Viral video: ಆರ್ಪಿಎಫ್ ಸಿಬ್ಬಂದಿ ಇಲ್ಲದಿದ್ದರೆ ಇಂದು ಈ ವ್ಯಕ್ತಿ ಬದುಕುತ್ತಿರಲಿಲ್ಲ, ಸಿಸಿಟಿವಿಯಲ್ಲಿ ಸೆರೆಯಾಗಿರುವ ಆಘಾ#ತಕಾರಿ ಘಟನೆ!!
ಓಡುತ್ತಿರುವ ರೈಲಿನಲ್ಲಿ ಹತ್ತುವುದು ಅಥವಾ ಇಳಿಯುವುದು ತುಂಬಾ ಅಪಾ#ಯಕಾರಿಯಾಗಿರುತ್ತದೆ. “ಚಲಿಸುತ್ತಿರುವ ರೈಲಿನಲ್ಲಿ ಹತ್ತಬೇಡಿ ಅಥವಾ ಇಳಿಯಬೇಡಿ” ಎಂದು ಪ್ರಯಾಣಿಕರಿಗೆ ಪದೇ ಪದೇ ರೈಲ್ವೇ ಆಡಳಿತವು ಹೇಳುತ್ತಿರುತ್ತದೆ. ಆದರೆ, ಪ್ರಯಾಣಿಕರು ಮಾತ್ರ ಈ ಸೂಚನೆಯ ಪಾಲನೆ ಮಾಡದೆ ತಮ್ಮ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸುತ್ತಾರೆ. ಇಂತಹದೊಂದು ಘಟನೆ ಪುಣೆ ರೈಲು ನಿಲ್ದಾಣದ ಪರಿಸರದಲ್ಲಿ ನಡೆದಿದೆ.
ಇಲ್ಲಿ ಪ್ರಯಾಣಿಕನೊಬ್ಬ ಓಡುತ್ತಿರುವ ರೈಲಿನಿಂದ ಕೆಳಗಿಳಿಯಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಫ್ಲ್ಯಾಟ್ ಫಾರಂ ಮೇಲೆ ಕುಸಿದು ಬೀಳುತ್ತಾನೆ.ಇನ್ನೇನು ಈ ವ್ಯಕ್ತಿ ರೈಲಿನ ಕೆಳಗೆ ಹೋಗುವ ಕೆಲವೇ ಸೆಕೆಂಡ್ ಗಳಿದ್ದವು ಅಷ್ಟರಲ್ಲಿ ಅಲ್ಲಿ ಕಾರ್ಯನಿರತ ವಾಗಿದ್ದ ಆರ್ ಪಿ ಎಫ್ ಜವಾನ್ ದೇವರಂತೆ ಬಂದು ಆತನನ್ನು ರೈಲಿನಿಂದ ದೂರಕ್ಕೆ ಎಳೆದು ಆತನ ಪ್ರಾಣ ಉಳಿಸಿದ್ದಾನೆ. ಮೈ ಝಲ್ಲೆನಿಸುವ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಷ್ಟಕ್ಕೂ ಅಲ್ಲಿ ನಡೆದದ್ದು ಏನು?
ಸಿಕ್ಕಿರುವ ಮಾಹಿತಿ ಪ್ರಕಾರ, ಈ ರೋಚಕ ಘಟನೆ ಶನಿವಾರ (ಸೆಪ್ಟೆಂಬರ್ 4) ಮಧ್ಯಾಹ್ನದ ಸುಮಾರಿಗೆ ನಡೆದಿದೆ. ಹೈದರಾಬಾದ್ನಿಂದ ಪುಣೆಗೆ ಬರುತ್ತಿದ್ದ ಹುಸೇನ್ ಸಾಗರ್ ಎಕ್ಸ್ಪ್ರೆಸ್ ಪುಣೆ ರೈಲು ನಿಲ್ದಾಣದಲ್ಲಿ ನಿಂತಿತು. ಅದೇ ಸಮಯಕ್ಕೆ ರೈಲು ಮುಂದಿನ ನಿಲ್ದಾಣಕ್ಕೆ ತೆರಳಲು ಮುಂದಾದಾಗ ಒಬ್ಬ ಪ್ರಯಾಣಿಕ ಓಡುತ್ತಿದ್ದ ರೈಲಿನಿಂದ ಜಿಗಿದ. ರೈಲಿನ ವೇಗದಿಂದಾಗಿ ವ್ಯಕ್ತಿ ಪ್ಲಾಟ್ಫಾರ್ಮ್ ಮೇಲೆ ಬಿದ್ದನು.
ರೈಲು ಹೊರಟಿರುವಾಗ ಆತನು ನೇರವಾಗಿ ರೈಲಿನ ಕೆಳಗೆ ಹೊರಟಿದ್ದ ಅಷ್ಟರಲ್ಲಿ ಆರ್ ಪಿಎಫ್ ಜವಾನ್ ಬಂದು ಆತನನ್ನು ಹಿಡಿದು ಬದಿಗೆ ಎಳೆದನು ಇದರಿಂದ ಆತನ ಜೀವ ಉಳಿಯಿತು. ಮೈಮೇಲೆ ನವಿರೇಳಿಸುವ ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ವ್ಯಕ್ತಿಯನ್ನು ವಿಚಾರಿಸಿದಾಗ, ವ್ಯಕ್ತಿಗೆ ಪುಣೆ ಸ್ಟೇಶನ್ ನಲ್ಲಿ ಇಳಿಯುವದಿತ್ತು ಆದರೆ ವ್ಯಕ್ತಿಗೆ ನಿದ್ರೆ ಬಂದಿದ್ದರಿಂದ ಸ್ಟೇಶನ್ ಬಂದಿರುವದು ಗೊತ್ತೇ ಆಗಲಿಲ್ಲ, ಕೊನೆಗೆ ಟ್ರೈನ್ ಹೊರಡಲು ಹಾರ್ನ್ ಹೊಡೆದಾಗ ವ್ಯಕ್ತಿಗೆ ಎಚ್ಚರವಾಯಿತು, ಪುಣೆ ಸ್ಟೇಶನ್ ಬಂದಿರುವದನ್ನು ಖಚಿತವಾದಗ ಆತುರಾತುರವಾಗಿ ರೈಲಿನಿಂದ ಇಳಿಯಲು ಪ್ರಯತ್ನ ಪಟ್ಟಾಗ ಆತನು ಕೆಳಗಡೆ ಬಿದ್ದಿದ್ದಾನೆ’ ಎಂದು ತಿಳಿದು ಬಂದಿದೆ.
ವಿಡಿಯೋ ನೋಡಿ
आरपीएफ कर्मचारी की सतर्कता से बची यात्री की जान!
महाराष्ट्र के पुणे स्टेशन पर चलती ट्रेन से उतरने के दौरान एक यात्री संतुलन खो बैठा, जिसे वहां तैनात सजग आरपीएफ कर्मियों ने बचाया।
सभी से अनुरोध है कि चलती ट्रेन में चढ़ने/उतरने का प्रयास ना करें, यह जानलेवा हो सकता है। pic.twitter.com/LpNuAT6Qy2
— Ministry of Railways (@RailMinIndia) September 6, 2022