Video: ನಾಯಿಗಳ ಕೈಗೆ ಸಿಕ್ಕಿ ನಲುಗಿದ ಚಿರತೆ, ಕಾಡಿನಲ್ಲಿ ಮೆರೆಯುವ ಜೀವಿಯು ನಾಯಿಗಳ ಮುಂದೆ ಪ್ರಾಣ ಭಿಕ್ಷೆ ಬೇಡುವಂತಾಯ್ತು

ವನ್ಯ ಮೃಗಗಳಲ್ಲಿ ಚಿರತೆಯ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯ ಖಂಡಿತ ಇಲ್ಲ. ವೇಗವಾಗಿ ಓಡುವ ವಿಷಯದಲ್ಲಿ ಬಹಳಷ್ಟು ಹೆಸರಾಗಿರುವ ಚಿರತೆಯು ತನ್ನ ಬೇಟೆಯನ್ನು ಸುಲಭವಾಗಿ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ. ಚಿರತೆ ಕಣ್ಣಿಗೆ ಅದು ಹಸಿದಿರುವಾಗ ನಾವೇನಾದರೂ ಕಂಡರೆ ಅದು ನಮ್ಮನ್ನು ಖಂಡಿತ ಉಳಿಸುವುದು ಅಸಾಧ್ಯ ಎಂದರೆ ಸುಳ್ಳಲ್ಲ.‌ ಅಲ್ಲದೇ ಕಾಡಿನಲ್ಲಿ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಜನರಿಗೆ ಇರುವ ಒಂದೇ ದಾರಿಯೆಂದರೆ ಅದು ಮರವನ್ನು ಏರಿ ಕೂರುವುದು. ಆದರೆ ಚಿರತೆಯ ವಿಷಯದಲ್ಲಿ ಈ ನಿಯಮ ಕೂಡಾ ಅಪ್ಲೈ ಆಗುವುದಿಲ್ಲ. ಏಕೆಂದರೆ ಚಿರತೆಯು ಮರವನ್ನು ಏರುವುದರಲ್ಲೂ ಸಹಾ ಕೌಶಲ್ಯವನ್ನು ಪಡೆದುಕೊಂಡಿದೆ.

ಚಿರತೆಗಳು ದೊಡ್ಡ ದೊಡ್ಡ ಮರಗಳನ್ನು ಸಹಾ ಏರಿ ಹೋಗುವ ಸಾಮರ್ಥ್ಯವನ್ನು ಪಡೆದುಕೊಂಡಿರುತ್ತವೆ. ಅದಕ್ಕೆ ಅವು ತಮ್ಮ ಬೇಟೆಯನ್ನು ಮರದ ಮೇಲೆ ಬೇಕಾದರೂ ಏರಿ ಹಿಡಿಯಬಹುದು. ಆದರೆ ಇದೀಗ ಇಂತಹ ಭಯ ಹುಟ್ಟಿಸುವ ಚಿರತೆಯ ಒಂದು ವೀಡಿಯೋ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಮೇಲೆ ಚಿರತೆಯ ಪರಿಸ್ಥಿತಿಯನ್ನು ನೋಡಿದವರಿಗೆ ಒಮ್ಮೆ ಅಯ್ಯೋ ಪಾಪ ಎನಿಸದೇ ಇರಲಾರದು. ಕಾಡಿನ ಕ್ರೂ ರ ಮೃ ಗ ಕ್ಕೆ ನಾಡಿನಲ್ಲಿ ಎದುರಾದ ಪರಿಸ್ಥಿತಿಗೆ ನೆಟ್ಟಿಗರು ಸಹಾ ಪಾಪ ಎನ್ನುವಂತಾಗಿದೆ. ಹಾಗಾದರೆ ಈ ವೀಡಿಯೋದಲ್ಲಿ ಏನಿದೆ ಎನ್ನುವ ವಿಷಯ ತಿಳಿಯೋಣ ಬನ್ನಿ.

ವೈರಲ್ ವೀಡಿಯೋದಲ್ಲಿ ಗಮನಿಸಿದಾಗ ಒಂದು ಉದ್ಯಾನದಲ್ಲಿ ಅಡಗಿರುವ ಚಿರತೆಯೊಂದು ಹೊರಗೆ ಬರುವುದನ್ನು ನೋಡಿದ ಸುಮಾರು 6-7 ನಾಯಿಗಳು ಅದನ್ನು ಸುತ್ತುವರೆದಿರುವುದನ್ನು ನಾವು ನೋಡಬಹುದು. ನಂತರ ಆ ನಾಯಿಗಳೆಲ್ಲವೂ ಸೇರಿ ಆ ಚಿರತೆಯ ಮೇಲೆ ಆಕ್ರಮಣ ಮಾಡಿವೆ‌. ನಾಯಿಯು ಚಿರತೆಯ ದೇಹವನ್ನು ಅದರ ಹಲ್ಲಿಗಳಿಂದ ಕಚ್ಚಿದಾಗ ಚಿರತೆಯ ಬೆನ್ನಿನಿಂದ ರಕ್ತ ಹರಿಯುತ್ತದೆ. ನಾಯಿಗಳಿಂದ ಎಲ್ಲಾ ಕಡೆಯಿಂದ ಸುತ್ತುವರೆದಿರುವ ಚಿರತೆ ಪ್ರಾಣ ಭಿಕ್ಷೆ ಬೇಡುವುದನ್ನು ಕಾಣಬಹುದಾಗಿದೆ.

ವಿಡಿಯೋ ನೋಡಿ

ಕಾಡಿನಲ್ಲಿ ವೀರನಂತೆ ಸುತ್ತುವ, ಬೇಟೆಯನ್ನು ಆಡುವಾಗ ತನ್ನ ಸಾಮರ್ಥ್ಯವನ್ನು ಮೆರೆಯುವ ಚಿರತೆಯು ಹೀಗೆ ಅಸಹಾಯಕವಾಗಿರುವುದನ್ನು ನೋಡಿದಾಗ ಪಾಪ ಎನಿಸುತ್ತದೆ. ಈ ಸುದ್ದಿಯನ್ನು ನೋಡಿದ ಕೆಲವರು ನೆಟ್ಟಿಗರು ಇದು ಬೇಟೆ ನಾಯಿಗಳೊಂದಿಗೆ ಅರಣ್ಯಕ್ಕೆ ಬೇಟೆಯಾಡಲು ಹೋಗುವ ಬೇಟೆಗಾರರು ಮಾಡಿರುವ ವೀಡಿಯೋ ಎಂದು ಹೇಳಿದ್ದಾರೆ. ಮತ್ತೆ ಕೆಲವರು ತಮ್ಮ ಜಾಗದಲ್ಲಿ ನಾಯಿಗಳು ಸಹಾ ಸಿಂಹಗಳಾಗುತ್ತವೆ ಎನ್ನುವುದು ಇದಕ್ಕೆ ಎಂದಿದ್ದಾರೆ. ಒಂದಷ್ಟು ಜನರು ಏಕತೆಯಲ್ಲಿ ಬಲವಿದೆ ಎಂದಿದ್ದಾರೆ.