Viral Video: ಬೇಸರಕ್ಕೆ ನೂರು ಕಾರಣವಿರಬಹುದು, ಆದರೆ ಕಾರಣವೇ ಇಲ್ಲದೇ ಸಂತೋಷವಾಗಿರುವ ಮಜಾ ಏನೆಂದು ತೋರಿಸಿ ಕೊಟ್ಟ ಮಂಗ!
ಮನುಷ್ಯನ ಜೀವನ ಆಧುನಿಕತೆ ಕಡೆ ಸಾಗಿದಂತೆ, ಅವನ ಜೀವನ ಕೂಡ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಅವರದೇ ಆದ ಕೆಲಸದ ಒತ್ತಡದಲ್ಲಿ ಇರ್ತಾರೆ. ಕೆಲಸದ ಒತ್ತಡ ಯಾವ ಮಟ್ಟಕ್ಕೆ ಇದೆಯೆಂದರೆ ಜನ ನಗುವುದನ್ನು ಕೂಡ ಮರೆತು ಹೋಗಿದ್ದಾರೆ. ಈಗ ನಗುವುದಕ್ಕೂ ಕೂಡ ಕಾರಣವನ್ನು ಹುಡುಕುತ್ತಾರೆ, ಸದಾ ಕೆಲಸ ಕೆಲಸ ಎನ್ನುವ ಭರದಲ್ಲಿ ತಮ್ಮ ಜೀವನದ ಸಣ್ಣ ಸಣ್ಣ ಸಂತೋಷಗಳನ್ನು ಕೂಡಾ ಮರೆತು ಮುಂದೆ ಸಾಗುತ್ತಿದ್ದಾರೆ. ಮನುಷ್ಯನ ಜೀವನ ಒಂದು ರೀತಿಯಲ್ಲಿ ಯಾಂತ್ರಿಕವಾಗಿ ಹೋಗಿದ್ದು, ಇಲ್ಲಿ ಯಾವುದು ಕೂಡಾ ಸ್ವಾಭಾವಿಕ ಎನ್ನುವಂತೆ ಇಲ್ಲ. ಎಲ್ಲಾ ಕೂಡ ವ್ಯಾವಹಾರಿಕವಾಗಿ ನಡೆಯುತ್ತಿದ್ದು, ಒಂದು ನೀರಸ ಬದುಕನ್ನು ಅನೇಕರು ಬದುಕುತ್ತಿದ್ದಾರೆ.
ಜೀವನದಲ್ಲಿ ಸಂತೋಷವಾಗಿ ಇರುವುದಕ್ಕೆ ಕಾರಣ ಎನ್ನುವುದು ಬೇಕಾಗಿಲ್ಲ. ಮನಸ್ಸಿನಲ್ಲಿ ಸಂತೋಷ ಇದ್ದರೆ ಮುಖದ ಮೇಲೆ ತಾನಾಗಿಯೇ ನಗುವೊಂದು ಯಾವಾಗಲೂ ಕೂಡ ಇದ್ದೇ ಇರುತ್ತದೆ. ಆದರೆ ಇಂತಹ ನಗುವಿನ ಜನರು ನಮಗೆ ಕಾಣುವುದು ಬಹಳ ಅಪರೂಪ. ಆದರೆ ಪ್ರಾಣಿಗಳ ಬದುಕಿನಲ್ಲಿ ಮನುಷ್ಯರ ರೀತಿಯಲ್ಲಿ ಯಾವುದೇ ಅನಾವಶ್ಯಕ ಸ್ವಾ ರ್ಥ, ದ್ವೇ ಷ , ಅ ಸೂ ಯೆಗಳು ಅಥವಾ ಭವಿಷ್ಯದ ಬಗ್ಗೆ ಅ ನಾವಶ್ಯಕ ಎನಿಸುವ ಚಿಂ ತೆಗಳು, ಒತ್ತಡಗಳು ಎಂಬುದು ಇಲ್ಲ. ಅವಕ್ಕೆ ಸಂತೋಷವಾಗಿರಲು ನಿರ್ದಿಷ್ಟವಾದ ಕಾರಣ ಕೂಡ ಬೇಕಿಲ್ಲ. ಅವು ತಮ್ಮ ಜೀವನದ ಕೆಲವೇ ಅವಶ್ಯಕತೆಗಳೊಂದಿಗೆ ಬಹಳ ಸಂತೋಷವಾಗಿರುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಸ್ತುತ ವಿಡಿಯೋ ಒಂದು ವೈರಲ್ ಆಗಿದ್ದು, ಈ ವಿಡಿಯೋ ಕಾರಣ ಇಲ್ಲದೆ ನಾವು ಸಂತೋಷವಾಗಿ ಇರುವುದರ ಮಜಾ ಎಂಥದ್ದು ಎಂಬುದನ್ನು ಸ್ಪಷ್ಟವಾಗಿ ಎಲ್ಲರಿಗೂ ತಿಳಿಸುವಂತೆ ಕಂಡಿದೆ ಹಾಗೂ ಬೇಸರದಲ್ಲಿ ಇರುವವರಿಗೆ ಖುಷಿಯಾಗಿರಿ ಎನ್ನುವ ಸಂದೇಶವನ್ನು ಕೂಡಾ ನೀಡುವಂತಿದೆ. ಈ ವೈರಲ್ ವಿಡಿಯೋದಲ್ಲಿ ಕಾಡಿನಲ್ಲಿ ಒಂದು ಕೋತಿ ಬಹಳ ಸಂತೋಷದಿಂದ ಓಡಿ ಬಂದು ಪಲ್ಟಿಗಳನ್ನು ಹೊಡೆಯುತ್ತಾ, ಸಂತೋಷದ ಸವಿಯನ್ನು ಅನುಭವಿಸುವುದನ್ನು ನಾವು ನೋಡಬಹುದಾಗಿದೆ. ಯಾವುದೇ ಕಾರಣ ಕೂಡಾ ಇಲ್ಲದೇ ಹೇಗೆ ನಾವು ಸಂತೋಷವಾಗಿ ದಕ್ಕಿರುವ ಸಮಯವನ್ನು ಸವಿಯಬಹುದು ಎಂದು ಈ ಕೋತಿ ತೋರಿಸಿಕೊಟ್ಟ ಹಾಗಿದೆ.
ಈ ವಿಡಿಯೋ ಶೇರ್ ಮಾಡಿರುವ ಸುಶಾಂತ್ ನಂದ ಅವರು ವಿಡಿಯೋದ ಶೀರ್ಷಿಕೆಯಲ್ಲಿ, “ಜೀವನದಲ್ಲಿ ಬೇಸರವಾಗಲು ನೂರಾರು ಕಾರಣಗಳಿರುತ್ತವೆ, ಆದರೆ ಕಾರಣವಿಲ್ಲದೆ ಸಂತೋಷವಾಗಿರುವುದರ ಮಜವೇ ಬೇರೆ ಎಂದು” ಬರೆದುಕೊಂಡಿದ್ದಾರೆ. ಅವರು ಶೇರ್ ಮಾಡಿರುವ ಈ ವಿಡಿಯೋವನ್ನು ಈಗಾಗಲೇ 26 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಅಲ್ಲದೆ ಎರಡು ಸಾವಿರಕ್ಕಿಂತ ಅಧಿಕ ಮಂದಿ ಇದನ್ನು ಮೆಚ್ಚಿದ್ದಾರೆ, 300ಕ್ಕಿಂತ ಅಧಿಕ ಮಂದಿ ಈ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. ಅಪರೂಪದ ದೃಶ್ಯ ನೋಡಿದ ನೂರಾರು ಜನರು ಇದಕ್ಕೆ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ವಿಡಿಯೋ ನೋಡಿ
बेवजह खुश रहने का मज़ा ही कुछ और है।
— Susanta Nanda (@susantananda3) November 20, 2020
उदासियों की वजह तो बहुत है ज़िन्दगी में.. pic.twitter.com/vCoSDHssxV
ವಿಡಿಯೋ ನೋಡಿದವರಲ್ಲಿ ಬಹುತೇಕ ಎಲ್ಲರೂ ಕೂಡ ಈ ವಿಡಿಯೋವನ್ನು ಮೆಚ್ಚಿಕೊಂಡು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅನೇಕರು ಮನುಷ್ಯ ಕೂಡ ಇದೇ ರೀತಿ ಏಕಿರಬಾರದು? ತಾನು ಸಂತೋಷವಾಗಿ ಇದ್ದು, ಆತ ಇತರರನ್ನು ಕೂಡ ಸಂತೋಷವಾಗಿ ಏಕೆ ಇಡಬಾರದು? ಎಂದು ಪ್ರಶ್ನೆ ಮಾಡಿದ್ದಾರೆ. ಅನೇಕರು ಕೋತಿಯ ಆಟವನ್ನು ನೋಡಿ ಸಂತೋಷ ಉಂಟಾಯಿತು ಎಂದಿದ್ದಾರೆ. ಅಷ್ಟೇ ಅಲ್ಲವೇ ಸ್ನೇಹಿತರೆ ಇರುವ ಈ ನಾಲ್ಕು ದಿನದ ಜೀವನದಲ್ಲಿ ನಾವು ಸಂತೋಷವಾಗಿದ್ದು, ಇತರರನ್ನು ಕೂಡ ಸಂತೋಷವಾಗಿರುವಂತೆ ಮಾಡಿದರೆ ಸಾಕಲ್ಲವೇ?