Video; ಭಕ್ತನ ವಿನಂತಿಗೆ ಓ ಗೊಟ್ಟು ತಾಯಿ ಸಪ್ತಶೃಂಗಿ ಮಾತೆ ನೀಡಿದಳು ವರ; ನೋಡಿ ಈ ಅದ್ಭುತ ದೃಶ್ಯ…

ಜಗತ್ತು ನಂಬಿಕೆಯ ಮೇಲೆಯೇ ನಿಂತಿದೆ ಎನ್ನಬಹುದು. ವ್ಯಕ್ತಿಯ ಸಾವು ಯಾವಾಗ ಎಂಬುದನ್ನು ಯಾವುದೇ ವಿಜ್ಞಾನವು ಕರಾರುವಾಕ್ಕಾಗಿ ಹೇಳತೀರದು. ಆದರೂ ನಾವು ನಾಳೆಯ ಬಗ್ಗೆ ಯೋಚಿಸುತ್ತ, ನಾಳಿನ ಅಗತ್ಯವನ್ನು ಪೂರೈಸಲು ಇಂದು ಪ್ರಯತ್ನಿಸುತ್ತಲೇ ಇರುತ್ತೇವೆ, ಶ್ರಮಿಸುತ್ತಲೇ ಇರುತ್ತೇವೆ. ಇಲ್ಲಿ ನಾವು ನೆನೆಯುವ ದೇವರು ಸಹ ನಮ್ಮ ನಂಬಿಕೆಯ ಮೇಲೆ ಇರುತ್ತಾನೆ. ಕಾರಣ ನಂಬಿಕೆಯೆಂಬುದು ಮನುಷ್ಯನ ಪ್ರತಿ ಹೆಜ್ಜೆಯ ಶಕ್ತಿ. ಅದು ಸತ್ಯದೆಡೆಗೆ ಇದ್ದಾಗ ಇನ್ನೂ ಬಲವಾಗಿರುತ್ತದೆ. ಅದರ ಪರಿಣಾಮವೂ ಫ‌ಲದಾಯಕವಾಗಿರುತ್ತದೆ.

ದೋಣಿಯಲ್ಲಿ ನದಿ ದಾಟುವಾಗ ಅಂಬಿಗನ ಮೇಲೆ ನಂಬಿಕೆ ಇಟ್ಟಿರುತ್ತೇವೆ. ಒಂದು ವೇಳೆ ಮನದಲ್ಲಿ ಏನಾದರೂ ಅನಾಹುತವಾಗುವದೇ? ಅಂಬಿಗನಿಂದ ಅದನ್ನು ತಪ್ಪಿಸಲು ಸಾಧ್ಯವೇ? ಎಂಬ ಅಪನಂಬಿಕೆ ನಮ್ಮನ್ನು ಆವರಿಸಿದರೆ ಆಯ್ತು ನದಿಯ ದಡ ಸೇರುವತನಕವೂ ವ್ಯಕ್ತಿ ಮನದಲ್ಲಿ ನರಕಯಾತನೆಯನ್ನೇ ಅನುಭವಿಸಬೇಕಾಗುತ್ತದೆ.

ಜಗತ್ತು ಯಾವುದರ ಮೇಲೆ ನಿಂತಿದೆ? ಎಂದು ಕೇಳಿದರೆ ಹಲವಾರು ಉತ್ತರಗಳು ಸಾಲಾಗಿ ಹೊಳೆಯುತ್ತಲೇ ಹೋಗುತ್ತವೆ. ಆದಿಶೇಷನ ಮೇಲೆ, ಸಮುದ್ರದಲ್ಲಿ, ಸೌರಮಂಡಲದಲ್ಲಿ, ಗುರುತ್ವಾಕರ್ಷಣೆಯಲ್ಲಿ ಹೀಗೆ ಹಲವಾರು ಉತ್ತರಗಳು ದೊರೆಯುವುದು ಸಹಜ. ದೈವಿಕವಾಗಿ ನಾವು, ಈ ಭೂಮಂಡಲವು ಆದಿಶೇಷನ ಮೇಲೆ ನಿಂತಿದೆ, ಆತನೇನಾದರೂ ತಲೆಯಲ್ಲಾಡಿಸಿ ಬಿಟ್ಟರೆ, ಭೂಮಿ ನೀರಿನಲ್ಲಿ ಮುಳುಗಿ ಸರ್ವನಾಶವಾಗುತ್ತದೆ ಎಂದು ನಂಬಿದ್ದೇವೆ. ಅಂದರೆ ಇಲ್ಲಿ ನಂಬಿಕೆ ಎಂಬುದು ಬಲವಾದ ಅಂಶ.

ಮನುಷ್ಯ ಏನೇ ಸಂಶೋಧನೆ ಮಾಡಿ ಕರಾರುವಾಕ್ಕಾಗಿ ಭೂಮಿಯಲ್ಲಿನ ಘಟನೆಗಳಿಗೆ ವೈಜ್ಞಾನಿಕವಾದ ಕಾರಣಗಳನ್ನು ಎದುರಿಗಿಟ್ಟರೂ ಅವೆಲ್ಲವನ್ನೂ ಸತ್ಯವೆಂದು ಒಪ್ಪಿಕೊಳ್ಳುವಲ್ಲಿ ನಂಬಿಕೆ ಕೆಲಸ ಮಾಡಲೇಬೇಕು. ನಂಬಿಕೆ ಎಂಬುದು ಮನಸ್ಸಿಗೆ ಸಂಬಂಧಿಸಿದ್ದು. ಸದ್ಯ ಇಲ್ಲಿ ನೋಡುವ ಒಂದು ವಿಡಿಯೋ ನೋಡಿದಾಗ ನಂಬಿಕೆಯ ಬಗ್ಗೆ ಮತ್ತಷ್ಟು ಮನಸ್ಸು ದೃಢವಾಗುತ್ತದೆ.

ಪ್ರಸ್ತುತ ವಿಡಿಯೋದಲ್ಲಿ ಭಕ್ತನೊಬ್ಬ ಮಹಾರಾಷ್ಟ್ರದ ಪರಭಣಿ ಜಿಲ್ಲೆಯಲ್ಲಿರುವ ಸಪ್ತಶೃಂಗಿ ಮಾತೆಯ ಚರಣಗಳಲ್ಲಿ ವಿಧೇಯತೆಯಿಂದ ನಮಿಸಿ ಕೊರಳಲ್ಲಿಯ ಹೂವಿನ ಹಾರಕ್ಕಾಗಿ ಬೇಡುತ್ತಾ ಕೈ ಚಾಚುತ್ತಿದ್ದಾನೆ. ತಾಯಿ ಭಕ್ತನಿಗಾಗಿ ನಿನ್ನ ಕೊರಳಲ್ಲಿಯ ಹಾರನ್ನು ಕೊಟ್ಟುಬಿಡು, ಅಮ್ಮ ತಾಯಿ ದಯೆ ಮಾಡು ಎಂದು ಒಂದೇ ಸವನೆ ಭಕ್ತ ಗೋಗರೆಯುತ್ತಾನೆ. ಭಕ್ತನ ಈ ಮನವಿಗೆ ತಾಯಿ ಹಠಾತ್ ಕೊರಳಲ್ಲಿಯ ಹೂಮಾಲೆಯನ್ನು ಇಳಿಸಿ ಕೊಟ್ಟಿದ್ದಾಳೆ. ಈ ದೃಶ್ಯ ನಿಜಕ್ಕೂ ನೋಡಲು ಅದ್ಭುತವಾಗಿದೆ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ವೀಡಿಯೋವನ್ನು saptashrungimata ಹೆಸರಿನ ಐಡಿಯಿಂದ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ ಭಕ್ತರಿಗೆ ತುಂಬಾ ಇಷ್ಟವಾಗಿರುವ ಕಾರಣ ಇಲ್ಲಿಯವರೆಗೆ ಮಿಲಿಯನ್ ಮಿಲಿಯನ್ ಸಂಖ್ಯೆಯಲ್ಲಿ ವೀಕ್ಷಣೆ ಪಡೆದಿದ್ದಲ್ಲದೆ ಸುಮಾರು 2.2 ಮಿಲಿಯನ್ ಗೂ ಮೀರಿ ಮೆಚ್ಚುಗೆಯನ್ನು ಗಳಿಸಿದೆ.