Viral Video: ಬೇಟೆಗಾಗಿ ನೀರಿನಿಂದ ಹೊರಬಂದ ಮೊಸಳೆಯಾಯ್ತು ತಬ್ಬಿಬ್ಬು; ಯಾಕೆ ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ನೇಟಿಜನ್ಸ್ ಗಳು ವೈಲ್ಡ್ ಲೈಫ್ ವಿಡಿಯೋಗಳನ್ನು ನೋಡಲು ತುಂಬಾ ಇಷ್ಟಪಡುತ್ತಾರೆ. ವೈರಲ್ ವಿಡಿಯೋಗಳಲ್ಲಿ ಅನೇಕ ವಿಡಿಯೋಗಳು ತುಂಬಾ ತಮಾಷೆಯಿಂದ ಕೂಡಿರುತ್ತವೆ. ಈಗ ಇದೇ ರೀತಿಯ ತಮಾಷೆಯಿಂದ ಕೂಡಿದ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲ ಕಡೆಗೆ ಓಡಾಡುತ್ತಿದೆ.
ವಿಡಿಯೋದಲ್ಲಿ ಒಂದು ವಿಶಾಲ ಕಾಯದ ಮೊಸಳೆ ಕಂಡುಬರುತ್ತಿದೆ. ನೀರಿನಿಂದ ಬೇಟೆಗಾಗಿ ಅಕಸ್ಮಾತ್ ಹೊರಗೆ ಬೀಳುತ್ತದೆ. ಅದು ಹೊರಗೆ ಬಿದ್ದ ನಂತರ ಮೊಸಳೆಯ ಬಡಿದಾಟ ನಿಜಕ್ಕೂ ನೋಡುವಂತಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ ಮತ್ತು ಲೈಕ್ ಸಹ ಮಾಡಿದ್ದಾರೆ.
ಬೇಟೆಯ ಶೋಧದಲ್ಲಿ ನೀರಿನಿಂದ ಹೊರಬಂದ ನಂತರ ಮೊಸಳೆ ಬ್ಯಾಲೆನ್ಸ್ ತಪ್ಪಿ ರಸ್ತೆಯ ಬದಿಗೆ ಇರುವ ತಗ್ಗಿನಲ್ಲಿ ಬಿದ್ದಿದೆ. ತಗ್ಗಿನಲ್ಲಿ ಬಿದ್ದ ನಂತರ ಮೊಸಳೆಯು ಒಮ್ಮೆಲೆ ತಡಬಡಾಯಿಸಿದೆ. ಹಾಗೂ ತನ್ನ ಮೂಲಸ್ಥಳಕ್ಕೆ ನೀರಿನಲ್ಲಿ ಹೋಗಲು ಒಂದೇಸವನೆ ಪ್ರಯತ್ನಿಸುವಾಗ ಮತ್ತೆ ಮತ್ತೆ ನೀರಿನಲ್ಲಿ ಜಾರಿ ಬಿದ್ದಿದೆ. ಮೊಸಳೆಯ ಈ ತಮಾಷೆಯ ದೃಶ್ಯವು ನೆಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಮೊಸಳೆ ಈ ಸಂದರ್ಭದಲ್ಲಿ ಸ್ವಂತಕ್ಕೆ ತುಂಬಾ ಅಸುರಕ್ಷಿತವಾಗಿದ್ದೇನೆಂದು ತಿಳಿದು ತಟ್ಟನೆ ನೀರಿನಲ್ಲಿ ಜಾರಿದೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು helicopter_yatra_ ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. ವೀಡಿಯೋ ನೋಡಿದ ನೇಟಿಜನ್ಸ್ ಗಳು ಸಾಕಷ್ಟು ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ.