Video; ಸೋದರ ಮಗನ ಮದುವೆಯಲ್ಲಿ ಡಾನ್ಸ್ ಮಾಡುವಾಗಲೇ ಕುಸಿದು ಬಿದ್ದ ವ್ಯಕ್ತಿ ಬರೀ ಐದೇ 5 ಸೆಕೆಂಡುಗಳಲ್ಲಿ…Exit.

ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಕಡಿಮೆ ವಯಸ್ಸಿನ ವ್ಯಕ್ತಿಗಳು ಹಠಾತ್ ಹೃದಯಾಘಾತದಿಂದ ಸಾವಿಗೆ ಶರಣಾಗುವ ಅನೇಕ ವಿಡಿಯೋಗಳು ನೋಡಲು ಸಿಗುತ್ತಿವೆ. ಇಂಥ ವೀಡಿಯೊಗಳನ್ನು ನೋಡಿದಾಗ ನಿಜಕ್ಕೂ ಮನಸ್ಸು ಮಮ್ಮಲ ಮರಗುತ್ತದೆ. ಪ್ರಸ್ತುತ ವ್ಯಕ್ತಿ ನಮಗೆ ಅಪರಿಚಿನಾದರೂ ಮನಸ್ಸಿಗೆ ನೋವು ಮಾತ್ರ ನೀಡುವದು ಖಚಿತ.

ಸದ್ಯ ಕಾಶಿ ಹೆಸರಿನಿಂದಲೇ ಪ್ರಸಿದ್ಧವಾಗಿರುವ ವಾರಾಣಸಿಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಸಹೋದರನ ಮದುವೆಯಲ್ಲಿ ತುಂಬಾ ಉಲ್ಲಸಿತನಾಗಿ ಹರುಷದಿಂದ ಕುಣಿಯುತ್ತಿರುವಾಗಲೇ ಆತನ ಹೃದಯ ಸ್ತಂಭನವಾಗಿದೆ. ಕ್ಷಣದಲ್ಲಿ ಪ್ರಾಣಪಕ್ಷಿ ಹಾರಿ ಹೋಗಿದೆ. ಮನೆಯವರೆಲ್ಲರೂ ಕೂಡಿ ಭರ್ಜರಿಯಾಗಿ ಸಂತೋಷದಿಂದ ಡಾನ್ಸ್ ಮಾಡುತ್ತಿರುವಾಗಲೇ ವ್ಯಕ್ತಿ ಒಮ್ಮೆಲೆ ತನ್ನ ಬ್ಯಾಲೆನ್ಸ್ ಕಳೆದುಕೊಂಡಿದ್ದಾನೆ. ಅದೇ ಮೋಷನ್ ನಲ್ಲಿ ಅಲ್ಲಿಯೇ ಕೆಳಗೆ ಬೀಳುತ್ತಾನೆ.

ನೋಡಿ ಈ ವಿಡಿಯೋ…

https://twitter.com/shubhankrmishra/status/1597584656190550017?s=20&t=20TfgA-_7LcWIZeS4O1bWg

ಪ್ರಸ್ತುತ ಮನ ಕಲಕುವ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಶುಭಂಕರ ಮಿಶ್ರಾ ಹೆಸರಿನ ವ್ಯಕ್ತಿಯೊಬ್ಬರು ಶೇರ್ ಮಾಡಿದ್ದಾರೆ. ಅವರು ಶೇರ್ ಮಾಡಿದ 5 ದಿನಗಳಲ್ಲಿ ಈ ವಿಡಿಯೋ 1 ಲಕ್ಷ 84 ಸಾವಿರ ಜನರು ವೀಕ್ಷಣೆಯನ್ನು ಪಡೆದಿದೆ.