Viral Video: ಕೈಯಲ್ಲಿ ಚಾಕು ಹಿಡಿದು ಬಂದ ಮಂಗ ಮಾಡಿದ್ದೇನು ನೋಡಿ ಈ ವೈರಲ್ ವಿಡಿಯೋದಲ್ಲಿ…ನಾನು ತಯಾರ್!
ಸೋಶಿಯಲ್ ಮೀಡಿಯಾದ ಈ ಅದ್ಭುತ ಜಗತ್ತಿನಲ್ಲಿ ಯಾವಾಗ ಏನು ನೋಡಲು ಸಿಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಸದ್ಯ ಈಗ ಎಲ್ಲರಿಗೂ ಬೆರಗುಗೊಳಿಸುವಂತಹ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಪ್ರಸ್ತುತ ವಿಡಿಯೋದಲ್ಲಿ ಒಂದು ಮಂಗವಿದೆ. ಇಲ್ಲಿಯವರೆಗೆ ಮಂಗವು ಅತ್ತಿಂದಿತ್ತ ಇತ್ತಿಂದತ್ತ ಹಾರಾಡುವ ಮತ್ತು ಚೇಷ್ಟೆ ಮಾಡುವ ವಿವಿಧ ವಿಡಿಯೋಗಳನ್ನಷ್ಟೆ ನೋಡಿದ್ದೇವೆ. ಎಷ್ಟೋ ಮಂಗಗಳು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಅನೇಕ ವಸ್ತುಗಳನ್ನು ಕಸಿದುಕೊಂಡು ಹೋಗುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಈ ವಿಡಿಯೋದಲ್ಲಿ ಒಂದು ಮಂಗವು ಚಾಕುವನ್ನು ಹರಿತ ಮಾಡುತ್ತಿದೆ. ಹೌದು ಇದು ನಿಜವಾಗಿದೆ. ಇದೇ ಕಾರಣದಿಂದಾಗಿ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೇಗದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಐಪಿಎಸ್ ಅಧಿಕಾರಿಯಾಗಿ ರೂಪಿನ ಶರ್ಮ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಜೊತೆಗೆ ಕ್ಯಾಪ್ಷನ್ ನಲ್ಲಿ “ನಾನು ತಯಾರಿದ್ದೇನೆ” ಎಂದು ಬರೆದಿದ್ದಾರೆ. 30 ಸೆಕೆಂಡಿನ ಈ ವಿಡಿಯೋದಲ್ಲಿ ಮಂಗವು ಮನುಷ್ಯನ ಹಾಗೆಯೇ ಚಾಕುವಿಗೆ ಕಲ್ಲಿನ ಸಹಾಯದಿಂದ ಹರಿತ ಮಾಡುತ್ತಿದೆ. ಮಂಗವು ಮೊದಲು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಚಾಕುವಿಗೆ ನೀರು ತಾಗಿಸುತ್ತದೆ. ನಂತರ ಎರಡು ಬದಿಯಿಂದ ಕಲ್ಲಿನ ಮೇಲೆ ತಿಕ್ಕಿ ಹರಿತ ಗೊಳಿಸಲು ಪ್ರಯತ್ನ ಮಾಡುವದನ್ನು ನೋಡಬಹುದು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಜನರು ಸಾಕಷ್ಟು ನೋಡಿ ಜೊತೆಗೆ ಜನರು ತಮ್ಮ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ.
ವಿಡಿಯೋ ನೋಡಿ
Hain tayyar hum…..
— Rupin Sharma IPS (@rupin1992) December 9, 2021
हैं तैयार हम…😊@ParveenKaswan @susantananda3 pic.twitter.com/1i8TGWCkkQ
ಒಬ್ಬ ನೇಟಿಜನ್ಸ್ ‘ಓ ದೇವರೇ, ನಾನೇನು ನೋಡುತ್ತಿದ್ದೇನೆ?’ ಎಂದು ಪ್ರಶ್ನಿಸಿದ್ದಾನೆ. ಇನ್ನೊಬ್ಬ ‘ನಡೆಯಿರಿ ಮೊದಲು ಮಂಗನ ಜೊತೆಗೆ ಯುದ್ಧವಾಗಲಿ’ ಎಂದಿದ್ದಾನೆ. ‘ಈ ಮಂಗವು ಯುದ್ಧಕ್ಕೆ ತಯಾರಿ ಮಾಡುತ್ತಿದೆ’ ಎಂದು ಇನ್ನೊಬ್ಬ ಯೂಸರ್ ಹೇಳಿದ್ದಾನೆ.