Video: ಹೂಮಾಲೆ ಬದಲಿಗೆ ವಧು ವರನ ಕೊರಳಲ್ಲಿ ಕಾಳಿಂಗವನ್ನು ಹಾಕಿದರೆ, ವರ ವಧುವಿನ ಕೊರಳಲ್ಲಿ ಹಾಕಿದ್ದೇನು? ನೋಡಿ.

ಪ್ರತಿಯೊಂದು ಕಡೆ ಮದುವೆಯ ವಿಧಿ ವಿಧಾನಗಳು ತುಂಬಾ ಬೇರೆಬೇರೆಯಾಗಿರುತ್ತದೆ. ಅದರಲ್ಲೂ ಉತ್ತರ ಭಾರತದಲ್ಲಂತೂ ತುಂಬಾ ವಿಚಿತ್ರ ವಿಧಿವಿಧಾನಗಳು ಕಂಡುಬರುತ್ತವೆ. ಈಗ ಮದುವೆಯ ಸಂದರ್ಭದಲ್ಲಿ ವಧು ಮತ್ತು ವರ ಹೂಮಾಲೆಯ ಬದಲಾಗಿ ಬೇರೆಯದನ್ನೇ ಉಪಯೋಗಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಇದೇ ವಿಡಿಯೋ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಓಪನ್ ಮೈದಾನದಲ್ಲಿ ಮದುವೆಯಾಗುತ್ತಿರುವುದು ಕಂಡುಬರುತ್ತಿದೆ. ಮದುಮಕ್ಕಳಿಗೆ ಇಬ್ಬರಿಗೂ ಆಶೀರ್ವದಿಸಲು ತುಂಬಾ ಜನ ಕೂಡಿದ್ದಾರೆ. ಅಷ್ಟರಲ್ಲಿಯೇ ಮದುಮಕ್ಕಳ ಪರಸ್ಪರ ಹೂಮಾಲೆಯನ್ನು ಧರಿಸುವ ಕಾರ್ಯಕ್ರಮ ಶುರುವಾಗುತ್ತದೆ. ಆಗ ನೋಡಲು ವಧು ತನ್ನ ಕೈಯಲ್ಲಿ ವರನ ಕೊರಳಿಗೆ ಹಾಕಲು ಹೂಮಾಲೆಯ ಬದಲಾಗಿ ಕಾಳಿಂಗ ಸರ್ಪವನ್ನು ತೆಗೆದುಕೊಂಡು ನಿಂತಿದ್ದಾಳೆ. ಮತ್ತು ಆತನ ಕೊರಳಿಗೆ ಹಾಕಿಬಿಡುತ್ತಾಳೆ. ಇದಾದನಂತರ ವರನೂ ಸಹ ತನ್ನ ಭಾವಿಪತ್ನಿಯ ಕೊರಳಿಗೆ ಹೂಮಾಲೆಯ ಬದಲಾಗಿ ದೊಡ್ಡದಾದ ಹೆಬ್ಬಾವನ್ನೇ ಹಾಕಿಬಿಡುತ್ತಾನೆ. ಈ ರೀತಿ ಇಬ್ಬರು ಮದುಮಕ್ಕಳು ಮದುವೆಯಲ್ಲಿ ಹೂಮಾಲೆಯನ್ನು ತೊಡಿಸುವ ಕಾರ್ಯಕ್ರಮ ಪೂರ್ಣಗೊಳಿಸುತ್ತಾರೆ.

ವಿಡಿಯೋ ನೋಡಿ

 

View this post on Instagram

 

A post shared by Psycho Bihari (@psycho_biharii)

ಮದುವೆಯಲ್ಲಿ ಈ ರೀತಿಯ ದೃಶ್ಯ ಕಂಡುಬರುವುದು ಬಹುಶಃ ಇದೇ ಮೊದಲ ಸಲ ಇರಬಹುದು. ವಿಡಿಯೋ ನೋಡಿದ ನಂತರ ಪ್ರತಿಯೊಬ್ಬರು ಆಶ್ಚರ್ಯ ವ್ಯಕ್ತಿ ಮಾಡುತ್ತಿದ್ದಾರೆ. ಹಾಗೂ ಕಮೆಂಟ್ ಬಾಕ್ಸ್ ನಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮನಲ್ಲಿ psycho_biharii ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ವಿಡಿಯೋ ಎಲ್ಲಿಯದು ಎಂಬುದು ತಿಳಿದುಬಂದಿಲ್ಲ.