Video: ಹಾವು ಮಾಡಿದ ತಪ್ಪಿಗೆ ಸರಿಯಾಗಿ ಪಾಠ ಕಲಿಸಿದ ಇರುವೆಗಳು; ವಿಡಿಯೋ ವೈರಲ್ !
ಹಾವು ಭಯಾನಕವಾದ ಸರೀಸೃಪ ಪ್ರಾಣಿ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣದಿಂದಾಗಿ ದೊಡ್ಡ ದೊಡ್ಡ ಪ್ರಾಣಿಗಳು ಸಹ ಅದಕ್ಕೆ ಎದುರು ಹಾಕಿಕೊಳ್ಳಲು ಇಷ್ಟ ಪಡುವುದಿಲ್ಲ. ಹಾವಿನ ಒಂದೇ ಒಂದು ಹನಿ ವಿಷವು ಎಂಥದ್ದೇ ಪ್ರಾಣಿಯ ಜೀವ ತೆಗೆದುಕೊಳ್ಳಬಲ್ಲದು. ಆದರೆ ಕಾಣಲು ಕ್ಷುದ್ರವಾದ ಇರುವೆಗಳು ಮಾತ್ರ ಹಾವು ಮಾಡಿದ ತಪ್ಪಿಗಾಗಿ ಸರಿಯಾಗಿ ಪಾಠ ಕಲಿಸಿವೆ. ಸದ್ಯ ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಕಂಡು ಬರುವ ಹಾಗೆ ಹಾವೊಂದು ಆಹಾರದ ಶೋಧದಲ್ಲಿ ತಪ್ಪು ಸ್ಥಳಕ್ಕೆ ಎಂಟ್ರಿ ಮಾಡಿದೆ. ಅದೇ ತಪ್ಪು ಹಾವಿಗೆ ತುಂಬಾ ದುಬಾರಿಯಾಗಿ ಪರಿಣಮಿಸಿದೆ. ಹಾವು ಇರುವೆಗಳ ಮನೆಯಲ್ಲಿ ಪ್ರವೇಶಿಸಿದೆ. ಇದು ಇರುವೆಗಳಿಗೆ ಸ್ವಲ್ಪವೂ ರುಚಿಸಿಲ್ಲ. ಮತ್ತೇನು ಇರುವೆಗಳು ಹಾವಿಗೆ ಚೆನ್ನಾಗಿಯೇ ಪಾಠ ಕಲಿಸಿವೆ. ಒಮ್ಮೆಲೆ ನೂರಾರು ಕಂಟಿರುವೆಗಳು ಹಾವಿನ ಮೇಲೆ ಏಕಕಾಲಕ್ಕೆ ಅಟ್ಯಾಕ್ ಮಾಡಿವೆ. ಹೀಗಾಗಿ ಹಾವು ತಬ್ಬಿಬ್ಬಾಗಿ ತನ್ನ ಬದುಕಿಗಾಗಿ ಮೊರೆ ಇಡುತ್ತಿದೆ. ಇರುವೆಗಳ ಕಡಿತಕ್ಕೆ ಹಾವು ವಿಲವಿಲ ಒದ್ದಾಡುತ್ತಿದೆ. ಇರುವೆಗಳು ಮಾತ್ರ ಹಾವಿಗೆ ಎಲ್ಲಿಬೇಕಾದಲ್ಲಿ ಎಡೆಬಿಡದೆ ಒಂದೇ ಸವನೆ ಕಚ್ಚುತ್ತಿವೆ.
ವೀಡಿಯೋ ನೋಡಿ
View this post on Instagram
ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಎನಿಮಲ್ ಲವರ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಸಾವಿರಾರು ಜನರು ನೋಡಿ ತಮ್ಮ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಒಬ್ಬ ಯೂಸರ್, ವಿಡಿಯೋ ಮಾಡುವದನ್ನು ಬಿಟ್ಟು ಹಾವಿನ ಸಹಾಯ ಮಾಡಬೇಕಾಗಿತ್ತು ಎಂದಿದ್ದಾನೆ.