Video; 2.2 ಮಿಲಿಯನ್ ವೀಕ್ಷಣೆ; ತನ್ನ ಬೈಕ್ ಹಾಗೆ ತಂದು ಹೀಗೆ ಜಲಸಮಾಧಿ ಮಾಡಿ ನಿಂತುಬಿಟ್ಟ…ಪ್ಯಾಲಿಯಂತೆ.

ಮುಂದಿನ ಅನಾಹುತದ ಬಗ್ಗೆ ಅಥವಾ ಫಲಿತಾಂಶದ ಗೊತ್ತಿದ್ದರೂ ಸಹ ಕೆಲವರು ಕೆಲವೊಂದು ಸಂದರ್ಭದಲ್ಲಿ ತುಂಬಾ ಮೂರ್ಖರ ಹಾಗೆ ವರ್ತಿಸುತ್ತಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ನಡೆದ ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲಾಗುತ್ತವೆ. ಅದರಲ್ಲೂ ರಸ್ತೆ ಮೇಲೆ ತುಂಬಿ ಹರಿಯುತ್ತಿರುವ ನೀರಿನಲ್ಲಿ ಅನೇಕ ಮೂರ್ಖರೂ ದಾಟಿ ಹೋಗುವ ದುಸ್ಸಾಹಸ ಮಾಡಿ ಅಪಾಯಕ್ಕೆ ಸಿಲುಕಿದ ದುರ್ಘಟನೆಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತದೆ.

ಈಗ ನೋಡಲಿರುವ ವಿಡಿಯೋ ಈ ಮೇಲೆ ಹೇಳಿದ ಉದಾಹರಣೆಗೆ ತಕ್ಕ ಕನ್ನಡಿಯಾಗಿದೆ. ಈ ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ಮಳೆಯ ಕಾರಣದಿಂದಾಗಿ ರಸ್ತೆಯ ಮೇಲೆ ಎಲ್ಲೆಡೆಯೂ ನೀರು ತುಂಬಿ ರಭಸದಿಂದ ಹರಿಯುತ್ತಿದೆ. ಇಂಥ ಪ್ರಸಂಗದಲ್ಲಿ ಯಾರೇ ಆಗಲಿ ಯಾವುದೇ ರೀತಿಯ ವಾಹನದ ಮೇಲೆ ಕುಳಿತು ಸಂಚಾರ ಮಾಡುವ ಮೊದಲು ಹತ್ತು ಸಲ ಯೋಚನೆ ಮಾಡುತ್ತಾರೆ. ಆದರೆ ಈ ಬೈಕ್ ಸವಾರ ಯಾವುದೇ ರೀತಿಯ ವಿಚಾರ ಮಾಡದೇ ರಸ್ತೆ ದಾಟಲು ಬೈಕ್ ಮೇಲೆ ನೇರ ನೀರಿನಲ್ಲಿಯೇ ಇಳಿದುಬಿಟ್ಟಿದ್ದಾನೆ. ಮತ್ತೇನು ಮುಂದೆ ನಡೆಯುವ ದೃಶ್ಯವನ್ನು ನೀವೇ ನೋಡಿ ಈ ವಿಡಿಯೋದಲ್ಲಿ…

ಬೈಕ್ ಸವಾರ ಹಾಗೆಯೇ ಮುಂದೆ ಬರಲು ನಿಧಾನವಾಗಿ ನೀರಿನ ರಭಸಕ್ಕೆ ಗಾಡಿಯು ಬ್ಯಾಲೆನ್ಸ್ ಕಳೆದುಕೊಳ್ಳಲು ಶುರುವಾಗಿದೆ. ಹೀಗಾಗಿ ಬೈಕ್ ಸವಾರನು ಆತ್ಮವಿಶ್ವಾಸ ಕಳೆದುಕೊಂಡು ಹಾಗೆಯೇ ನೀರು ಮತ್ತು ಬೈಕಿನ ಜೊತೆಗೆ ಮುಂದೆ ಹೋಗುತ್ತಿದ್ದಾನೆ. ಕೊನೆಗೆ ತನ್ನ ಪ್ರಯತ್ನ ಅಥವಾ ಯಶಸ್ಸು ಕೈಗೂಡುವುದಿಲ್ಲ ಎಂಬ ಸತ್ಯ ಅರಿತಾಗ ಬೈಕಿಗೆ ಜಲ ಸಮಾಧಿ ಮಾಡಿಬಿಟ್ಟಿದ್ದಾನೆ. ತಾನು ಮಾತ್ರ ಪೆದ್ದನಾಗಿ ಮಂಗನ ಹಾಗೆ ಕೈ ಕೈ ಹಿಚುಕಿ ಕೊಳ್ಳುತ್ತಾ ಹುಚ್ಚನಂತೆ ನಿಂತುಬಿಟ್ಟಿದ್ದಾನೆ.

ವಿಡಿಯೋ ನೋಡಿ

 

View this post on Instagram

 

A post shared by Pushkar Mevody (@pushkarmevody)

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 2.2 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಸುಮಾರು 75,000 ಹೆಚ್ಚು ಜನರು ವಿಡಿಯೋಗೆ ಮೆಚ್ಚಿಗೆ ನೀಡಿದ್ದಾರೆ.