Video; ಹುಡುಗಿ ಎಂಗೇಜ್ಮೆಂಟ್ ರಿಂಗ್ ತೊಡಿಸಿ ಹುಡುಗನ ಪಾದ ಮುಟ್ಟಿದ ನಂತರ ಹುಡುಗನು ಮಾಡಿದ ಕೃತ್ಯಕ್ಕೆ ತಂದೆ ಮಾಡಿದ ಕಪಾಳಮೋಕ್ಷ!

ಸೋಶಿಯಲ್ ಮೀಡಿಯಾದಲ್ಲಿ ದಿನನಿತ್ಯ ಮದುವೆಗಳಲ್ಲಿ ನಡೆದ ವಿಶೇಷ ಪ್ರಸಂಗಗಳ ವಿಡಿಯೋಗಳು ತುಂಬಾ ವೈರಲ್ ಆಗುತ್ತಿವೆ. ಈಗ ಇಂಟರ್ನೆಟ್ನಲ್ಲಿ ಎಂಗೇಜ್ಮೆಂಟ್ ನ ವಿಡಿಯೋ ಒಂದು ಸದ್ಯ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋ ತುಂಬಾ ತಮಾಷೆಯಿಂದ ಕೂಡಿದೆ.

ವಿಡಿಯೋದಲ್ಲಿ ಎಂಗೇಜ್ಮೆಂಟ್ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ತುಂಬಾ ಅಪರೂಪದ ದೃಶ್ಯ ನೋಡಲು ಸಿಗಲಿದೆ. ಏಕೆಂದರೆ ಈ ದೃಶ್ಯವನ್ನು ನೀವು ಇದಕ್ಕೂ ಮೊದಲು ಎಲ್ಲೂ ನೋಡಿರಲಿಕ್ಕಿಲ್ಲ. ಹುಡುಗಿಯು ಮೊದಲು ಹುಡುಗನಿಗೆ ಎಂಗೇಜ್ಮೆಂಟ್ ರಿಂಗ್ ತೊಡಿಸಿದ ನಂತರ ಹುಡುಗನ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಾಳೆ. ನಂತರ ಹುಡುಗನು ಸಹ ಹುಡುಗಿಗೆ ರಿಂಗ್ ತೊಡಿಸಿ ಅಷ್ಟಕ್ಕೇ ನಿಲ್ಲುವುದಿಲ್ಲ. ಅಲ್ಲಿ ಒಮ್ಮೆಲೆ ಬೇರೆ ದೃಶ್ಯ ಕಂಡುಬರುತ್ತದೆ. ಈ ದೃಶ್ಯ ಇದಕ್ಕೂ ಮೊದಲು ನೋಡಿರಲಿಕ್ಕಿಲ್ಲ. ಸುತ್ತೆಲ್ಲ ಸಂಬಂಧಿಕರು ನಿಂತು ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ. ಅದೇ ಸಮಯಕ್ಕೆ ಹುಡುಗನು ತನ್ನ ಭಾವಿ ಪತ್ನಿಗೆ ತಲೆಬಾಗಿ ಕಾಲುಗಳನ್ನು ಮುಟ್ಟಿ ನಮಸ್ಕರಿಸುತ್ತಾನೆ. ಆಕಸ್ಮಿಕವಾಗಿ ನಡೆದ ಈ ದೃಶ್ಯವನ್ನು ನೋಡಿ ಅಲ್ಲಿಯೇ ಹುಡುಗನ ಹತ್ತಿರ ನಿಂತ ತಂದೆಗೆ ಇದು ಯಾಕೋ ಸರಿ ಎನಿಸುವುದಿಲ್ಲ ಮತ್ತು ಅಲ್ಲಿಯೇ ಮಗನಿಗೆ ಕಪಾಳಮೋಕ್ಷ ಮಾಡಿಬಿಡುತ್ತಾನೆ.

ವಿಡಿಯೋ ನೋಡಿ

 

View this post on Instagram

 

A post shared by Mohan.Kushwaha (@mohan_kushwaha_8555)

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಗಾಳಿಯಂತೆ ವೈರಲ್ ಆಗುತ್ತಿದೆ. ನೇಟಿಜನ್ಸ್ ಗಳಿಗೆ ಈ ವಿಡಿಯೋ ತುಂಬಾನೇ ಇಷ್ಟವಾಗಿದೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ mohan_kushwaha_8555 ಹೆಸರಿನ ಯೂಸರ್ ಶೇರ್ ಮಾಡಿದ್ದಾನೆ. ಈ ವಿಡಿಯೋಗೆ ಇಲ್ಲಿಯವರೆಗೆ 87 ಸಾವಿರ ಲೈಕ್ ಗಳು ಬಂದಿವೆ. ಕೆಲವರು ಹುಡುಗನ ಪರವಹಿಸಿ ಪ್ರಶಂಸೆ ಮಾಡಿದರೆ, ಇನ್ನು ಕೆಲವರು ಹುಡುಗನಿಗೆ ತಮಾಷೆಗೆ ಗುರಿ ಮಾಡುತ್ತಿದ್ದಾರೆ.