VIRAL VIDEO : ಏರ್ ಹೋಸ್ಟೆಸ್ ಮೇಲೇರಿತು ಪುಷ್ಪ ಫೀವರ್; ಸಾಮಿ ಸಾಮಿ ಹಾಡಿಗೆ ಕುಣಿದಳು ರಶ್ಮಿಕಾಗಿಂತಲೂ ಭರ್ಜರಿಯಾಗಿ!
ಪುಷ್ಪ ಚಿತ್ರ ತೆರೆಕಂಡ ನಂತರ ಅದರ ಹವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗ ಈ ಚಿತ್ರದ ಫೀವರ್ ಒಬ್ಬಳು ಏರ್ ಹೋಸ್ಟೆಸ್ ಮೇಲೆ ಏರಿದೆ. ಸಾಮಿ ಸಾಮಿ ಹಾಡಿನ ಮೇಲೆ ಈ ಗಗನಸಖಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾಳೆ. ಈ ಡ್ಯಾನ್ಸ್ ನೋಡಿ ಬಹುಶಃ ಚಿತ್ರದಲ್ಲಿಯ ನಟಿ ರಶ್ಮಿಕಾಳು ಸಹ ನಾಚಬೇಕು.
ನಟ ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಇವರ ಮುಖ್ಯಪಾತ್ರದಲ್ಲಿ ಮೂಡಿಬಂದ ಪುಷ್ಪ ಚಿತ್ರ ದಿನದಿಂದ ದಿನಕ್ಕೆ ಅಭಿಮಾನಿಗಳಲ್ಲಿ ಕ್ರೇಜ್ ನಿರ್ಮಾಣ ಮಾಡುತ್ತಿದೆ. ಈ ಚಿತ್ರದಲ್ಲಿಯ ಹಾಡುಗಳು, ಡೈಲಾಗ್ಸ್ ಮತ್ತು ಭರ್ಜರಿ ಲುಕ್ ಚಿತ್ರರಸಿಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರು ತಮ್ಮ ಮನಸ್ಸಿಗೆ ಬಂದಂತೆ ವಿವಿಧ ಪ್ರಕಾರದ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಡುತ್ತಿದ್ದಾರೆ.
ಇವರಲ್ಲಿ ಏರ್ ಹೋಸ್ಟೆಸ್ ಒಬ್ಬಳು ಪುಷ್ಪ ಚಿತ್ರದ ಹಾಡಿನ ಮೇಲೆ ಕುಣಿದ ವಿಡಿಯೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾಳೆ. ಈ ಡ್ಯಾನ್ಸ್ ನೋಡಿ ರಶ್ಮಿಕಾಳಿಗೂ ಸಹ ಹೊಟ್ಟೆ ಉರಿಯಬೇಕು ಹಾಗೆ ಡಾನ್ಸ್ ಮಾಡಿದ್ದಾಳೆ. ಈ ಗಗನಸುಂದರಿಯ ವಿಡಿಯೋ ನೋಡಿದಾಗ ನೀವು ಸಹ ಇದೇ ಮಾತನ್ನು ಹೇಳುವಿರಿ.
ಇಂಡಿಗೋ ಏರ್ ಹೋಸ್ಟೆಸ್ ಸೋಶಿಯಲ್ ಮೀಡಿಯಾದಲ್ಲಿ ಈ ಮೊದಲು ಸಹ ಅನೇಕ ಹಾಡುಗಳ ಮೇಲೆ ನೃತ್ಯ ಮಾಡಿದ ವಿಡಿಯೋ ಶೇರ್ ಮಾಡಿದ್ದರು. ಈಗ ಪುಷ್ಪ ಫೀವರ್ ಏರಿದಾಗ ಹೇಗೆ ಸುಮ್ಮನೆ ಕೂಡಲು ಸಾಧ್ಯ. ಹೀಗಾಗಿ ಸಾಮಿ ಸಾಮಿ ಹಾಡಿನ ಮೇಲೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರಿಂದ ಈಗ ತುಂಬಾ ಚರ್ಚೆಯಲ್ಲಿದೆ. ನಿಜವಾಗಿಯೂ ಈ ಗಗನಸುಂದರಿ ಅದ್ಭುತವಾಗಿ ಕುಣಿದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಕಾಣುತ್ತಿರುವ ಈ ಸುಂದರಿಯ ಹೆಸರು ಆಯತ್ ಉಲ್ ಆಫರಿನ್ ಇದ್ದು ಈ ಹಾಡಿನ ಮೇಲೆ ಸ್ಟೆಪ್ ಹಾಕುವಾಗ ನಮ್ಮ ಸೌತ್ ಇಂಡಿಯನ್ ಇಂಡಿಯನ್ ಸೀರೆಯನ್ನು ತೊಟ್ಟಿದ್ದಾರೆ. ಜೊತೆಗೆ ಸುಂದರವಾದ ಆಭರಣಗಳನ್ನು ತೊಟ್ಟುಕೊಂಡಿದ್ದರಿಂದ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದಾರೆ. ಈ ಸಂಪ್ರದಾಯಬದ್ಧ ಉಡುಪಿನ ಮೇಲೆ ಸುಂದರವಾಗಿ ನೃತ್ಯ ಮಾಡಿದ್ದರಿಂದ ನೇಟಿಜನ್ಸ್ ಗಳು ತುಂಬಾ ಇಂಪ್ರೆಸ್ ಆಗಿದ್ದಾರೆ.
ನೋಡಿ ಈ ವಿಡಿಯೋ…
ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ವೀಕ್ಷಿಸಿದ್ದಾರೆ. ಮತ್ತು ಸುಮಾರು 20 ಸಾವಿರ ಲೈಕ್ಸ್ ಗಳು ಬಂದಿವೆ. ಕಾಮೆಂಟ್ನಲ್ಲಿ ನೇಟಿಜನ್ಸ್ ಗಳು ಈ ಗಗನಸುಂದರಿಯ ಡಾನ್ಸಿನ ಜೊತೆಗೆ ಆಕೆಯ ಸೌಂದರ್ಯದ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನು ಆಡಿದ್ದಾರೆ.