Video; 😳 ಅಬ್ಬಾ! ಮರದ ಮೇಲೆ ಎರಗಿದ ಬರಸಿಡಿಲಿನ ಕ್ಲೋಸ್ ಲೈವ್ ದೃಶ್ಯ ಕ್ಯಾಮೆರಾದಲ್ಲಿ ಸೆರೆ!

ಮಳೆಗಾಲ ಶುರುವಾದರೆ ಸಾಕು ಎಲ್ಲೆಡೆಯು ಗುಡುಗು ಮಿಂಚಿನ ಹಾಗೂ ಸಿಡಿಲಿನ ಆರ್ಭಟ ಹೆಚ್ಚಾಗುತ್ತದೆ. ಮಳೆಗಿಂತಲೂ ಗುಡುಗು ಸಿಡಿಲುಗಳ ಭಯವೇ ಹೆಚ್ಚಾಗಿರುತ್ತದೆ. ಸಿಡಿಲುಗಳಿಂದ ಆಗುವ ಜೀವಹಾನಿ ಅನೇಕ ಸಲ ಸುದ್ದಿ ಸಮಾಚಾರಗಳಲ್ಲಿ ಕೇಳುತ್ತೇವೆ. ಆದರೆ ಆ ದೃಶ್ಯ 99 ಪ್ರತಿಶತ ಜನರು ತಮ್ಮ ಸ್ವಂತ ಕಣ್ಣುಗಳಿಂದ ಕಾಣುವುದೇ ಇಲ್ಲ, ಬರೀ ಅವರಿವರ ಬಾಯಿಯಿಂದ ಹೇಳುವುದನ್ನೇ ಕೇಳುತ್ತಾರೆ ಅಥವಾ ನಾವೂ ಕೇಳುತ್ತೇವೆ. ಇದಕ್ಕೆ ಕಾರಣ ಈ ಸಿಡಿಲು ಬೀಳುವ ಪ್ರಕ್ರಿಯೆ ಎಲ್ಲವೂ ಕ್ಷಣಾರ್ಧದಲ್ಲಿ ನಡೆದು ಹೋಗುತ್ತದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಬರಸಿಡಿಲಿನ ವಿಡಿಯೋ ಒಂದು ಸೋಶಿಯಲ್ ಮೀಡಿಯಾದ ವಾಚಕರಾದ ನಿಮಗಾಗಿ ತಂದಿದ್ದೇವೆ ನೋಡಿ.

ಈ ವಿಡಿಯೋದ ದೃಶ್ಯದಲ್ಲಿ ಒಂದು ಮರ ಕಾಣುತ್ತಿದೆ. ವಿಡಿಯೋ ಪ್ಲೇ ಆಗುತ್ತಲೇ ಮರದ ಮೇಲೆ ಭಯಾನಕವಾಗಿ ಸಿಡಿಲು ಎರಗಿದೆ. ಈ ಸಂದರ್ಭದಲ್ಲಿ ಭಯ ಹುಟ್ಟುವಂತಹ ಶಬ್ದದೊಂದಿಗೆ ಮರದ ಬೊಡ್ಡೆಯಲ್ಲಿ ಜೋರಾದ ಬಾಂಬ್ ಸ್ಪೋರ್ಟ್ ಆಗುವಂತಹ ದೃಶ್ಯ ಕಂಡುಬರುತ್ತದೆ. ಪ್ರಸ್ತುತ ವಿಡಿಯೋ ಒಮ್ಮೆ ನೋಡಿದಾಗ ಗೊತ್ತಾಗುವುದಿಲ್ಲ ಅದಕ್ಕಾಗಿ ಈ ವಿಡಿಯೋ ನೆಟ್ಟಿಗರು ಕನಿಷ್ಠ ನಾಲ್ಕೈದು ಬಾರಿಯಾದರೂ ನೋಡುತ್ತಿದ್ದಾರೆ. ಹಿರಿಯರು ಅದಕ್ಕಾಗಿಯೇ ಮೊದಲಿನಿಂದಲೂ ಮಳೆ ಬರುವಾಗ ಯಾವತ್ತೂ ಮರದ ಅಡಿಯಲ್ಲಿ ನಿಲ್ಲಬೇಡಿ ಎಂಬ ಹಿತನುಡಿಯನ್ನು ಹೇಳುತ್ತಾರೆ. ಕಾರಣ ಸಿಡಿಲು ಹೆಚ್ಚಾಗಿ ಮರದ ಮೇಲೆಯೇ ಬೀಳುತ್ತದೆ. ಈ ದೃಶ್ಯದ ವರ್ಣನೆ ಮಾಡುವುದಕ್ಕಿಂತ ನೀವೇ ನಿಮ್ಮ ಕಣ್ಣುಗಳಿಂದ ಒಮ್ಮೆ ನೋಡಿ ಆಗ ಗೊತ್ತಾಗುತ್ತದೆ…

ವಿಡಿಯೋ ನೋಡಿ

 

View this post on Instagram

 

A post shared by Dallas Texas TV (@dallastexas_tv)

ಸಿಡಿಲಿನ ಈ ಭಯ ಹುಟ್ಟಿಸುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ dallastexas_tv ಹೆಸರಿನ ಖಾತೆಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ 12.9 ಮಿಲಿಯನ್ ಜನರು ವೀಕ್ಷಿಸಿದ್ದು ಲಕ್ಷಾವಧಿ ಜನರು ಲೈಕ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋದಲ್ಲಿ ಮರದ ಮೇಲೆ ಬೀಳುವ ಸಿಡಿಲಿನ ದೃಶ್ಯವು ತುಂಬಾ ಹತ್ತಿರದಿಂದ ಶೂಟ್ ಆಗಿದೆ.