Video; ಹಿಂದಿನಿಂದ ಕಾಣುವ ಕಾರನ್ನು ಒಮ್ಮೆ ಮುಂದಿನಿಂದಲೂ ನೋಡಿಯೇ ಬಿಡಿ; ಐಡಿಯಾ ಮಾತ್ರ ಯಾರಿಗೂ ಹೇಳಬೇಡಿ.

ದೇಸಿ ಐಡಿಯಾಗಳ ವಿಷಯದಲ್ಲಿ ಭಾರತದ ಕೈಹಿಡಿಯಲು ಯಾರಿಗೂ ಸಾಧ್ಯವಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ವಾಹನದ ವಿಡಿಯೋ ವೈರಲ್ ಆಗುತ್ತಿದೆ. ಈ ದೃಶ್ಯ ನೋಡಿದಾಗ ನಿಮಗೂ ಆಶ್ಚರ್ಯವಾಗಬಹುದು. ಇಟ್ ಹ್ಯಾಪನ್ಸ್ ಓನ್ಲಿ ಇನ್ ಇಂಡಿಯಾ ಈ ಹಾಡು ಸಹ ನಿಮಗೆ ನೆನಪಾಗಬಹುದು. ಏಕೆಂದರೆ ಈ ರೀತಿಯ ಖತರ್ನಾಕ್ ಐಡಿಯಾಗಳು ಬರೀ ನಮ್ಮ ಭಾರತದಲ್ಲಷ್ಟೇ ನೋಡಲು ಸಿಗುತ್ತದೆ.

ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಆದ ಈ ವಿಡಿಯೋದಲ್ಲಿ ತುಂಬಾ ವಿಶೇಷವಿದೆ. ವಿಡಿಯೋದಲ್ಲಿ ಕಂಡುಬರುವ ಈ ವಾಹನವನ್ನು ಹಿಂದಿನಿಂದ ನೋಡಿದಾಗ ಅದು ಕಾರು ನಡೆದಿದೆ ಎಂದು ತಿಳಿದುಬರುತ್ತದೆ. ವಿಡಿಯೋ ಹಾಗೆ ಮುಂದೆ ಸರಿದಂತೆ ಗೊತ್ತಾಗುತ್ತದೆ ಅದೊಂದು ಆಟೋ ಚಲಿಸುತ್ತಿದೆ ಎಂದು. ಪ್ರಸ್ತುತ ವಾಹನದ ದೃಶ್ಯವನ್ನು ಬೇರೊಬ್ಬರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಆಟೋದ ಮಾಲೀಕ ಈ ರೀತಿಯಾಗಿ ತನ್ನ ಆಟೋವನ್ನು ಮಾಡಿಫಾಯ್ ಮಾಡಿದ್ದಾನೆ. ಇದರಲ್ಲಿ ಪ್ರವಾಸ ಮಾಡುವವರು ಕಾರಿನ ಆನಂದವನ್ನು ಸಹ ಪಡೆಯುತ್ತಾರೆ.

ವಿಡಿಯೋ ನೋಡಿ

 

View this post on Instagram

 

A post shared by Comedy Nation (@comedynation.teb)

ಈ ವೀಡಿಯೋವನ್ನು ದೇಸಿ ಜೂಗಾಡ್ ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ವಿಡಿಯೋ ನೋಡಿದ ಒಬ್ಬ ಯೂಸರ್ ಸ್ಕ್ರ್ಯಾಪ್ ನಲ್ಲಿಯ ಕಾರಿನ ಉಪಯೋಗ ಇದಕ್ಕಿಂತ ಒಳ್ಳೆಯದಾಗಿ ಮಾಡಲು ಸಾಧ್ಯವೇ ಇಲ್ಲ ಎಂದಿದ್ದಾನೆ. ಈ ಕ್ರಿಯೇಟಿವಿಟಿಯ ಪ್ರಶಂಸೆ ಆಗಲೇಬೇಕು ಎಂದು ಮತ್ತೊಬ್ಬ ಎಂದಿದ್ದಾನೆ. ಪ್ರಸ್ತುತ ವಿಡಿಯೋಗೆ ಸಾವಿರಾರು ಲೈಕ್ಸ್ ಗಳು ಬಂದಿವೆ.