ಆಟಿಕೆಯ ಖುರ್ಚಿಯ ಮೇಲೆ ಸಾವಕಾಶವಾಗಿ ಕುಳಿತ ಪುಟ್ಟ, ಕೆಲವೇ ಕ್ಷಣಗಳಲ್ಲಿ ಚೇರ್ ಹಾಗೂ ಬಾಲಕ……. ವಿಡಿಯೋ ನೋಡಿ!!
ಎಲ್ಲ ಪ್ರಾಣಿಗಳಲ್ಲಿ ಮನುಷ್ಯನಿಗೆ ಹೆಚ್ಚು ಬುದ್ಧಿಶಕ್ತಿ ಇದೆ. ಮನುಷ್ಯ ತನ್ನ ಬುದ್ಧಿಯ ಬಲದಿಂದ ಆನೆ ಹುಲಿ ಕರಡಿ ಗಳಂತಹ ಪ್ರಾಣಿಗಳನ್ನು ಸಹಿತ ತನ್ನ ಕೈಗೊಂಬೆ ಮಾಡಿಕೊಂಡಿದ್ದಾನೆ. ಮಾನವನ ವಿಚಾರಮಾಡುವಂಥ ಶಕ್ತಿ ಎಲ್ಲ ಪ್ರಾಣಿಗಳಿಗಿಂತಲೂ ಅದ್ಭುತವಾಗಿದೆ. ಇದರ ಜೊತೆಗೆ ಮಾನವನು ಪ್ರತಿಯೊಂದು ವಸ್ತು ನಿರೀಕ್ಷಣಾತ್ಮಕವಾಗಿ ನೋಡುತ್ತಾನೆ. ಎಲ್ಲಕ್ಕೂ ಹೆಚ್ಚು ಜ್ಞಾನವನ್ನು ಮಾನವನು ತನ್ನ ಕಣ್ಣುಗಳಿಂದ ಪಡೆಯುತ್ತಾನೆ. ಪ್ರತಿಯೊಂದು ವಿಷಯ ಕಲಿಯಬೇಕಾದರೆ ಮಾನವನಿಗೆ ಕಣ್ಣುಗಳು ಎಲ್ಲಕ್ಕೂ ಹೆಚ್ಚು ಜ್ಞಾನವನ್ನು ನೀಡುತ್ತವೆ.
ಮಾನವನು ತನಗೆ ಬೇಕಾದ ಕಾರ್ಯವನ್ನು ಸಲೀಸಾಗಿ ಮಾಡಿಕೊಳ್ಳಲು ಏನಾದರೂ ಹೊಸ ಯೋಜನೆ ಮಾಡುತ್ತಲೇ ಇರುತ್ತಾನೆ. ಸದ್ಯಕ್ಕೆ ಒಂದು ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೈರಲ್ ಆಗುತ್ತಿರುವ ವಿಡಿಯೋದಲ್ಲಿಯ ಘಟನೆ ನೋಡಿದರೆ ನೀವು ಸಹ ನಗದೆ ಆಗದೆ ಇರಲಾರಿರಿ.
ಪ್ರಸ್ತುತ ವೀಡಿಯೋದಲ್ಲಿ ಒಬ್ಬ ಪುಟ್ಟ ಬಾಲಕ ತನ್ನ ಆಟದ ಖುರ್ಚಿಯನ್ನು ತಗೆದುಕೊಂಡು ಅದರ ಜೊತೆಗೆ ಆಟ ಆಡುತ್ತಿರುತ್ತಾನೆ. ಆಗ ಅದನ್ನು ತನ್ನ ತಾಯಿ ರೆಕಾರ್ಡ್ ಮಾಡುತ್ತಿರುತ್ತಾಳೆ. ಹಾಗೆ ತಾಯಿ ಹುಡುಗನಿಗೆ ಆ ಆಟಿಕೆಯ ಖುರ್ಚಿಯ ಮೇಲೆ ಕುಳಿತುಕೊಳ್ಳಲು ಹೇಳುತ್ತಾಳೆ. ಮಗು ಸಹ ತುಂಬಾನೇ ಜಾಣ ನಾಗಿರುತ್ತಾನೆ . ಸಾವಕಾಶವಾಗಿ ಖುರ್ಚಿಯ ಮುಂದೆ ಹೋಗಿ ಅದರ ಮೇಲೆ ಕುಳಿತುಕೊಳ್ಳುತ್ತಾನೆ. ಕುಳಿತ ಕೆಲವು ಸೆಕೆಂಡ್ ಗಳ ನಂತರ ಪ್ಲ್ಯಾಸ್ಟಿಕ್ ಆಟಿಕೆ ಆ ಬಾಲಕನ ಭಾರ ತಾಳಿಕೊಳ್ಳಲು ಆಗದೆ ಅದು ಮಡಚಿ ನೆಲಕ್ಕೆ ಉರುಳುತ್ತದೆ. ಆಗ ಏನು ಆಧಾರ ವಿಲ್ಲದೆ ಧೈರ್ಯದಿಂದ ಕುಳಿತಿದ್ದ ಬಾಲಕ ಸಹ ಆಯತಪ್ಪಿ ಜೋರಾಗಿ ನೆಲಕ್ಕೆ ಬೀಳುತ್ತಾನೆ. ಇದೆಲ್ಲ ದೃಶ್ಯವನ್ನು ತನ್ನ ತಾಯಿ ರೆಕಾರ್ಡ್ ಮಾಡುತ್ತಿರುತ್ತಾಳೆ. ತದನಂತರ ಅದನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾಳೆ.
ವಿಡಿಯೋ ನೋಡಿ…..
View this post on Instagram