Video: ಸ್ಕೂಟರ್ ಚಾಲನೆ ಮಾಡುವಾಗ ಕೂದಲೆಳೆಯ ಅಂತರದಲ್ಲಿ ಸ್ಕೂಟರ್ ಮೇಲಿಂದ ಬೀಳುವುದರಿಂದ ಪಾರಾದ ಮಮತಾ ಬ್ಯಾನರ್ಜಿ!
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದಿನೇ ದಿನೇ ಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಿರುವ ಮಮತಾ ಬ್ಯಾನರ್ಜಿಯವರು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಕೊಲ್ಕತ್ತಾದ ಕಾಲಿಘಾಟ್ ನಿಂದ ರಾಜ್ಯ ಸಚಿವಾಲಯವಾದ ನಾಬನ್ನ್ ವರೆಗೆ ಸಂಚರಿಸಿದ್ದಾರೆ. ಆದರೆ ಸ್ಕೂಟರ್ ನಲ್ಲಿ ಸಂಚಾರ ಮಾಡುವ ವೇಳೆಯಲ್ಲಿ ಸ್ಕೂಟರ್ ಮೇಲಿಂದ ಬೀಳುವುದರಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಸ್ಕೂಟರ್ ಮೇಲಿಂದ ಜಾರಿ ಬೀಳಬೇಕಾಗಿದ್ದ ಮಮತಾ ಬ್ಯಾನರ್ಜಿಯವರು ಅಲ್ಲಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದರವರ ಸಹಾಯದಿಂದ ಸಮತೋಲನ ಕಾಯ್ದುಕೊಂಡು ಬೀಳುವುದರಿಂದ ಪಾರಾಗಿ, ಅನಂತರ ಸ್ಕೂಟರ್ ಅನ್ನು ಚಾಲನೆ ಮಾಡಿದ್ದಾರೆ.
ಈ ಘಟನೆಯ ನಂತರ ರಾಜ್ಯ ಸರ್ಕಾರದ ಮಂತ್ರಿ ಹಾಗೂ ನಗರದ ಮೇಯರ್ ಆಗಿರುವ ಪರ್ಹದ್ ಹಕೀಮ್ ಅವರು ನಡೆಸಿದ್ದಾರೆ.
ಸ್ಕೂಟರ್ ನಲ್ಲಿ ಸವಾರಿ ಮಾಡುವಾಗ ಮಮತಾ ಬ್ಯಾನರ್ಜಿ ಅವರು ಇದ್ದಕ್ಕಿದ್ದಂತೆ ಸ್ಕೂಟರ್ ಮೇಲಿನ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ. ದೇಶದಲ್ಲಿ ಪೆಟ್ರೋಲ್ ಡೀಸಲ್ ಬೆಲೆ ಏರುತ್ತಿರುವ ಕಾರಣದಿಂದ
ಕೊರಳಿಗೆ ಅದನ್ನು ವಿ ರೋ ಧ ಮಾಡುವಂತಹ ಬೋರ್ಡ್ ಮಾದರಿಯ ಪಟ್ಟಿಯನ್ನು ಬರೆದು ಅದರಲ್ಲಿ ಘೋಷಣೆಗಳನ್ನು ಬರೆದು ಹಾಕಿಕೊಂಡಿದ್ದರು. ಹೆಲ್ಮೆಟ್ ಧರಿಸಿದ್ದ ಮಮತಾ ಬ್ಯಾನರ್ಜಿಯವರು ಸ್ಕೂಟರ್ ಮೇಲೆ ಕುಳಿತು ಹಾಜ್ರಾ ಮೋಡ್ ನಿಂದ ರಾಜ್ಯ ಸಚಿವಾಲಯದ ನಡುವಿನ ಏಳು ಕಿಲೋ ಮೀಟರ್ ದೂರವನ್ನು ಸ್ಕೂಟರ್ ಮೇಲೆ ಸಂಚರಿಸುತ್ತಾ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರ ಕಡೆಗೆ ಕೈ ಬೀಸುತ್ತಾ ಸಾಗಿದ್ದರು.
45 ನಿಮಿಷಗಳ ಪ್ರಯಾಣದ ನಂತರ ನಬಾನ್ನ ತಲುಪಿದ ಮಮತಾ ಬ್ಯಾನರ್ಜಿಯವರು ಬಿಜೆಪಿ ನೇತೃತ್ವದ ಸರ್ಕಾರವನ್ನು ಟೀಕೆ ಮಾಡುತ್ತಾ, ಇಂಧನ ಬೆಲೆ ಏರಿಕೆಯನ್ನು ನಾವು ವಿ ರೋ ಧಿಸುತ್ತೇವೆ. ಮೋದಿ ಸರಕಾರ ಕೇವು ಸುಳ್ಳು ಭರವಸೆಗಳನ್ನು ಮಾತ್ರ ನೀಡುತ್ತದೆ. ತೈಲ ಬೆಲೆ ಏರಿಕೆಯ ವಿಚಾರದಲ್ಲಿ ಅವರು ಇಂಧನ ಬೆಲೆಯನ್ನು ಕಡಿಮೆ ಮಾಡಲು ಏನೂ ಮಾಡಿಲ್ಲ ಎಂದಿದ್ದಾರೆ. ನೀವು ಮೋದಿ ಸರ್ಕಾರವು ಅಧಿಕಾರಕ್ಕೆ ಬಂದಾಗಿನ ಹಾಗೂ ಇಂದಿನ ಪೆಟ್ರೋಲ್ ಬೆಲೆಯ ದರವನ್ನು ನೋಡಿದರೆ ಎಂತಹ ವ್ಯತ್ಯಾಸವಿದೆ ಎಂದು ಗಮನಿಸಬಹುದಾಗಿದೆ ಎಂದಿದ್ದು ಶುಕ್ರವಾರದಿಂದ ತೃಣಮೂಲ ಕಾಂಗ್ರೆಸ್ ಇಂಧನ ಬೆಲೆ ಏರಿಕೆಯ ವಿ ರು ದ್ಧ ಪ್ರ ತಿ ಭ ಟ ನೆ ಆರಂಭಿಸುವುದಾಗಿ ಹೇಳಿದ್ದಾರೆ.
ಮಮತಾ ಬ್ಯಾನರ್ಜಿಯವರು ಮಾತನಾಡುತ್ತಾ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ತಾನು ಉಚಿತವಾಗಿ ಎಲ್ ಪಿ ಜಿ ಸಂಪರ್ಕವನ್ನು ನೀಡುವುದಾಗಿ ಹೇಳಿತ್ತು. ಆದರೆ ಅದು ಈಗ ಇಂಧನ ಬೆಲೆಯನ್ನು ಏರಿಸುತ್ತಾ ಮುಂದೆ ಸಾಗಿದೆ. ಮೋದಿ (ಪ್ರಧಾನಿ ನರೇಂದ್ರ ಮೋದಿ) ಮತ್ತು ಶಾ (ಕೇಂದ್ರ ಗೃಹ ಸಚಿವ ಅಮಿತ್ ಶಾ) ದೇಶವನ್ನು ಮಾರಾಟ ಮಾಡುತ್ತಿದ್ದಾರೆ. ಅವರು ಲಾಭ ಗಳಿಸುವ ಸಾರ್ವಜನಿಕ ವಲಯದ ಪರಿಕ್ರಮಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದು ಜನ ವಿ ರೋ ಧಿ, ಮಹಿಳಾ ವಿ ರೋ ಧಿ, ಯುವ ವಿ ರೋ ಧಿ ಮತ್ತು ರೈತ ವಿ ರೋ ಧಿ ಸರ್ಕಾರ ಎಂಬುದಾಗಿ ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರದ ವಿ ರು ದ್ಧ ವಾ ಗ್ದಾಳಿಯನ್ನು ನಡೆಸಿದ್ದಾರೆ.
#WATCH | West Bengal CM Mamata Banerjee nearly falls while driving an electric scooter in Howrah, as a mark of protest against fuel price hike. She quickly regained her balance with support and continued to drive.
— ANI (@ANI) February 25, 2021
She is travelling to Kalighat from State Secretariat in Nabanna pic.twitter.com/CnAsQYNhTP
ತಮ್ಮ ವಿಶಿಷ್ಠವಾದ ಪ್ರ ತಿ ರೋ ಧವನ್ನು ಕುರಿತಾಗಿ ಮಾತನಾಡಿದ ಮಮತಾ ಬ್ಯಾನರ್ಜಿಯವರು ಪೆಟ್ರೋಲ್, ಡೀಸಲ್ ಹಾಗೂ ಇಂಧನ ಬೆಲೆಯಲ್ಲಿ ಏರಿಕೆ ಆಗುತ್ತಿರುವ ಕಾರಣದಿಂದಾಗಿ ತಾನು ಎಲೆಕ್ಟ್ರಿಕ್ ಸ್ಕೂಟರನ್ನು ಏರಿದ್ದಾಗಿ ಹೇಳಿದ್ದಾರೆ. ಈ ವೇಳೆ ಮಮತಾ ಅವರು ದೇಶದಲ್ಲಿ ಮಧ್ಯಮ ವರ್ಗದ ಕುಟುಂಬಕ್ಕೆ ತಿಂಗಳಿಗೆ ಎರಡು ಎಲ್‌ಪಿಜಿ ಸಿಲಿಂಡರ್‌ಗಳು ಬೇಕಾಗುತ್ತವೆ, ಆದರೆ ಈಗ ಏರುತ್ತಿರುವ ಬೆಲೆಯ ಕಾರಣದಿಂದಾಗಿ ಅದನ್ನು ಖರೀದಿ ಮಾಡುವುದು ಕೂಡಾ ಸಾಧ್ಯವಾಗುತ್ತಿಲ್ಲ. ನಮ್ಮ ರಾಜ್ಯದಲ್ಲಿ ಒಂದು ಕೋಟಿ ಜನರು ಸೀಮೆಎಣ್ಣೆ ತೈಲವನ್ನು ಅವಲಂಬಿಸಿದ್ದಾರೆ, ಆದರೆ ಈಗ ಅವರಿಗೆ ಅದೂ ಸಿಗುತ್ತಿಲ್ಲ ಎಂದು ಅ ಸಮಾಧಾನವನ್ನು ಹೊರ ಹಾಕಿದ್ದಾರೆ.