Video: ಹಾವಿಗೆ ರಾಖಿ ಕಟ್ಟಿದ ತಂಗಿ, ರಾಖಿ ದಿನವೇ ಹಾವಿಗೆ ಬಲಿಯಾಗಿ ಹೋದ ಅಣ್ಣ: ಹುಚ್ಚಾಟದ ಪರಿಣಾಮ ಪ್ರಾಣಕ್ಕೆ ಆಯ್ತು ಸಂಚಕಾರ!

ಕೆಲವರು ಕೆಲವೊಮ್ಮೆ ಮಾಡುವ ಕೆಲಸಗಳು ನಿಜಕ್ಕೂ ಅತಿರೇಕ ಎನಿಸಿ ಬಿಡುತ್ತದೆ. ಅಲ್ಲದೇ ಇಂತಹ ಅತಿರೇಕದ ಕೆಲಸಗಳಿಗೆ ಕೈ ಹಾಕಿ ಕೆಲವರು ತಮ್ಮ ಪ್ರಾಣಕ್ಕೆ ಸಂಚಕಾರವನ್ನು ತಂದುಕೊಳ್ಳುವುದು ಸಹಾ ನಿಜ. ಒಂದಷ್ಟು ಜನರು ತಮ್ಮ ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳಲು, ಜನರ ಗಮನವನ್ನು ತಮ್ಮ ಕಡೆಗೆ ಸೆಳೆಯಲು ಅಥವಾ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳ ಮೂಲಕ ಬಹುಬೇಗ ಜನಪ್ರಿಯತೆಯನ್ನು ಪಡೆಯಬಹುದು ಎನ್ನುವ ಹಂಬಲದಿಂದ ಮಾಡುವ ಕೆಲಸಗಳಿಂದ ಕೆಲವರು ಜೀವಕ್ಕೆ ಅಪಾಯವನ್ನು ತಂದು ಕೊಂಡರೆ ಇನ್ನೂ ಕೆಲವರು ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಗಳು ನಡೆಯುತ್ತಲೇ ಇರುತ್ತದೆ. ಆದರೆ ಇಂತಹವರು ಮಾಡುವ ಹುಚ್ಚಾಟಗಳಿಂದ ಅವರ ಕುಟುಂಬದವರು ಜೀವನ ಪರ್ಯಂತ ನೋವನ್ನು ಅನುಭವಿಸುವಂತೆ ಮಾಡಿ ಬಿಡುತ್ತಾರೆ.

ಕೆಲವೇ ದಿನಗಳ ಹಿಂದೆ ಇಡೀ ದೇಶದಲ್ಲಿ ಸಹೋದರ ಸಹೋದರಿಯರು ರಕ್ಷಾ ಬಂಧನ ಹಬ್ಬವನ್ನು ಬಹಳ ಸಡಗರ ಹಾಗೂ ಸಂಭ್ರಮದಿಂದ ಆಚರಣೆ ಮಾಡಿಕೊಂಡಿದ್ದಾರೆ. ಈ ವೇಳೆ ಸಹೋದರಿಯರು ತಮ್ಮ ಸಹೋದರರ ದೀರ್ಘಾಯುಷ್ಯ ಹಾಗೂ ಯಶಸ್ಸನ್ನು ಹಾರೈಸುತ್ತಾ ರಾಖಿಯನ್ನು ಕಟ್ಟಿದರೆ, ಸಹೋದರರು ತಮ್ಮ ಸಹೋದರಿಯರಿಗೆ ಜೀವನದ ಎಲ್ಲಾ ಹಂತಗಳಲ್ಲೂ ಸಹಾ ರಕ್ಷಣೆಯನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ಆದರೆ ಇಂತಹ ಒಂದು ಶುಭ ದಿನದಂದೆ ಬಿಹಾರದ ಸಾರಣ್ ಜಿಲ್ಲೆಯ ಗ್ರಾಮವೊಂದರಲ್ಲಿ ಅವಘಡವೊಂದು ನಡೆದಿದ್ದು, ಆ ಘಟನೆಯ ದೃಶ್ಯವು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಬಿಹಾರದ ಸಾರಣ್ ಜಿಲ್ಲೆಯ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಮಾಡಿರುವ ಹುಚ್ಚಾಟದ ಪರಿಣಾಮ ಅಥವಾ ಅತಿರೇಕದ ವರ್ತನೆಯ ಪರಿಣಾಮ ಆತ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಹೌದು ರಾಖಿ ಹಬ್ಬದ ದಿನ ವ್ಯಕ್ತಿಯೊಬ್ಬರು ತನ್ನ ಸಹೋದರಿಯರಿಂದ ರಾಖಿ ಕಟ್ಟಿಸಿಕೊಂಡು ಅನಂತರ ಮಾಡಿರುವ ಕೆಲಸ ನೋಡಿ ಜನರು ಸಹಾ ಆತನನ್ನು ಮೂರ್ಖ ಎಂದು ಟೀಕೆ ಮಾಡಿದ್ದಾರೆ. ವೈರಲ್ ವೀಡಿಯೋ ಗಮನಿಸಿದಾಗ ವ್ಯಕ್ತಿಯೊಬ್ಬರು ರಾಖಿ ಹಬ್ಬದ ದಿನ ತನ್ನ ತಂಗಿಯರಿಂದ ತಾನು ರಾಖಿ ಕಟ್ಟಿಸಿಕೊಂಡಿದ್ದು ಮಾತ್ರವಲ್ಲದೇ ತಂಗಿಯರಿಗೆ ಹಾವುಗಳಿಗೆ ರಾಖಿ ಕಟ್ಟಲು ಹೇಳಿದ್ದಾನೆ.

ಈ ಸಂದರ್ಭದಲ್ಲಿ ಆತ ತಂಗಿಯ ಕೈಯಲ್ಲಿ ರಾಖಿ ಕಟ್ಟಿಸಲು ವಿಷದ ಹಾವುಗಳನ್ನು ಹಿಡಿದು ತಂದಿದ್ದಾನೆ. ನಾಗರ ಹಾವುಗಳನ್ನು ಕೈಯಲ್ಲಿ ಹಿಡಿದು ಅವುಗಳಿಗೆ ರಾಖಿ ಯನ್ನು ಕಟ್ಟಲು ಹೇಳಿದಾಗ ಆ ಹುಡುಗಿ ಹಾವಿಗೆ ರಾಖಿಯನ್ನು ಕಟ್ಟುವ ವೇಳೆಯಲ್ಲಿ ಹಾವೊಂದು ಆ ವ್ಯಕ್ತಿಯ ಕಾಲಿನ ಬೆರಳನ್ನು ಕಚ್ಚಿದೆ. ಆದರೆ ಹಾವು ಬೆರಳನ್ನು ಕಚ್ಚಿದರೂ ಆತ ಏನೂ ಆಗಿಲ್ಲ ಎನ್ನುವಂತೆ ಅವುಗಳನ್ನು ಹಿಡಿದು ಓಡಾಡಿದ್ದಾನೆ‌. ಈ ಎಲ್ಲಾ ಘಟನೆಯನ್ನು ಅಲ್ಲಿದ್ದವರು ಫೋನ್ ಗಳಲ್ಲಿ ವೀಡಿಯೋ ಮಾಡಿಕೊಂಡಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ. ಇನ್ನು ಹಾವು ಗಳಿಗೆ ರಾಖಿ ಕಟ್ಟಿಸಲು ತಂದಿದ್ದ ಆ ವ್ಯಕ್ತಿ ಕೂಡಾ ಸ್ವಲ್ಪ ಹೊತ್ತಿನ ನಂತರ ವಿಷದ ಪರಿಣಾಮದಿಂದ ಸತ್ತಿದ್ದಾನೆ ಎನ್ನಲಾಗಿದೆ.

ವಿಡಿಯೋ ನೋಡಿ

ಘಟನೆಯ ವೀಡಿಯೋ ವೈರಲ್ ಆಗಿರುವುದನ್ನು ನೋಡಿದವರು ಸಹಾ ಆ ವ್ಯಕ್ತಿಯ ಅತಿರೇಕದ ವರ್ತನೆಯನ್ನು ಟೀಕೆ ಮಾಡಿದ್ದಾರೆ. ಇನ್ನು ಇಂತಹ ವರ್ತನೆಯನ್ನು ತೋರಿಸುವವರಿಗೆ ನಿಜಕ್ಕೂ ಈ ವೀಡಿಯೋ ಒಂದು ಸರಿಯಾದ ಪಾಠವನ್ನು ನೀಡುವಂತೆ ಇದೆ. ಇದನ್ನು ನೋಡಿದ ನಂತರವಾದರೂ ಜನರು ಇಂತಹ ಹುಚ್ಚಾಟಗಳನ್ನು ಮಾಡಬಾರದು ಎನ್ನುವ ಜಾಗೃತಿಯೊಂದು ಮೂಡಿದರೆ ಸಾಕು.