Video: ಪಕ್ಷಿಗಳ ತುರ್ತು ಸಭೆ ಎನ್ನುವಂತಹ ದೃಶ್ಯ; ಕೊರೊನಾ ಮೂರನೇ ಅಲೆ ಬಗ್ಗೆ ಗಂಭೀರ ಚರ್ಚೆ ಎಂದ ನೆಟ್ಟಿಗರು!
ಮನುಷ್ಯ ಇತರರ ಜೊತೆಗೆ ಸಂವಹನವನ್ನು ನಡೆಸಲು ಒಂದು ಮಾದ್ಯಮವಾಗಿ ಕೆಲಸ ಮಾಡುತ್ತಿರುವುದು ಭಾಷೆಯಾಗಿದೆ. ನಮ್ಮ ದೇಶದಲ್ಲಿ ಅಸಂಖ್ಯಾತ ಭಾಷೆಗಳಿವೆ. ಲಿಪಿ ಇರುವ ಭಾಷೆಗಳು ಕೆಲವಾದರೆ, ಲಿಪಿ ಇಲ್ಲದಿರುವ ಅನೇಕ ಭಾಷೆಗಳು ನಮ್ಮ ದೇಶದಲ್ಲಿ ಅಸ್ತಿತ್ವದಲ್ಲಿವೆ. ಭಾಷೆ ಯಾವುದೇ ಆದರೂ ಅದು ಭಾವನೆಗಳನ್ನು ಹಾಗೂ ವಿಚಾರಧಾರೆಗಳನ್ನು ಹಂಚಿಕೊಳ್ಳಲು ಬಹಳಷ್ಟು ಅನುಕೂಲವನ್ನು ಕಲ್ಪಿಸಿಕೊಟ್ಟಿದೆ. ಇಂದು ನಾವು ಭಾಷೆಯಿಲ್ಲದೆ ಸಂವಹನವನ್ನು ಊಹಿಸಿಕೊಳ್ಳುವುದು ಸಹಾ ಸಾಧ್ಯವಿಲ್ಲ. ಮನುಷ್ಯರಿಗೇನೋ ಅವರ ಸ್ಥಳಕ್ಕೆ ತಕ್ಕಂತೆ ವೈವಿದ್ಯಮಯ ಎನ್ನಿಸುವಂತೆ ಸಾವಿರಾರು ಭಾಷೆಗಳು ಅಸ್ತಿತ್ವದಲ್ಲಿವೆ. ಆದರೆ ಪ್ರಾಣಿ-ಪಕ್ಷಿಗಳ ಭಾಷೆ ಯಾವುದು?? ಅವು ತಮ್ಮ ಸಂವಹನವನ್ನು ತಮ್ಮದೇ ಆದ ಶಬ್ದಗಳ ಮೂಲಕ ಮಾಡಿಕೊಳ್ಳುತ್ತವೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.
ಆದರೆ ಅವುಗಳು ಶಬ್ದಗಳ ಸಂವಹನ ಹೇಗೆ ನಡೆಯುತ್ತದೆ ಎಂಬುದರ ಮಾಹಿತಿ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿದಂತಹ ಜನರು ಒಂದು ಕಡೆ ವಿಡಿಯೋವನ್ನು ಎಂಜಾಯ್ ಮಾಡುವುದರ ಜೊತೆಗೆ ಮತ್ತೊಂದು ಕಡೆ ಪಕ್ಷಿಗಳ ಸಂವಹನ ಕಂಡು ಆಶ್ಚರ್ಯವನ್ನು ವ್ಯಕ್ತ ಪಡಿಸುತ್ತಿದ್ದಾರೆ.. ಈ ವಿಡಿಯೋವನ್ನು ನೋಡಿದ ನಂತರ ಜನರು ಬಹಳಷ್ಟು ಮೆಚ್ಚುಗೆ ಸೂಚಿಸುತ್ತಿದ್ದಾರೆ ಪ್ರಸ್ತುತ ಅನೇಕ ಜನರ ಗಮನವನ್ನು ಈ ವೀಡಿಯೋ ತನ್ನತ್ತ ಸೆಳೆದಿದೆ. ವಿಡಿಯೋದ ವಿಷಯಕ್ಕೆ ಬಂದರೆ ಈ ವಿಡಿಯೋದಲ್ಲಿ ನಾವು ನಾಲ್ಕು ಹಕ್ಕಿಗಳು ಒಂದು ಕಡೆ ಕುಳಿತು ಸಭೆಯನ್ನು ನಡೆಸುತ್ತಿವೆ ಎನ್ನುವಂತಹ ವಾದ ವರ್ತನೆಯನ್ನು ನೋಡಬಹುದು.
ನಾಲ್ಕು ಹಕ್ಕಿಗಳು ಒಂದರ ಎದುರಿನಲ್ಲಿ ಇನ್ನೊಂದು ಕುಳಿತುಕೊಂಡು ಪಕ್ಷಿ ಭಾಷೆಯಲ್ಲಿ ಏನನ್ನೋ ಚರ್ಚೆ ಮಾಡುತ್ತಿರುವಂತೆ ಕಾಣುತ್ತದೆ. ಶಬ್ದಗಳ ಮೂಲಕ ಏನನ್ನೋ ಹೇಳುತ್ತಿರುವಂತೆ, ಹಕ್ಕಿಗಳು ಒಂದರ ಮಾತು ಇನ್ನೊಂದು ಕೇಳಿದಂತೆ, ಅದನ್ನು ಕೇಳಿದ ಹಕ್ಕಿಗಳು ತಲೆ ಆಡಿಸುತ್ತಿರುವಂತೆ ಕಾಣುತ್ತಿದ್ದು ಬಹಳ ಕುತೂಹಲಕಾರಿ ವಿಡಿಯೋ ಎನಿಸುತ್ತದೆ. 4 ಹಕ್ಕಿಗಳ ಚರ್ಚೆಯಂತೆ ಕಾಣುವ ಈ ವಿಡಿಯೋ ನೆಟ್ಟಿಗರಿಗೆ ಮಾತ್ರ ವಿಸ್ಮಯ ಎನಿಸಿದೆ ಎಂಬುದು ಸುಳ್ಳಲ್ಲ. 4 ಹಕ್ಕಿಗಳು ತಲೆಯಾಡಿಸುವ ರೀತಿ ಅದ್ಭುತ ಎನಿಸುತ್ತದೆ.
ಹಕ್ಕಿಗಳು ತಮ್ಮದೇ ಆದ ಭಾಷೆಯಲ್ಲಿ ಏನನ್ನೋ ಹೇಳುತ್ತಿರುವಂತೆ ಕಾಣುವಂತಹ ಈ ದೃಶ್ಯ ಅಕ್ಷರಶಃ ಹೊಸತು ಹಾಗೂ ವಿಸ್ಮಯ ಎನಿಸದೇ ಇರದು.
ವೈರಲ್ ಆಗಿರುವ ಈ ವಿಡಿಯೋವನ್ನು ಸುಮಾರು 10 ಲಕ್ಷಕ್ಕಿಂತಲೂ ಅಧಿಕ ಜನರು ವೀಕ್ಷಣೆಯನ್ನು ಮಾಡಿದ್ದಾರೆ. 28000 ಕ್ಕಿಂತಲೂ ಅಧಿಕ ಜನರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಎರಡೂವರೆ ಸಾವಿರಕ್ಕಿಂತಲೂ ಅಧಿಕ ಜನರು ವಿಡಿಯೋ ನೋಡಿ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಗಳ ಮೂಲಕ ಹಂಚಿಕೊಂಡಿದ್ದಾರೆ ಒಂದು ಲಕ್ಷಕ್ಕಿಂತ ಅಧಿಕ ಜನರು ಲೈಕ್ ಗಳನ್ನು ನೀಡಿದ್ದಾರೆ. ಈ ವಿಶೇಷವಾದ ವಿಡಿಯೋವನ್ನು ನೋಡಿದ ಜನರು ವೈವಿಧ್ಯಮಯವಾದಂತಹ ಕಾಮೆಂಟ್ ಮಾಡಿದ್ದಾರೆ.
ವಿಡಿಯೋ ನೋಡಿ
ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ “4 ಹಕ್ಕಿಗಳು ಸೇರಿ ಪರಿಸರ ಸಂರಕ್ಷಣೆಯ ಕುರಿತಾಗಿ ಸಭೆಯನ್ನು ನಡೆಸುತ್ತಿವೆ, ಎಲ್ಲಾ ಜೀವಿಗಳ ಕುರಿತಾಗಿ ಅವು ಮಾತನಾಡಿಕೊಳ್ಳುತ್ತಿವೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ “ಕೊರೋನಾ ಮೂರನೇ ಅಲೆಯು ಯಾವಾಗ ಬರುತ್ತದೆ?? ಅದು ಉತ್ತರಪ್ರದೇಶದ ಚುನಾವಣೆಗೂ ಮೊದಲೇ ಬರುತ್ತದೋ, ಇಲ್ಲವೋ ಎಂಬ ವಿಷಯವಾಗಿ ಚರ್ಚೆ ಮಾಡುತ್ತಿದ್ದಾವೆ’ ಎಂದು ಹಾಸ್ಯ ಚಟಾಕಿ ಯನ್ನು ಹಾರಿಸಿದ್ದಾರೆ. ಇನ್ನೊಬ್ಬರು ತಮ್ಮ ಕಾಮೆಂಟ್ ನಲ್ಲಿ, “ಪಕ್ಷಿಗಳ ಮೇಲೆ ಮನುಷ್ಯ ಮಾಡುತ್ತಿರುವ ಶೋಷಣೆಯನ್ನು ತಪ್ಪಿಸುವುದು ಹೇಗೆ ಎನ್ನುವ ವಿಷಯವಾಗಿ ಹಕ್ಕಿಗಳು ಚರ್ಚೆ ಮಾಡುತ್ತಿವೆ” ಎಂದು ಹೇಳಿದ್ದಾರೆ. ಒಟ್ಟಾರೆ ಕಾಮೆಂಟ್ಗಳನ್ನು ಮಾಡಿರುವ ಬಹಳಷ್ಟು ಜನರು ಪ್ರಸ್ತುತ ಸಮಸ್ಯೆ ಗಳನ್ನು ಹೆಸರಿಸಿ ಅದರ ಕುರಿತಾಗಿ ಹಕ್ಕಿಗಳು ಚರ್ಚೆ ನಡೆಸಿವೆ ಎಂದಿದ್ದಾರೆ.