Video: ಹಾವು ಏಣಿ ಆಟಕ್ಕೆ ಸ್ಪೆಷಲ್ ಗೆಸ್ಟ್ ಎಂಟ್ರಿ, ಐ ಲವ್ ಯು ಎಂದು ನೇರವಾಗಿ ಪ್ರಪೋಸ್ ಮಾಡಿದ ಅಮೂಲ್ಯ!!

ಬಿಗ್ಬಾಸ್ ಈಗ ಹದಿಮೂರನೆಯ ವಾರಕ್ಕೆ ಕಾಲಿಟ್ಟಿದೆ. ಇನ್ನೂ ಎರಡು ವಾರಗಳಲ್ಲಿ ಬಿಗ್ಬಾಸ್ ವಿಜೇತರು ಯಾರೆಂಬುದು ಗೊತ್ತಾಗುವದು. ಈ ಎರಡು ವಾರಗಳಲ್ಲಿ ನಡೆಯುವ ಚಟುವಟಿಕೆ, ಟಾಸ್ಕ್ ತುಂಬಾ ಮುಖ್ಯವಾಗಿವೇ. ಫೈನಲ್ ತಲುಪಬೇಕಾದರೆ ವಾರದ ಟಾಸ್ಕ್ ನಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿ ಗೆಲ್ಲುವದು ಪ್ರತಿಯೊಬ್ಬ ಸ್ಪರ್ಧಿಯ ಕನಸಾಗಿರುತ್ತದೆ. ಪ್ರತಿ ಸ್ಪರ್ಧಿ ಎಲ್ಲರನ್ನೂ ಸೋಲಿಸಿ ತಾನು ಫೈನಲ್ ಗೆಲ್ಲಬೇಕು ಅನ್ನೋ ಛಲ ಹೊತ್ತಿರುತ್ತಾರೆ. ಬಿಗ್ಬಾಸ್ ಮನೆಯಲ್ಲಿ ದಿನದಿನಕ್ಕೆ ಹೊಸ ಹೊಸ ಟಾಸ್ಕ್ ಗಳನ್ನು ಕೊಡುವದರ ಜೊತೆಗೆ ಅಲ್ಲಿರುವ ಸ್ಪರ್ಧಿಗಳ ಮೂಲ್ಯಮಾಪನ ಮಾಡುವದು ತುಂಬಾ ಸರಳವಾಗುತ್ತದೆ. ನಿಜವಾಗಿ ಅಟ ಆಡುತ್ತಿರುವ ಸ್ಪರ್ಧಿಗಳು ಮತ್ತು ಫೆಕ್ ಆಟ ಆಡುತ್ತಿರುವ ಸ್ಪರ್ಧಿಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ಬಿಗ್ಬಾಸ್ ಮನೆಯಲ್ಲಿ ಒಂದು ಟಾಸ್ಕ್ ನೀಡಲಾಯಿತು. ಅದೇನೆಂದರೆ ಹಾವು ಏಣಿ ಆಟ. ಚಿಕ್ಕವರಿದ್ದಾಗ ನಾವು ಸಹ ಹಾವು ಏಣಿ ಆಟ ಆಡುತ್ತವೆ. ಅದಕ್ಕಾಗಿ 1 ರಿಂದ 100 ಅಂಕಿಗಳ ಬಾಕ್ಸ್ ಗಳು ಇರುತ್ತವೆ. ಅಲ್ಲದೆ ಏಣಿ ಮತ್ತು ಹಾವು ಸಹ ಇರುತ್ತವೆ. ಈ ಆಟದಲ್ಲಿ ಮುಖ್ಯವಾದ ಪಾತ್ರ ಡೈಸ್ ನದು. ಡೈಸ್ ನ್ನು ಹಾರಿಸಿ ಎಷ್ಟು ಸಂಖ್ಯೆ ಬರುವದೋ ಅಷ್ಟು ಸಂಖ್ಯೆಗಳಷ್ಟು ನಾವು ಮೂವ ಮಾಡುತ್ತೇವೇ. ಈ ಟಾಸ್ಕ್ ನ ಆಕರ್ಷಣೆ ಹೆಚ್ಚಿಸುವ ಸಲುವಾಗಿ ಬಿಗ್ಬಾಸ್ ಒಬ್ಬ ಅತಿಥಿಯಾಗಿ ಒಬ್ಬರನ್ನು ಮನೆಯೊಳಗೆ ಕಳುಹಿಸಿದ್ದರು. ಕಳುಹಿಸಿದ ವ್ಯಕ್ತಿ ಅಲ್ಲಿದ್ದ ಸ್ಪರ್ಧಿಗಳಿಗೆ ಈ ಟಾಸ್ಕ್ ನಲ್ಲಿ ಉತ್ಸಾಹ ತುಂಬುವದರ ಜೊತೆಗೇ ಅವರನ್ನು ನಗೆಯ ಲೋಕಕ್ಕೆ ಕರೆದುಕೊಂಡು ಹೋಗುವ ಕಾರ್ಯ ಮಾಡಿದ್ದರು. ಅಷ್ಟಕ್ಕೂ ಮನೆಯೊಳಗೆ ಎಂಟ್ರಿಯಾದ ವ್ಯಕ್ತಿ ಯಾರೆಂದರೆ ಕಳೆದ ಬಿಗ್ಬಾಸ್ ವಿನ್ನರ್ ಲ್ಯಾಗ್ ಮಂಜಾ ಅಲಿಯಾಸ್ ಮಂಜು ಪಾವಗಡ.

ಈ ಆಟವನ್ನು ಡೈಸ್ ಹಾಕುವ ಕಾರ್ಯ ಮಂಜಾ ಅವರು ಮಾಡಿದ್ದರು. ಪ್ರತಿಯೊಬ್ಬರೂ ಡೈಸ್ ಬಿದ್ದಷ್ಟು ಮೂವ ಮಾಡಬೇಕೆಂದು ಹೇಳಿದ್ದರು. ಈ ಆಟ ಅತೀ ಉತ್ಸಾಹದಿಂದ ಆಡಿದರು. ಹಾವಿನ ಹಾಗೆ ಮೂವ ಮಾಡುವದು, ಏಣಿಯನ್ನು ಹತ್ತುವ ಅನುಭವವನ್ನು ಮನೆಯಲ್ಲಿಯ ಸ್ಪರ್ಧಿ ತಗೆದುಕೊಂಡರು. ಈ ನಡುವೆ ಒಂದು ಅದ್ಭುತವಾದ ಘಟನೆ ನಡೆಯಿತು ಅದೇನೆಂದರೆ ಮನೆಯಲ್ಲಿಯ ಸ್ಪರ್ಧಿಯಾದ ಅಮೂಲ್ಯ ಅವರು ಮಂಜು ಅವರಿಗೆ ನೆಲದ ಮೇಲೆ ಕಾಲೂರಿ ಐ ಲವ್ ಯು ಅಂತ ಹೇಳಿದರು. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಿರಬಹುದು. ಆದರೆ ಹಾಗೆ ಹೇಳಲು ಕಾರಣವೇನು ಎಂಬುದು ತಿಳಿಯಲು ವಿಡಿಯೋ ನೋಡಿ.

ವೀಡಿಯೋ ನೋಡಿ.