Video; ಇತ್ತ ಕುಮಾರಸ್ವಾಮಿ ಭಾವುಕರಾಗಿ ರಾಜ್ಯದ ಗದ್ದುಗೆ ಏರಲು ಯತ್ನಿಸುವಾಗಲೇ ಪತ್ನಿ ರಾಧಿಕಾ ಕಾಲು ಜಾರಿ ಬೀಳಬೇಕೆ?
ಕೆಲವೊಂದು ಘಟನೆಗಳು ಜೀವನದಲ್ಲಿ ತುಂಬಾ ಅನೈಚ್ಚಿಕವಾಗಿ ನಡೆದು ಹೋಗುತ್ತವೆ. ಅವುಗಳನ್ನು ತಡೆಗಟ್ಟಲು ಯಾರಿಂದಲೂ ಸಾಧ್ಯವಾಗುವದಿಲ್ಲ. ಆಮೇಲೆ ಕೆಲವು ಇನ್ಸಿಡೆಂಟ್ ಗಳು ಮುಂದಿನ ಭವಿಷ್ಯವನ್ನು ಅಥವಾ ಮುಂದಾಗುವ ಮುನ್ಸೂಚನೆಯನ್ನು ಮೊದಲೇ ತೋರಿಸುತ್ತವೆ ಎನ್ನುತ್ತಾರೆ. ಆದ್ದರಿಂದ ಸದ್ಯ ರಾಧಿಕಾ ಅವರು ಡಾನ್ಸ್ ಮಾಡುವ ಸಂದರ್ಭದಲ್ಲಿ ಅಕಸ್ಮಾತ್ ಬಿದ್ದು ಬಿಟ್ಟಿದ್ದಾರೆ. ಈಗ ಈ ಇನ್ಸಿಡೆಂಟ್ ಗೆ ಕುಮಾರಣ್ಣನ ರಾಜಕೀಯ ಭವಿಷ್ಯಕ್ಕೆ ಏನಾದರೂ ಆಪತ್ತು ಇರಬಹುದೇ ಎಂಬ ಪ್ರಶ್ನೆ ಜನಮನದಲ್ಲಿ ಎದ್ದಿದೆ.
ಅಂದ ಹಾಗೆ ರಾಜ್ಯದಲ್ಲಿ ಮುಂದಿನ ಎಲೆಕ್ಷನ್ ನಲ್ಲಿ ಹೇಗಾದರೂ ಮಾಡಿ CM ಗದ್ದುಗೆಯನ್ನು ಏರಲು ಪ್ರತಿಯೊಂದು ರಾಜಕೀಯ ಪಕ್ಷದ ಧುರೀಣರು ತುಂಬಾ ಮಹದಾಸೆಯಿಂದ ಪ್ರಯತ್ನಕ್ಕೆ ಇಳಿದಿದ್ದಾರೆ. ಇದರಲ್ಲಿ ಕುಮಾರಸ್ವಾಮಿಯವರೂ ಹಿಂದೆ ಇಲ್ಲ. ಕಳೆದ ಕೆಲವು ದಿನಗಳಿಂದ ರಾಜಕೀಯದಲ್ಲಿ ಕುಮಾರಸ್ವಾಮಿಯವರು ಹಿಂದೆಂದೂ ಕಾಣದ ರೀತಿಯಲ್ಲಿ ಆಕ್ಟಿವ್ ಆಗಿ ಓಡಾಡುತ್ತಿದ್ದಾರೆ. ಹಾಗೂ ಪಕ್ಷದ ಸಭೆ, ಕಾರ್ಯ ಕಲಾಪಗಳನ್ನು ಎಡೆಬಿಡದೆ ಅವಿರತವಾಗಿ ತೆಗೆದುಕೊಳ್ಳುತ್ತಿದ್ದಾರೆ. ಮೊನ್ನೆಯಂತೂ ತಂದೆಯಾದ ಗೌಡರ ನೆನಪನ್ನು ತೆಗೆದು ಸ್ಟೇಜ್ ಮೇಲೆ ಅತ್ತಿದ್ದೇ ಅತ್ತಿದ್ದು.
ಈಗ ಇದೇ ಸಮಯದಲ್ಲಿ ಕುಮಾರಸ್ವಾಮಿಯವರ ಪತ್ನಿ ರಾಧಿಕಾ ಕುಮಾರಸ್ವಾಮಿಯವರು ಕುಣಿತದ ಪ್ರಾಕ್ಟೀಸ್ ಮಾಡುವಾಗ ಹಠಾತ್ ಕಾಲು ಜಾರಿ ಬಿದ್ದಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ತುಂಬಾ ವೈರಲ್ ಆಗುತ್ತಿರುವುದು ಕಂಡು ಬರುತ್ತಿದೆ. ಹಾಗೂ ರಾಧಿಕಾ ಅವರು ಬಿದ್ದದ್ದು ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯಕ್ಕೆ ತಳಕು ಹಾಕಿ ನೋಡಲಾಗುತ್ತಿದೆ. ಮುಂದಿನ ದುರದೃಷ್ಟ ಏನಾದರೂ ಈಗಲೇ ತೋರಿಸುತ್ತಿದೆಯಾ ಎಂಬ ಅನುಮಾನಗಳು ಜನರಲ್ಲಿ ಹುಟ್ಟು ಹಾಕುತ್ತಿವೆ. ರಾಜ್ಯದಲ್ಲಿ ಪ್ರಮುಖ ಮೂರು ಪಕ್ಷಗಳು ಈ ಬಾರಿ ತಾವೇ ಗದ್ದುಗೆಗೆ ಎರಲಿದ್ದೇವೆ ಎಂಬ ವಿಶ್ವಾಸದಲ್ಲಿ ಇವೆ. ಅಂಥದ್ದರಲ್ಲಿ ರಾಧಿಕಾ ಕುಮಾರಸ್ವಾಮಿಯವರು ಬಿದ್ದಿರುವದರಲ್ಲಿ ಕುಮಾರಸ್ವಾಮಿಯವರ ರಾಜಕೀಯ ಭವಿಷ್ಯದ ಮುನ್ಸೂಚನೆ ಏನಾದರೂ ಇದೆಯೇ ಎಂದು ಜ್ಯೋತಿಷ ಪಂಡಿತರು ತಾಳೆ ಹಾಕಿ ನೋಡುತ್ತಿದ್ದಾರೆ ಎಂಬ ಸುದ್ದಿಗಳು ಹೆಚ್ಚುತ್ತಲಿವೆ.
ನೋಡಿ ಈ ವಿಡಿಯೋ…
View this post on Instagram
ಪ್ರಸ್ತುತ ವಿಡಿಯೋ radhikakumaraswamy ಹೆಸರಿನ ಅಕೌಂಟ್ ನಿಂದ ಇನ್ಸ್ಟಾ ಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಮಿತ್ರರೇ, ಈ ಘಟನೆಯನ್ನು ನೀವು ಹೇಗೆ ಮತ್ತು ಯಾವ ರೀತಿಯಲ್ಲಿ ನೋಡುತ್ತೀರಾ?