Video; ಸಂಪ್ರದಾಯ ಮುಂದುವರಿಸಿದ ಪಾಕ್ ಕ್ರಿಕೆಟ್ ಆಟಗಾರ್ತಿಯರು; ಒಂದೇ ದಿಕ್ಕಿನೆಡೆಗೆ ಓಡಿ ವಿಕೆಟ್ ಕಳೆದುಕೊಂಡ ಬ್ಯಾಟರ್ ಗಳು!
ಕ್ರಿಕೆಟ್ ಬುದ್ಧಿವಂತಿಕೆಯ ಆಟವಾಗಿದ್ದು, ಇಲ್ಲಿ ತನ್ನ ಸಹಆಟಗಾರರೊಂದಿಗೆ ಉತ್ತಮ ಬಾಂಡಿಂಗ್ ಹೊಂದುವುದು ಬಹಳ ಮುಖ್ಯವಾಗಿದೆ. ಅದರಲ್ಲೂ ಬ್ಯಾಟಿಂಗ್ ಮಾಡುವಾಗ ಎದುರಿಗಿರುವ ವ್ಯಕ್ತಿಯೊಂದಿಗೆ ಉತ್ತಮ ಹೊಂದಾಣಿಕೆಯನ್ನು ಹೊಂದಿರಬೇಕು. ಆದರೆ ಹಲವು ಬಾರಿ ಆಟಗಾರರು ಇದರಲ್ಲಿ ತಪ್ಪಿ ವಿಕೆಟ್ ಕಳೆದುಕೊಂಡು ಟ್ರೊಲ್ ಗೆ ದಾರಿ ಮಾಡಿಕೊಳ್ಳುತ್ತಾರೆ. ಇಂಥದ್ದರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ತುಂಬಾ ಮುಂಚೂಣಿಯಲ್ಲಿದೆ. ಈಗ ಇದೇ ಸಂಪ್ರದಾಯವನ್ನು ಪಾಕಿಸ್ತಾನದ ಮಹಿಳಾ ಕ್ರಿಕೆಟ್ ಮಣಿಗಳು ಮುಂದುವರಿಸಿಕೊಂಡು ಹೊರಟಿದ್ದಾರೆ ಎಂದರೆ ತಪ್ಪಾಗುವುದಿಲ್ಲ.
ಸದ್ಯ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾದ ಮಧ್ಯೆ ನಡೆದ ಪಂದ್ಯದಲ್ಲಿ ಇಂಥ ಒಂದು ದೃಶ್ಯ ನೋಡಲು ಸಿಕ್ಕಿದೆ. ಹೀಗಾಗಿ ಈಗ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು ನಗೆ ಪಾಟಲಿಗೆ ಈಡಾಗಿದೆ.
ರನ್ ಔಟ್ ಹೇಗಾಗಿದ್ದಾರೆ ನೋಡಿ…
Oh no!
A mix-up in the middle for Pakistan sees both Batters stranded at the non-strikers end!#AUSvPAK pic.twitter.com/JCKKldbuSI
— cricket.com.au (@cricketcomau) January 16, 2023
ವಾಸ್ತವವಾಗಿ, ಪಾಕಿಸ್ತಾನದ ಬ್ಯಾಟಿಂಗ್ ನಡೆದ ಸಮಯದಲ್ಲಿ, ನಿದಾ ದಾರ್ ಮತ್ತು ಕೈನಾತ್ ಇಮ್ತಿಯಾಜ್ ರನ್ ಔಟ್ಗೆ ಬಲಿಯಾದರು. ವಾಸ್ತವವಾಗಿ ಇಬ್ಬರೂ ಒಂದೇ ಕ್ರೀಸ್ನಲ್ಲಿದ್ದರು. ನಿದಾ ದಾರ್ ಆಫ್ಸೈಡ್ನಲ್ಲಿ ಚೆಂಡನ್ನು ಹೊಡೆದು ರನ್ ತೆಗೆದುಕೊಳ್ಳಲು ಓಡಿಹೋದರು, ಆದರೆ ನಾನ್-ಸ್ಟ್ರೈಕಿಂಗ್ ಎಂಡ್ನಲ್ಲಿ ನಿಂತಿದ್ದ ಅವಳ ಜೊತೆಗಾತಿ ಕೈನಾತ್ ಕೆಲವು ಹೆಜ್ಜೆಗಳನ್ನು ಮುಂದೆ ಹಾಕಿದ ನಂತರ ಒಡದೇ ಅಲ್ಲಿಯೇ ನಿಂತರು. ಆಸ್ಟ್ರೇಲಿಯನ್ನರಿಗೆ ನಿದಾ ದಾರ್ ಅವರ ವಿಕೆಟ್ ಮಿಕ್ಸ್ ಅಪ್ ನಲ್ಲಿ ಸಿಕ್ಕಿತು, ಆದರೆ ಪರಾಮರ್ಶಿಸಿ ನೋಡಿದ ನಂತರ ಕೈನಾತ್ ಇಮ್ತಿಯಾಜ್ ಔಟ್ ಎಂದು ಘೋಷಿಸಲಾಯಿತು. ಇದಕ್ಕೂ ಮೊದಲು, ಪಾಕಿಸ್ತಾನದ ಪುರುಷರ ತಂಡವು ಹಲವಾರು ಬಾರಿ ಇದೇ ರೀತಿಯ ರನೌಟ್ಗೆ ಬಲಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಮಹಿಳೆಯರ ಕ್ರಿಕೆಟ್ ಪಂದ್ಯದಲ್ಲಿ ಈ ದೃಶ್ಯ ಕಂಡು ಬಂದ ನಂತರ ಪುರುಷರ ಕ್ರಿಕೆಟ್ ತಂಡದ ಸಂಪ್ರದಾಯವನ್ನು ಇವರೂ ಸಹ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎನ್ನಲಾಗುತ್ತಿದೆ.