VIDEO VIRAL : ಮೊಲ ಮತ್ತು ಟ್ರೈನ್ ನಡುವೆ ಶುರುವಾಯ್ತು ರನ್ನಿಂಗ್ ರೇಸ್; ಯಾರು ಗೆದ್ದರು ನೋಡಿ ಈ ರೇಸ್ ನಲ್ಲಿ! ರೈಲು ಚಾಲಕ ಮಾಡಿದ್ದೇನು?

ಇಲ್ಲಿಯವರೆಗೆ ನಾವು ಮೊಲ ಮತ್ತು ಆಮೆಯ ಓಟದ ಕಥೆಯನ್ನೇ ಕೇಳಿದ್ದೇವೆ. ಅದರಲ್ಲಿ ಕೊನೆಗೆ ಆಮೆ ಗೆದ್ದದ್ದು ಸಹಜವಾಗಿಯೇ ಎಲ್ಲರಿಗೂ ನೆನಪಿದೆ ಅಥವಾ ಗೊತ್ತಿದೆ. ಆದರೆ ಇಂದಿನ ಲೇಖನದಲ್ಲಿ ಮೊಲ ಮತ್ತು ರೈಲಿನ ಮಧ್ಯೆ ನಡೆದ ಒಂದು ರೇಸಿನ ಬಗ್ಗೆ ಹೇಳಲಿದ್ದೇವೆ. ಆದರೆ ಇಲ್ಲಿ ಗೆಲ್ಲುವುದಕ್ಕಾಗಿ ಅಲ್ಲ ತನ್ನ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ಸ್ಪರ್ಧೆ ನಡೆದ ಹಾಗಿತ್ತು. ಮೊಲದ ರೇಸ್ ನಿಂದ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿತಿದ್ದೇವೆ. ಇಂದು ನೋಡುವ ಈ ರೇಸ್ ನಲ್ಲಿ ಮೊಲವು ತನ್ನ ಜೀವವನ್ನು ಉಳಿಸಿಕೊಂಡು ಬಾಜಿ ಗೆದ್ದಿದೆ.

ನೋಡಿ ಈ ವೀಡಿಯೋ….

ಸೋಶಿಯಲ್ ಮೀಡಿಯಾದಲ್ಲಿ ಮೊಲದ ರೇಸಿನ ವಿಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ಇಲ್ಲಿ ಒಂದು ಸುಂದರವಾದ ಮುದ್ದಾದ ಚಿಕ್ಕ ಮೊಲ ರೈಲಿನ ಟ್ರ್ಯಾಕ್ ನಲ್ಲಿ ಓಡುತ್ತಿರುವುದು ಕಂಡು ಬರುತ್ತದೆ. ಈ ದೃಶ್ಯ ನೋಡಿದಾಗ ಮೊಲ ಇನ್ನೇನು ರೈಲಿನ ಕೆಳಗೆ ಸಿಕ್ಕು ಸಾಯುತ್ತದೆ ಎಂದು ಮನಸು ಗಾಬರಿಯಾಗುತ್ತದೆ. ಇದು ರೈಲು ನಡೆಸುವ ಮೋಟರ್ ಮನ್ ಗಮನಕ್ಕೆ ಬರುತ್ತಿದ್ದಂತೆ ಆತ ರೈಲಿನ ವೇಗ ಕಡಿಮೆ ಮಾಡಿ ಅದು ಓಡಿಹೋಗಲು ಸಮಯಾವಕಾಶ ನೀಡಿದ್ದಾನೆ. ಆದರೆ ಮೊಲ ಮಾತ್ರ ರೈಲಿನ ಹಳಿಯ ಮಧ್ಯೆದಲ್ಲಿಯೇ ಸಾಗುತ್ತಿರುತ್ತದೆ. ಆಗ ಮೋಟರ್ ಮನ್ ರೈಲಿನ ಹಾರ್ನ್ ಬಾರಿಸಿ ಅದಕ್ಕೆ ಮತ್ತೆ ಜಾಗ್ರತೆ ಮಾಡುತ್ತಾನೆ. ಆಗ ಮೊಲ ತನ್ನ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿವಾಗುತ್ತದೆ.

ಎಲ್ಲರಿಗೂ ಹಿಡಿಸಿದ ಈ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಹಾಗ್ ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ. ಜೊತೆಗೆ ಅನೇಕ ರೀತಿಯ ಕಾಮೆಂಟ್ಸ್ ಗಳನ್ನು ಸಹಿತ ಮಾಡಿದ್ದಾರೆ. ಕೆಲವರಂತೂ ರೈಲಿನ ಚಾಲಕನನ್ನು ಬಾಯಿತುಂಬಾ ಹೊಗಳಿದ್ದಾರೆ. ಅದರಲ್ಲಿ ಒಬ್ಬನು ರೈಲಿನ ಚಾಲಕ ಸಹಜವಾಗಿ ಮೊಲವನ್ನು ತುಳಿದು ಮುಂದೆ ಹೋಗಬಹುದಿತ್ತು ಆದರೆ ಆತ ಹಾಗೆ ಮಾಡದೆ ರೈಲಿನ ವೇಗ ಕಡಿಮೆ ಮಾಡುವದರ ಜೊತೆಗೆ ಅದು ಟ್ರ್ಯಾಕ್ ನಿಂದ ಹೊರಗೆ ಬೀಳುವವರೆಗೆ ವೇಟ್ ಮಾಡಿದ, ತುಂಬಾ ಥ್ಯಾಂಕ್ಸ್ ಎಂದಿದ್ದಾನೆ.

ಈ ವಿಡಿಯೋ ಮಾತ್ರ ನೆಟ್ಟಿಗರಿಗೆ ತುಂಬಾ ಹಿಡಿಸಿದೆ. ಜೊತೆಗೆ ಸೋಶಿಯಲ್ ಮೀಡಿಯಾದ ಬೇರೆ ಬೇರೆ ಪ್ಲಾಟ್ ಫಾರ್ಮ್ ಗಳಲ್ಲಿ ಶೇರ್ ಸಹ ಮಾಡುತ್ತಿದ್ದಾರೆ.