Video: ಸ್ಮಾರ್ಟ್ ಆಗಿ ಕೆಲಸ ಮಾಡೋದು ಅಂದ್ರೆ ಇದು! ವಿಡಿಯೋ ನೋಡಿದ್ಮೇಲೆ ನೀವು ಸಹ ವಾ, ಶಭಾಷ್! ಎನ್ನುವಿರಿ..!

ಚಿಕ್ಕಂದಿನಿಂದಲೂ ನಾವು ಹಿರಿಯರ ಬಾಯಿಯಿಂದ ದುಡಿಯಿರಿ, ಕಷ್ಟ ಪಡಿ ಅಂದರೇನೆ ಭವಿಷ್ಯದಲ್ಲಿ ನಿಮಗೆ ಸುಖ ಸಿಗುತ್ತೆ ಎನ್ನೋ ಮಾತುಗಳನ್ನು ಕೇಳುತ್ತಾ ಬಂದಿದ್ದೇವೆ. ಕಷ್ಟವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈ ಮಾತು ಏನೋ ನಿಜ. ಆದರೆ ಇಂದಿನ ಕಾಲ ತುಂಬಾ ಬದಲಾಗಿದೆ. ಇಂದಿನ ಕಾಲದಲ್ಲಿ ಕಷ್ಟದ ಜೊತೆಗೆ ಯಾರು ಹೊಸ ಹೊಸ ಐಡಿಯಾ ಅಥವಾ ಸ್ಮಾರ್ಟ್ ಮೈಂಡ್ ನಿಂದ ಯಾರು ಕೆಲಸ ಮಾಡುತ್ತಾರೆ ಅವರಿಗೆ ಯಶಸ್ಸು ಜಾಸ್ತಿ ಸಿಗುತ್ತದೆ. ಈಗ ಇದೇ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇಂಟರ್ನೆಟ್ ವೇಗವಾಗಿ ವೈರಲ್ ಆಗುತ್ತಿದೆ. ಬನ್ನಿ ಈ ವಿಶೇಷವಾದ ವಿಡಿಯೋವನ್ನು ನೋಡೋಣ.

ಈ ವಿಡಿಯೋದಲ್ಲಿ ವ್ಯಕ್ತಿಯು ತನ್ನ ಪರಿಶ್ರಮದ ಕೆಲಸವನ್ನು ತನ್ನ ಸ್ಮಾರ್ಟ್ ಮೈಂಡ್ ನಿಂದ ತುಂಬಾ ಸಹಜ ಹಾಗೂ ಸರಳವನ್ನಾಗಿ ಮಾಡಿಕೊಂಡಿದ್ದಾನೆ. ಹೀಗಾಗಿ ನೇಟಿಜನ್ಸ್ ಗಳಿಗೆ ಈತನ ಕೆಲಸ ನೋಡಲು ತುಂಬಾ ಇಂಟರೆಸ್ಟ್ ಬರುತ್ತಿದೆ.

ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿಯು ತನ್ನ ಕಾರ್ಯವನ್ನು ಅತೀ ಸರಳವಾದ ರೀತಿಯಲ್ಲಿ ಮತ್ತು ಅತೀ ವೇಗದಲ್ಲಿ ಮಾಡುತ್ತಾನೆ. ಅದೇನೆಂದರೆ ಈ ವ್ಯಕ್ತಿಯು ಚಹಾದ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಈತನು ಏಕಕಾಲಕ್ಕೆ ಒಂದೇ ಮಿನಿಟಿನಲ್ಲಿ ಇಪ್ಪತ್ತು ಕಪ್ ಕಾಫಿ ಮಾಡುತ್ತಾನೆ. ಇದೆಗೆ ಸಾಧ್ಯ ಅಂತ ಯೋಚನೆ ಮಾಡುತ್ತಿದ್ದೀರಾ ಹೌದು ಈತನ ಕೈ ಎಷ್ಟೊಂದು ಸ್ಪೀಡಾಗಿ ಕೆಲಸ ಮಾಡುತ್ತವೆ ಅನ್ನೋದು ಈ ವಿಡಿಯೋ ನೋಡಿದ ಮೇಲೆ ನಿಮಗೆ ಗೊತ್ತಾಗುತ್ತೆ. ಈ ವ್ಯಕ್ತಿ ಮೊದಲಿಗೆ ಇಪ್ಪತ್ತು ಕಪ್ಪುಗಳನ್ನು ಒಂದು ಟೇಬಲ್ ಮೇಲೆ ಇಟ್ಟಿರುತ್ತಾನೆ ತದನಂತರ ಸಕ್ಕರೆಯ ಡಬ್ಬಿಯನ್ನು ತಗೆದುಕೊಂಡು ದೂರಿಂದಲೇ ಪ್ರತಿಯೊಂದು ಕಪ್ ನಲ್ಲಿ ಒಂದೊಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ಚೆಲ್ಲದೆ ಎಸೆದು ಹಾಕುತ್ತಾನೆ. ತದನಂತರ ಕಾಫಿಯ ಪುಡಿಯನ್ನು ಪ್ರತಿಯೊಂದು ಕಪ್ ನಲ್ಲಿ ಸಕ್ಕರೆಯ ಹಾಗೆ ಹಾಕುತ್ತಾನೆ. ಆತನು ಈ ಕೃತ್ಯ ಮಾಡುವದನ್ನು ಕಂಡರೆ ಆಶ್ಚರ್ಯ ವೆನಿಸುತ್ತೆ ಏಕೆಂದರೆ ಈ ವ್ಯಕ್ತಿಯಲ್ಲಿ ಇಷ್ಟೊಂದು ಟ್ಯಾಲೆಂಟ್ ಇದೆಯಾ ಎಂದು.

ವಿಡಿಯೋ ನೋಡಿ

 

View this post on Instagram

 

A post shared by FOOOOD_ISHQ | NELLORE | (@foooodishq)

ಈ ಸುಂದರವಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ fooodishq ಈ ಹೆಸರಿನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 5 ಲಕ್ಷಕ್ಕೂ ಮೀರಿ ವಿಕ್ಷಿಸಲಾಗಿದೆ. ಹಾಗೂ ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.