Video; DJ ಮೇಲೆ ಡಾನ್ಸ್ ಮಾಡಿದ್ದು ನೋಡಿದಿರಲ್ಲ? ಈಗ DJ ಮೇಲೆ ಹುಡುಗಿಯರ ಫೈಟ್ ಒಮ್ಮೆ ನೋಡಿಯೇ ಬಿಡಿ..

ಹುಡುಗರ ಎರಡು ಬಣಗಳಲ್ಲಿ ನಡೆಯುವ ಜಗಳ, ಕದನ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಾರಿ ನೋಡಿದ್ದೇವೆ. ಆದರೆ ಇಂಟರ್ನೆಟ್ ನಲ್ಲಿ ಸದ್ಯ ಹುಡುಗಿಯರ ಜಗಳದ ವಿಡಿಯೋ ಒಂದು ಜೋರಾಗಿಯೇ ವೈರಲ್ ಆಗುತ್ತಿದೆ. ಇದನ್ನು ನೋಡಿದ ನಂತರ ನೀವೂ ಆಶ್ಚರ್ಯ ವ್ಯಕ್ತ ಮಾಡಬಹುದು. ರಸ್ತೆಯ ಮೇಲೆ ಹುಡುಗಿಯರ ಬಣ ಆಕಸ್ಮಿಕವಾಗಿ ಕದನಕ್ಕೆ ಪ್ರಾರಂಭ ಮಾಡಿಬಿಡುತ್ತದೆ. ಬ್ಯಾಗ್ರೌಂಡ್ ನಲ್ಲಿ ಜೋರಾದ ಡಿಜೆ ಮ್ಯೂಸಿಕ್ ಕೇಳಿ ಬರುತ್ತಿದೆ. ಈ ಜಗಳದಲ್ಲಿ ಹುಡುಗಿಯರು ಒಬ್ಬರಿಗೊಬ್ಬರ ತಲೆ ಕೂದಲನ್ನು ಹಿಡಿದು ಎಳೆಯಲು ಶುರು ಮಾಡುತ್ತಾರೆ. ಜಗಳವನ್ನು ಬಿಡಿಸಲು ಮಧ್ಯದಲ್ಲಿ ಕೆಲವರು ಪ್ರವೇಶ ಮಾಡುತ್ತಾರಾದರೂ ಜಗಳ ಮಾತ್ರ ನಿಲ್ಲುವ ಲಕ್ಷಣ ಕಂಡು ಬರುವುದಿಲ್ಲ. ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿದಾಗ ಜಗಳದ ಕಾರಣವೇ ತಿಳಿದು ಬರುವುದಿಲ್ಲ.

ಇಂಟರ್ನೆಟ್ ನಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಹುಡುಗಿಯರು ತಮ್ಮ ತಮ್ಮಲ್ಲಿಯೇ ಜಗಳಕ್ಕೆ ಇಳಿದಿದ್ದಾರೆ. ಪ್ರಸ್ತುತ ವಿಡಿಯೋ ಛತ್ತೀಸ್ಗಡದ ಶಿವರಾಜ್ ಪುರ ಜಿಲ್ಲೆಯಿಂದ ವರದಿಯಾಗಿದೆ. ಇಲ್ಲಿ ನಡೆದಿರುವ ಜಗಳದ ಕಾರಣ ಮಾತ್ರ ಇನ್ನು ತಿಳಿದು ಬಂದಿಲ್ಲ. ಕೊನೆಗೆ ಅಲ್ಲಿಯ ಸ್ಥಾನಿಕರು ಜಗಳ ಬಿಡಿಸುವಲ್ಲಿ ಸಫಲರಾಗಿದ್ದಾರೆ.

ನೋಡಿ ಈ ವಿಡಿಯೋ…

ಡಿಜೆ ಶಬ್ದದಲ್ಲಿಯೇ ಹುಡುಗಿಯರು ಇಳಿದರು ಕದನಕ್ಕೆ

ಜಗಳ ನಡೆದಿರುವ ಸಂದರ್ಭದಲ್ಲಿ ಅಲ್ಲಿಯ ಸ್ಥಾನಿಕರು ಪ್ರಸ್ತುತ ದೃಶ್ಯವನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಪ್ರಸ್ತುತ ವಿಡಿಯೋ ಇದು ಅವರ ಜಿಲ್ಲೆಯಲ್ಲಿಯೇ ದೊಡ್ಡ ಸುದ್ದಿ ಮಾಡಿದೆ.