Video; 16 ನೇ ಶತಮಾನದಲ್ಲಿ ನಿರ್ಮಿತ ಕೋಟೆಯಲ್ಲಿಯ ಪುರಾತನ ಶೌಚಾಲಯದ ಭಾರತೀಯ ಅಭಿಯಾಂತ್ರಿಕಿಯ ಅದ್ಭುತ ನಮೂನೆ ನೋಡಿ.

ಜಗತ್ತಿನಲ್ಲಿಯೇ ಅತೀ ಪ್ರಾಚೀನವಾದ ಸಿಂಧೂ ಕಣಿವೆ ನಾಗರಿಕತೆ ಹರಪ್ಪಾ ಮತ್ತು ಮೋಹೊಂಜೋದಾರೋ ಎಲ್ಲರಿಗೂ ಗೊತ್ತೇ ಇದೆ. ನಂತರದ ಸಮಯದಲ್ಲಿ ಹಲವಾರು ಸಾಮ್ರಾಜ್ಯಗಳು ಭಾರತದಲ್ಲಿ ಹುಟ್ಟಿದವು, ಬೆಳೆದವು, ಜೊತೆಗೆ ಭಾರತವನ್ನೂ ಬೆಳೆಸಿದವು. ಅವುಗಳಲ್ಲಿ ಕೆಲವು ಭಾರತದ ಹೆಮ್ಮೆಯನ್ನು ಪ್ರಪಂಚದ ತುಂಬಾ ಸಾರಿದವು. ಭಾರತ ಭೂಮಿ ಪುರಾತತ್ವ ರತ್ನಗಳಲ್ಲಿ ಒಂದಾಗಿದೆ. ಇಲ್ಲಿಯ ಪುರಾತನ ಕೋಟೆಗಳಾಗಲಿ, ದೇವಾಲಯಗಳಾಗಲಿ ಅದ್ಭುತ ಇಂಜಿನಿಯರ್ ನಿಂದ ತಯಾರಾಗಿರುವ ವಿಶೇಷ ನಮೂನೆಗಳು ಜಗತ್ತಿಗೆ ಸದಾಕಾಲ ಆಶ್ಚರ್ಯವನ್ನು ಉಂಟು ಮಾಡಿವೆ.

ಭಾರತವು ಸಾವಿರಕ್ಕೂ ಹೆಚ್ಚು ಪುರಾತತ್ವ ಶಾಸ್ತ್ರದ ತಾಣಗಳನ್ನು ಹೊಂದಿದೆ. ಪ್ರಾಚೀನ ಕಾಲದಿಂದಲೂ ಈ ನಮ್ಮ ಈ ಭೂಪ್ರದೇಶವು ವಿವಿಧ ಸಾಮ್ರಾಜ್ಯಗಳ ನಡುವೆ ನಡೆದ ಘನಘೋರ ಯುದ್ಧಗಳಿಗೆ ಮತ್ತು ಸೋಲು-ಗೆಲುವಿಗೆ ಸಾಕ್ಷಿಯಾಗಿ ನಿಂತಿವೆ. ಕಾಲಕಾಲಕ್ಕೆ ಹಲವಾರು ರಾಜಮನೆತನಗಳು, ಸಂಸ್ಕೃತಿಗಳು ಪ್ರವರ್ಧಮಾನಕ್ಕೆ ಬಂದವು. ಈ ರಾಜಮನೆತನಗಳು, ಸಂಸ್ಕೃತಿಗಳು ಭಾರತ ಭೂಮಿಗೆ ವಿಭಿನ್ನ ತಾಂತ್ರಿಕ ಮತ್ತು ವಾಸ್ತುಶಿಲ್ಪಗಳ ಕೊಡುಗೆಯನ್ನು ನೀಡಿ ಹೋಗಿವೆ.

ಪುರಾತನ ಕಾಲದಲ್ಲಿ ರಾಜರಿಗೆ ಅಥವಾ ರಾಜಮನೆತನಗಳಿಗೆ ಸುರಕ್ಷೆಯನ್ನು ನೀಡುವ ಮಹತ್ವದ ಜವಾಬ್ದಾರಿಯ ಕೆಲಸ ಆಗಿನ ಬೃಹತ್ ಕೋಟೆಗಳ ಮೇಲಿತ್ತು. ಈ ಕೋಟೆಗಳು ಎಷ್ಟೊಂದು ಭವ್ಯವಾಗಿದ್ದವು ಎಂಬುದನ್ನು ವರ್ಣಿಸಲಸಾಧ್ಯ. ಈಗಲೂ ಈ ಕೋಟೆಗಳು ಕಾಲದ ಗರ್ಭದಲ್ಲಿ ಹಾಗೆಯೇ ಎದೆ ತಟ್ಟಿ ತಮ್ಮ ಇತಿಹಾಸವನ್ನು ಹೇಳುತ್ತ ನಿಂತಿವೆ.

ಸದ್ಯ ನಿಮಗಾಗಿ ಕೋಟೆಯೊಂದರಲ್ಲಿಯ ಅದ್ಭುತ ಇಂಜಿನಿಯರ್ ಐಡಿಯಾದ ದೃಶ್ಯವೊಂದನ್ನು ಈ ಲೇಖನದಲ್ಲಿ ತಂದಿದ್ದೇವೆ. ಪ್ರಸ್ತುತ ವೀಡಿಯೊದಲ್ಲಿಯ ದೃಶ್ಯ ನಿಮಗೂ ಆಶ್ಚರ್ಯ ಹುಟ್ಟಿಸುತ್ತದೆ. ವ್ಯಕ್ತಿಯೊಬ್ಬ ಕೋಟೆಯ ಕಿರಿದಾದ ಇಕ್ಕಟ್ಟಿನ ಸಂದಿಯಲ್ಲಿ ಸೇರುತ್ತಾನೆ. ಅಲ್ಲಿರುವ ಕಿಂಡಿಯಿಂದ ಹೊರಗಿನ ವಿಶಾಲ ಸಮುದ್ರದ ದೃಶ್ಯ ಕಣ್ಣಿಗೆ ಕಂಡು ಬರುತ್ತದೆ. ಅಲ್ಲಿ ಸ್ವಲ್ಪ ಮಗ್ಗುಲಿಗೆ ಕ್ಯಾಮೆರಾ ತಿರುಗಿಸಿದಾಗ ಕಾಣುತ್ತದೆ 16 ನೇ ಶಮಾನದಲ್ಲಿಯ ಶೌಚಾಲಯ. ಅದರ ಆಳತೆ ನೋಡಿದರೆ ಡಕ್ಟ್ ಪೂರ್ತಿ ಕೆಳಗೆ ಅಂದರೆ ಸಮುದ್ರದ ನೀರು ಅಲ್ಲಿ ಆಡಿ ತನ್ನಂತಾನೆ (ಆಟೋಮ್ಯಾಟಿಕ್) ಸ್ವಚ್ಚವಾಗುವ ವ್ಯವಸ್ಥೆ ಕಲ್ಪಿಸಿದ್ದಾರೆ. ಇದು ಬಹುಶಃ ಆಪತ್ಕಾಲದಲ್ಲಿ ಉಪಯೋಗಕ್ಕೆ ಬರುವ ಶೌಚಾಲಯ ಎನಿಸುತ್ತದೆ. ಪ್ರಸ್ತುತ ವಿಡಿಯೋದಲ್ಲಿ ಕಂಡು ಬರುತ್ತಿರುವ ಈ ಕೋಟೆ ನಿಶ್ಚಿತವಾಗಿ ಎಲ್ಲಿಯದು ಎಂದು ತಿಳಿದು ಬರುತ್ತಿಲ್ಲ. ಆದರೆ 100% ಈ ಕೋಟೆ ಮಹಾರಾಷ್ಟ್ರದ ಕರಾವಳಿ ತೀರದಲ್ಲಿಯದು ಎಂದು ಹೇಳಬಹುದು.

ನೋಡಿ ಅಸಾಮಾನ್ಯ ಕೋಟೆಯ ವಿಶೇಷ ವಿಡಿಯೋ…

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಆತರಂಗಿ ಟ್ರೇಕರ್ ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರು ತಮ್ಮ ಆಶ್ಚರ್ಯವನ್ನು ವ್ಯಕ್ತ ಮಾಡಿದ್ದಾರೆ. ಕಾಮೆಂಟ್ ಬಾಕ್ಸ್ ನಲ್ಲಿ ಈ ಕೋಟೆ ಎಲ್ಲಿಯದು? ಎಂದು ನೆಟ್ಟಿಗರು ಅಷ್ಟೇ ಆಶ್ಚರ್ಯದಿಂದ ಕೇಳಿದ್ದಾರೆ.