Video; Don’t miss last scene! ಹೊಸದಾಗಿ ಮದುವೆಯಾಗಿ ಬಂದ ನವವಧು ಮೊದಲ ಬಾರಿಗೆ ಸೆಗಣಿಯಲ್ಲಿ ಕೈ ಹಾಕಿ ಸಾರಿಸುವ ದೃಶ್ಯ..!

ಭಾರತ ಸನಾತನ ಪರಂಪರೆಗಳ ನೆಲೆಬೀಡಾಗಿದೆ. ಇಲ್ಲಿ ಪ್ರತಿಯೊಂದು ಸಂಪ್ರದಾಯ ಹಾಗೂ ಪರಂಪರೆಗಳಿಗೆ ತುಂಬಾ ಮಾನ್ಯತೆ ನೀಡಲಾಗುತ್ತದೆ. ಪುರಾತನ ಕಾಲದಿಂದಲೂ ನಡೆದು ಬಂದ ಸಂಪ್ರದಾಯಗಳನ್ನು ತುಂಬಾ ಶ್ರದ್ಧೆಯಿಂದ ಆಚರಣೆ ಮಾಡಲಾಗುತ್ತದೆ. ಯಾವುದೇ ಶುಭಕಾರ್ಯಗಳು ಮನೆಯಲ್ಲಿ ಜರಗುವದಿದ್ದರೆ ಕೆಲವರು ಹಿರಿಯರು ಈಗಲೂ ಆ ಕಾರ್ಯಕ್ರಮಗಳನ್ನು ತುಂಬಾ ಸಂಪ್ರದಾಯ ಬದ್ಧವಾಗಿ ಹಾಗೂ ಸಾಂಗೋಪಾಂಗವಾಗಿ ನಡೆಸಲು ಇಷ್ಟಪಡುತ್ತಾರೆ.

ಅದರಲ್ಲೂ ಕೆಲವು ಶುಭ ಕಾರ್ಯಗಳನ್ನು ನವವಧು ಮತ್ತು ವರಗಳಿಂದಲೇ ಮಾಡಿಸುವುದು ಒಂದು ಪದ್ಧತಿ. ಮನೆಯ ಹಿರಿಯರು ಕೆಲವೊಂದು ಮಹತ್ವದ ಶುಭ ಕಾರ್ಯಗಳ ಜವಾಬ್ದಾರಿಯನ್ನು ಚಿಕ್ಕವರ ಮೇಲೆ ಹೊರಿಸುತ್ತಾರೆ. ನಮ್ಮ ಆಚರಣೆಗಳನ್ನು, ಪದ್ಧತಿಗಳನ್ನು ಮುಂದೆಯೂ ಉಳಿಸಿಕೊಂಡು ಮತ್ತು ಯುವ ಜನಾಂಗ ಮುಂದೆ ಮುಂದೆ ಸಾಗಿಸಿಕೊಂಡು ಹೋಗಬೇಕೆಂಬ ಉದ್ದೇಶ ಹಿರಿಯರದ್ದಾಗಿರುತ್ತದೆ. ಇದೇ ಕಾರಣದಿಂದಾಗಿ ಹಬ್ಬ ಹರಿದಿನಗಳಲ್ಲಿ ಆಚರಿಸುವ ಪ್ರತಿಯೊಂದು ಸಂಪ್ರದಾಯಗಳಲ್ಲಿ ಚಿಕ್ಕವರಿಗೂ ತುಂಬಾ ಆದ್ಯತೆ ನೀಡಲಾಗುತ್ತದೆ.

ಯಾವುದೇ ಹಬ್ಬ ಹರಿದಿನಗಳಲ್ಲಿ ಮನೆಯ ಮುಂದಿನ ಅಂಗಳವನ್ನು ಹಸುವಿನ ಸೆಗಣಿಯಿಂದ ಸಾರಿಸುವ ವಾಡಿಕೆ. ಹಿಂದೂ ಧರ್ಮದಲ್ಲಿ ಹಸುವಿಗೆ ಸಾಕಷ್ಟು ಪ್ರಾಧಾನ್ಯತೆಯನ್ನು ನೀಡಲಾಗಿದೆ. ಹಸುವಿನ ಸೆಗಣಿಯಿಂದ ತಯಾರಾಗುವ ಭಸ್ಮವನ್ನು ಅಥವಾ ವಿಭೂತಿಯನ್ನು ದಿನನಿತ್ಯ ಹಣೆಯ ಮೇಲೆ ಹಚ್ಚಿಕೊಳ್ಳುತ್ತಾರೆ. ಹಸುವಿನ ಗೋಮೂತ್ರ ಪವಿತ್ರವೆಂದು ಬಳಸಲಾಗುತ್ತದೆ. ಹಸುವಿನ ಸೆಗಣಿಯಿಂದ ಮನೆ, ಮನೆಯಂಗಳ ಸಾರಿಸುವದರಿಂದ ಯಾವುದೇ ರೀತಿಯ ಕ್ರಿಮಿ-ಕೀಟಗಳು ಕೆಟ್ಟ ಸರೀಸೃಪಗಳು ಮನೆಯಲ್ಲಿ ಪ್ರವೇಶಿಸುವುದಿಲ್ಲ ಎಂಬುದು ಇದರ ಹಿಂದಿನ ರಹಸ್ಯವಾಗಿದೆ.

ಸದ್ಯ ಇಲ್ಲಿ ನೋಡಲಿರುವ ವಿಡಿಯೋದಲ್ಲಿ ಹಸುವಿನ ಸಗಣಿಯಿಂದ ಸಾರಿಸುವ ಸಂಪ್ರದಾಯವನ್ನು ಹೊಸದಾಗಿ ಮದುವೆಯಾದ ನವ ವಧುವಿನಿಂದ ಮಾಡಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಹೊಸ ಸೊಸೆಯ ಪೀಕಲಾಟ ನೋಡುವಂತಿದೆ. ಪಾಪ ಆಕೆಗಾದರೂ ಏನು ಗೊತ್ತು? ಮೊದಲಿನಿಂದ ಇಂತಹ ಕೆಲಸಗಳನ್ನು ಮಾಡುತ್ತಾ ಬಂದರೆ ವಿಶೇಷವೆನಿಸುವುದಿಲ್ಲ. ಆದರೆ ಇಂದಿನ ಪೋಷಕರು ತಮ್ಮ ಮಕ್ಕಳಿಗೆ ಅದರಲ್ಲೂ ಹುಡುಗಿಯರಿಗೆ ತುಂಬಾ ಮುದ್ದಾಗಿ ಬೆಳೆಸುವ ಕಾರಣದಿಂದಾಗಿ ಹಳೆಯ ರೂಢಿಗಳು ಅಷ್ಟೊಂದು ಗುರುತಿರುವುದಿಲ್ಲ. ಇಲ್ಲಿ ಮನೆಯ ಎಲ್ಲ ಸದಸ್ಯರು ಕೂಡಿಕೊಂಡು ಸೆಗಣಿಯಿಂದ ಸಾರಿಸುವ ಸಂಪ್ರದಾಯ ಮಾಡಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನವ ವಿವಾಹಿತೆಯ ಮುಖದ ಮೇಲಿನ ಭಾವ ನೋಡುವವರಿಗೆ ಅರ್ಥವಾಗುತ್ತಿದೆ. ಆದರೂ ಇಲ್ಲಿ ಹಿರಿಯರು ಸಮಜಾಯಿಸಿ ನೀಡಿ ಆಕೆಯಿಂದ ಈ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ.

ನವ ವಿವಾಹಿತೆಯ ಪರಿಸ್ಥಿತಿ ಮಾತ್ರ ಇಲ್ಲಿ ವರ್ಣಿಸುವುದಕ್ಕಿಂತ ವಿಡಿಯೋವನ್ನೇ ನೋಡುವುದು ಒಳ್ಳೆಯದು. ಈ ಕೆಲಸವನ್ನು ಮಾಡುವಾಗ ಯುವತಿ ತುಂಬಾ ಮುಖ ತಿರುವಿಕೊಂಡು ಹೇಗೋ ಎನ್ನುವಂತೆ ಮಾಡುತ್ತಿದ್ದಾಳೆ. ಮನೆಯವರ ಒತ್ತಾಯಕ್ಕೆ ಮಣಿದು ವಿಧಿ ಪೂರ್ಣ ಮಾಡಿದ ನಂತರ ಬೇಗನೆ ಬದಿಗೆ ಸರಿದು ಕೈ ತೊಳೆದುಕೊಂಡು ಬಿಡುತ್ತಾಳೆ. ಆದರೆ ಆಕೆಗೆ ಗೊತ್ತಿರುವುದಿಲ್ಲ ತಂಬಿಗೆಯಲ್ಲಿ ಗೋಮೂತ್ರವಿದ್ದದ್ದು. ಯುವತಿ ನೀರೆಂದು ತಿಳಿದು ಗೋಮೂತ್ರದಿಂದಲೇ ಕೈ ತೊಳೆದುಕೊಂಡು ಬಿಡುತ್ತಾಳೆ. ನೆರೆದವರಲ್ಲಿ ಒಬ್ಬನು ಹೇಳುತ್ತಾನೆ ಅದು ಗೋಮೂತ್ರವಿದೆ ಎಂದು. ಆಗ ಎಲ್ಲರೂ ಜೋರುಜೋರಾಗಿ ನಗಲು ಶುರು ಮಾಡುತ್ತಾರೆ.

ನೋಡಿ ಈ ವಿಶೇಷ ವಿಡಿಯೋ…

 

View this post on Instagram

 

A post shared by Saili Dhurve (@saili_29)

ಪ್ರಸ್ತುತ ಈ ನವ ವಿವಾಹಿತೆಯ ವಿಶೇಷ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ saili _29 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಲ್ಲದೆ ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.

ಪ್ರಸ್ತುತ ವಿಡಿಯೋ ನೋಡಿ ನೆಟ್ಟಿಗರು ಅನೇಕ ರೀತಿಯ ವಿಧವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಒಬ್ಬ ಯೂಸರ್ ಈ ವಿಡಿಯೋ ನೋಡಿ End is fun ಎಂದಿದ್ದಾನೆ. ಇನ್ನೊಬ್ಬ ಯೂಸರ್ ಹಸುವಿನ ಹಾಲನ್ನು ಕುಡಿಯುತ್ತಿರಿ, ಅದರ ಸೆಗಣಿಗೆ ಇಷ್ಟೊಂದು ಮೂಗು ಮುರಿಯುವದ್ಯಾಕೆ ಎಂದಿದ್ದಾನೆ. ಮೂರನೇ ನೆಟ್ಟಿಗನೊಬ್ಬ ಏನಪ್ಪಾ ಇಂದಿನ ಪೀಳಿಗೆ, ನನ್ನ ತಾಯಿ ಮೊದಲೆಲ್ಲಾ ಸೆಗಣಿಯಿಂದಲೇ ಮನೆಯನ್ನು ಸಾರಿಸುತ್ತಿದ್ದಳು ಎಂದಿದ್ದಾನೆ.