ಮಾಡುವ ಒಂದೊಂದು ಕಸರತ್ತು ಆಶ್ಚರ್ಯವನ್ನುಂಟು ಮಾಡುತ್ತದೆ. ಕೊನೆಯ ಕಸರತ್ತು ಅಂತೂ ನೋಡಿ ಅಕ್ಷರಶಃ ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತದೆ.

ನೋಡಿ ಈ ಸ್ಪೆಷಲ್ ವಿಡಿಯೋ….

 

View this post on Instagram

 

A post shared by Reena Singh (@reenasinghfitness)

ಮಹಿಳೆ ಸೀರೆಯನ್ನು ತೊಟ್ಟು ಕಸರತ್ತು ಮಾಡುತ್ತಿರುವ ಈ ಅಪರೂಪದ ವಿಡಿಯೋವನ್ನು reenasingfitness ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವೀಡಿಯೋವನ್ನು ಇಲ್ಲಿಯವರೆಗೆ 1.2 ಮಿಲಿಯನ್ ಜನರು ಲೈಕ್ ಮಾಡಿದ್ದಲ್ಲದೆ ಪ್ರಸ್ತುತ ವಿಡಿಯೋ ಸುಮಾರು ಮಿಲಿಯನ್ ಗಳವರೆಗೆ ವೀಕ್ಷಣೆ ಪಡೆದಿದೆ.