Video; J ಹ್ಯಾಂಡಿ ಹೆಸರಿನ ಬಾಲರ್ ಎಸೆದನು ಖತರ್ನಾಕ್ ಬಾಲ್! ಕ್ರಿಕೆಟ್ ಜಗತ್ತೇ ಆಯಿತು ಮೂಕವಿಸ್ಮಿತ!

ವೇಗದ ಬೌಲರ್ ನ ಮುಖ್ಯ ಶಸ್ತ್ರ ಆತನ ಸ್ವಿಂಗ್. ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಅಕ್ರಂ ಅವರನ್ನು ‘ಸ್ವಿಂಗ್ ಕಾ ಸುಲ್ತಾನ್’ ಎಂದು ಕರೆಯಲಾಗುತ್ತಿತ್ತು. ಅದಕ್ಕೆ ಕಾರಣ ವಾಸಿಮ್ ಅಕ್ರಮ್ ಅವರು ಎರಡು ಬದಿಯಿಂದ ಸ್ವಿಂಗ್ ಮಾಡುತ್ತಿದ್ದರು. ಈಗ ಇಂಗ್ಲೆಂಡಿನ ಕ್ಲಬ್ ಕ್ರಿಕೆಟ್ ನಲ್ಲಿ J ಹ್ಯಾಂಡಿ ಹೆಸರಿನ ಬಾಲರ್ ಎಸೆದ ಬಾಲ್ ಕ್ರಿಕೆಟ್ ಜಗತ್ತೇ ಹುಬ್ಬೇರಿಸುವಂತೆ ಮಾಡಿದೆ.

ಕ್ಲಬ್ ಕ್ರಿಕೆಟ್ ನಲ್ಲಿ J ಹ್ಯಾಂಡಿ ಅವರು ಬ್ಯಾಟ್ಸ್ಮನ್ ಗೆ ಎಸೆದ ಸ್ವಿಂಗ್ ಬಾಲ್ ನೋಡಿ ಕ್ರಿಕೆಟ್ ಎಕ್ಸ್ಪರ್ಟ್ ಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅವರು ಎಸೆದ ಅದ್ಭುತ ಬಾಲ್ ನ್ನು ನೋಡಿ ಮಾಜಿ ಕ್ರಿಕೆಟಿಗರಿಂದ ಹಿಡಿದು ಸದ್ಯದ ಕ್ರಿಕೆಟಿಗರು ರಿಯಾಕ್ಟ್ ಮಾಡುತ್ತಿದ್ದಾರೆ.

J ಹ್ಯಾಂಡಿ ಅವರು ಹೆಸರು ಬಾಲ್, ಆಫ್ ಸ್ಟಂಪ್ ನ ತುಂಬಾ ಹೊರಗೆ ಇತ್ತು. ಬ್ಯಾಟ್ಸ್ಮನ್ ಫ್ರಂಟ್ ಫುಟ್ ಮೇಲೆ ಹೋಗಿ ಬ್ಯಾಟ್ ಮೇಲಕ್ಕೆತ್ತಿ ಈ ಬಾಲನ್ನು ಆಡದೆ ಹಾಗೆಯೇ ಹಿಂದೆ ಬಿಡುತ್ತಾನೆ. ಆತನ ಪ್ರಕಾರ ಹ್ಯಾಂಡಿ ಒಗೆದ ಬಾಲ್, ಆಫ್ ಸ್ಟಂಪ್ ನ ತುಂಬಾ ಹೊರಗೆ ಹೋಗುತ್ತದೆಯೆಂದು ಯೋಚಿಸಿದ್ದಾನೆ. ಏತನ್ಮಧ್ಯೆ ಬಾಲ್ ಮಾತ್ರ ಆಪ್ಸ್ ಆಫ್ ಸ್ಟಂಪ್ ನ ಹೊರಗೆ ಹೋಗದೆ ನೇರ ಒಳನುಸುಳಿ ಕ್ಷಣದಲ್ಲಿ ಆಫ್ ಸ್ಟಂಪ್ ನ್ನೇ ಕಿತ್ತಿ ಬಿಟ್ಟಿದೆ. ಬ್ಯಾಟ್ಸ್ಮನ್ ಇದನ್ನು ನೋಡಿ ಸುಮ್ಮನೆ ಹಾಗೆ ಪಾಜ್ ಆಗಿಬಿಡುತ್ತಾನೆ.

ವಿಡಿಯೋ ನೋಡಿ

ಸೋಶಿಯಲ್ ಮೀಡಿಯಾದಲ್ಲಿ ಹ್ಯಾಂಡಿ ಎಸೆದ ಈ ಬಾಲಿನ ಪ್ರಶಂಸೆ ತುಂಬಾ ಆಗುತ್ತಿದೆ. ಈ ವಿಡಿಯೋವನ್ನು ‘ಇಂಗ್ಲೆಂಡ್ಸ್ ಬರ್ಮಿ ಅರ್ಮಿ’ ಹೆಸರಿನ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 7ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.