Viral video : ಒಡತಿಯ ಕೈಯಲ್ಲಿದ್ದ ವಸ್ತು ನೋಡಿ ನಾಯಿಯ ಸಂತೋಷ ಗಗನದೆತ್ತರಕ್ಕೆ ; ನಾಯಿಯು ತೋರಿದ ಈ ರಿಯಾಕ್ಷನ್ ಗೆ ನೇಟಿಜನ್ಸ್ ಆಶ್ಚರ್ಯ!

ಸಾಕು ಪ್ರಾಣಿಗಳ ವಿಡಿಯೋಗಳು ಇತ್ತಿತ್ತಲಾಗಿ ಎಲ್ಲರಿಗೂ ತುಂಬಾನೇ ಇಷ್ಟವಾಗುತ್ತಿವೆ. ಪ್ರಾಣಿಗಳ ಮುಗ್ಧ ವರ್ತನೆ ಎಲ್ಲರಿಗೂ ಮಂತ್ರಮುಗ್ಧ ಮಾಡುತ್ತವೆ. ಮನೆಯಲ್ಲಿ ಸಾಕುವ ನಾಯಿಯಾಗಿರಲಿ ಅಥವಾ ಬೆಕ್ಕು ಈ ಎರಡು ಪ್ರಾಣಿಗಳಿಗೆ ಮನೆಯಲ್ಲಿಯ ಎಲ್ಲ ಸದಸ್ಯರೂ ತುಂಬಾ ಮಮತೆ, ಪ್ರೀತಿ ನೀಡುತ್ತಾರೆ. ಅವುಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬರುತ್ತವೆ. ಈಗೊಂದು ನಾಯಿಯ ವಿಡಿಯೋ ತುಂಬಾ ಚರ್ಚೆಯಲ್ಲಿದೆ.

ವಿಡಿಯೋದಲ್ಲಿ ಕಂಡು ಬರುವ ನಾಯಿ ತನ್ನ ಒಡತಿಯ ಕೈಯಲ್ಲಿಯ ವಸ್ತುವೊಂದನ್ನು ನೋಡಿದ ತಕ್ಷಣ ನಿಂತಲ್ಲಿಯೇ ಖುಷಿಯಿಂದ ಒಂದೇ ಸವನೆ ಹವೆಯಲ್ಲಿ ಕುಣಿದು ಕುಪ್ಪಳಿಸಲು ಪ್ರಾರಂಭ ಮಾಡುತ್ತದೆ. ಈ ವಿಡಿಯೋ ನೋಡುಗರಿಗೆ ತುಂಬಾ ಇಷ್ಟವಾಗುತ್ತಿದೆ.

ಏನಿದೆ ವಿಡಿಯೋದಲ್ಲಿ….?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಾಯಿ ಮತ್ತು ಅದರ ಒಡತಿ ಕಾಣುತ್ತಿದ್ದಾರೆ. ಒಡತಿಯು ನಾಯಿಗಾಗಿ ಬೀರುವಿನಿಂದ ವಸ್ತು ಒಂದನ್ನು ತೆಗೆಯುತ್ತಾಳೆ. ನಾಯಿಯು ಆ ವಸ್ತುವನ್ನು ನೋಡುತ್ತಲೇ ಖುಷಿಯಿಂದ ಎತ್ತರ ಎತ್ತರವಾಗಿ ಜಂಪ್ ಮಾಡಲು ಪ್ರಾರಂಭಿಸುತ್ತದೆ. ನಾಯಿಯ ಈ ಆನಂದದ ಕುಣಿತ ನೋಡುಗರಿಗೆ ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ. ಹೀಗಾಗಿ ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿದೆ.

ವಿಡಿಯೋ ನೋಡಿ

ವಿಡಿಯೋ ನೋಡಿದ ನೆಟ್ಟಿಗರು ಅನೇಕ ರೀತಿಯ ಸ್ವಾರಸ್ಯಕರ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಈ ವೀಡಿಯೋವನ್ನು ಇನ್ಸ್ಟಾಗ್ರಾಮ್ ನ pawficionados ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಇನ್ನೊಂದು ವಿಶೇಷವೇನೆಂದರೆ ಈ ವಿಡಿಯೋದಲ್ಲಿ ನಾಯಿಯ ಜಿಗಿತ ನೋಡಿದ ನಂತರ ಮತ್ತೊಮ್ಮೆ ಮಗದೊಮ್ಮೆ ನೋಡಬೇಕೆನಿಸುತ್ತದೆ. ನಾಯಿಯ ಎತ್ತರದ ಜಿಗಿತ ನೋಡಿ ಯೂಸರ್ ನೊಬ್ಬ ಈ ನಾಯಿಗೆ ಒಲಂಪಿಕ್ ಗೆ ಕಳುಹಿಸಬೇಕು ಎಂದಿದ್ದಾನೆ. ಇನ್ನೊಬ್ಬ ಈ ನಾಯಿಗೆ ಮೆಡಲ್ 100 % ಫಿಕ್ಸ್ ಎಂದಿದ್ದಾನೆ.