Video; M S ಧೋನಿ ಅವರ ಡಾನ್ಸ್ ಸ್ಟೈಲ್ ನೋಡಿದ್ದೀರಾ? ಹಾರ್ದಿಕ್ ಪಾಂಡ್ಯ ಶೇರ್ ಮಾಡಿದರು ಈ ವಿಶೇಷ ವಿಡಿಯೋ.

ಭಾರತೀಯ ಕ್ರಿಕೆಟ್ ರಂಗಕ್ಕೆ ಹೊಸ ಯಶಸ್ಸಿನ ಬಣ್ಣವನ್ನು ಬಳಿದ ಕೀರ್ತಿ ಮಹೇಂದ್ರ ಸಿಂಗ್ ಧೋನಿ ಅವರದ್ದು. ಮಹೇಂದ್ರ ಸಿಂಗ್ ಧೋನಿ ಅವರು ಭಾರತೀಯ ಕ್ರಿಕೆಟ್ ಗೆ ಎಂದೂ ಮರೆಯದಂತ ಸುವರ್ಣಗಳಿಗೆಯನ್ನು ಕಲ್ಪಿಸಿಕೊಟ್ಟವರು. ಮಹೇಂದ್ರ ಸಿಂಗ್ ಧೋನಿ ಅವರು ಬರೀ ಕ್ರಿಕೆಟ್ ಗೆ ಅಷ್ಟೇ ಸೀಮಿತವಿಲ್ಲ. ಕ್ರಿಕೆಟ್ ಹೊರತಾಗಿಯೂ ಅನೇಕ ಫೀಲ್ಡ್ ಗಳಲ್ಲಿ ನಾವು ಅವರನ್ನು ಅವರ ಸ್ವಭಾವವನ್ನು ಕಂಡಿದ್ದೇವೆ. ಆದರೆ ಅವರು ಡಾನ್ಸ್ ಮಾಡಿದ ವಿಡಿಯೋ ಮಾತ್ರ ಇಲ್ಲಿಯವರೆಗೆ ಹೆಚ್ಚಾಗಿ ನೋಡಿಯೇ ಇಲ್ಲ.

ಮಹೇಂದ್ರ ಸಿಂಗ್ ಧೋನಿ ಅವರು ನೃತ್ಯ ಮಾಡಿದ ವಿಡಿಯೋದ ಒಂದು ಪುಟ್ಟ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ನೋಡಲು ಸಿಗುತ್ತಿದೆ. ಈ ವಿಡಿಯೋವನ್ನು ಸ್ಫೋಟಕ ಬ್ಯಾಟ್ಸ್ಮನ್, ಹಾರ್ದಿಕ್ ಪಾಂಡ್ಯ ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋ ದುಬೈನಲ್ಲಿಯದೆಂದು ತಿಳಿದು ಬಂದಿದೆ. ಈ ವಿಡಿಯೋದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರ ಕುಣಿತದ ಅಪರೂಪದ ದೃಶ್ಯವನ್ನು ನೋಡಬಹುದು.

ಹಾರ್ದಿಕ್ ಪಾಂಡ್ಯ ಅವರು ಇಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ಡಾನ್ಸ್ ಮಾಸ್ಟರ್ ಆಗಿದ್ದಾರೆ. ಹಾರ್ದಿಕ್ ಪಾಂಡ್ಯ ಮಹೇಂದ್ರ ಸಿಂಗ್ ಧೋನಿಯವರಿಗೆ ನೃತ್ಯದ ಪಾಠಗಳನ್ನು ಕಲಿಸಿಕೊಡುತ್ತಿದ್ದಾರೆ. ಅದನ್ನು ನೋಡಿ ಮತ್ತು ಕೇಳಿ ಧೋನಿ ಡಾನ್ಸ್ ಮಾಡುತ್ತಿದ್ದಾರೆ.

ನೋಡಿ ಮಾಹಿ ಡಾನ್ಸ್ ಮಾಡುತ್ತಿರುವ ಈ ಅಪರೂಪದ ವಿಡಿಯೋ..

 

View this post on Instagram

 

A post shared by Hardik Pandya 🔵 (@hardikpandya7)

ಮಹೇಂದ್ರ ಸಿಂಗ್ ಧೋನಿಯವರ ಈ ವಿಶೇಷವಾದ ವಿಡಿಯೋವನ್ನು ಹಾರ್ದಿಕ್ ಪಾಂಡ್ಯ ಅವರು ಇನ್ಸ್ಟಾಗ್ರಾಮ್ ನಲ್ಲಿ ತಮ್ಮದೇ ಖಾತೆಯಿಂದ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 17 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದಲ್ಲದೆ 3.2 ಮಿಲಿಯನ್ ಲೈಕ್ಸ್ ಗಳನ್ನು ಪಡೆದಿದೆ.