Viral Video: ಮೆಟ್ರೋದಲ್ಲಿಯೇ ಡಾನ್ಸ್ ಮಾಡಲು ಶುರುಮಾಡಿದ ಯುವತಿಯರನ್ನು ನೋಡಿ ಉಳಿದ ಯಾತ್ರಿಕರು ತಟ್ಟಿದರು ಚಪ್ಪಾಳೆ…

ಸೋಶಿಯಲ್ ಮೀಡಿಯಾದಲ್ಲಿ ಅನೇಕ ರೀತಿಯ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತವೆ. ಈ ರೀತಿಯ ಕಲ್ಪನೆಗೂ ಮೀರಿದ ವಿಡಿಯೋಗಳು ನೋಡಲು ಸಿಗುತ್ತವೆ. ಹೀಗಾಗಿ ಸೋಶಿಯಲ್ ಮೀಡಿಯಾ ಯೂಸರ್ ಗಳಿಗೆ ತುಂಬಾ ಮನರಂಜನೆ ಆಗುತ್ತದೆ. ಈಗ ನೋಡಲಿರುವ ವಿಡಿಯೋ ಹೀಗೆಯೇ ಇದೆ. ಇಲ್ಲಿ ಯುವತಿಯರು ಮೆಟ್ರೋ ಟ್ರೈನ್ ನಲ್ಲಿ ಡಾನ್ಸ್ ಮಾಡಲು ಶುರು ಮಾಡಿದ್ದಾರೆ. ಈ ವಿಡಿಯೋ ಅಲ್ಲಿ ಪ್ರವಾಸ ಮಾಡುವ ಯಾತ್ರಿಕರ ಜೊತೆಗೆ ಸೋಶಿಯಲ್ ಮೀಡಿಯಾ ಯೂಸರ್ ಗಳಿಗೂ ತುಂಬಾ ಇಷ್ಟವಾಗುತ್ತಿದೆ.

ಮೆಟ್ರೋದಲ್ಲಿ ಶೂಟ್ ಆದ ಅನೇಕ ವಿಡಿಯೋಗಳನ್ನು ನೋಡಿರಬಹುದು. ಆದರೆ ಈ ರೀತಿ ಯುವತಿಯರು ಡ್ಯಾನ್ಸ್ ಮಾಡುವ ವಿಡಿಯೋ ನೋಡಿರಲಿಕ್ಕಿಲ್ಲ. ಈ ಯುವತಿಯರು ತಮ್ಮ ಬಗ್ಗೆ ಇಲ್ಲಿ ಕುಳಿತ ಯಾತ್ರಿಕರು ಏನು ವಿಚಾರ ಮಾಡಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೆ ತುಂಬಾ ಬಿಂದಾಸ್ ಆಗಿ ಕುಣಿದಿದ್ದಾರೆ ಮತ್ತು ಎಂಜಾಯ್ ಮಾಡುತ್ತಿದ್ದಾರೆ.

ನೋಡಿ ಈ ವಿಡಿಯೋ…

ಮೆಟ್ರೋದಲ್ಲಿ ಕುಣಿಯುತ್ತಿರುವ ಈ ಯುವತಿಯರನ್ನು ನೋಡಿ ಅಲ್ಲಿ ಪ್ರವಾಸ ಮಾಡುತ್ತಿರುವ ಯಾತ್ರಿಕರೂ ಸಹ ಚಪ್ಪಾಳೆ ತಟ್ಟಿ ಎಪ್ರಿಷಿಯೇಟ್ ಮಾಡಿದ್ದಾರೆ. ಅಲ್ಲಿರುವ ಇಬ್ಬರು ಮಹಿಳೆಯರು ಸೀರೆಯ ಮೇಲೆ ತುಂಬಾ ಸಹಜವಾಗಿ ನೃತ್ಯ ಮಾಡಿದ್ದಾರೆ. ಇದರಿಂದಾಗಿ ಪ್ರವಾಸ ಮಾಡುತ್ತಿರುವ ಯಾತ್ರಿಕರಿಗೂ ಸ್ವಲ್ಪ ಏನಾದರೂ ಹೊಸದು ನೋಡಲು ಸಿಕ್ಕಿತು. ಇನ್ನು ಕೆಲವರಿಗೆ ಮೆಟ್ರೋದಲ್ಲಿ ಮಾಡುತ್ತಿರುವ ಈ ನೃತ್ಯ ಇಷ್ಟವಾಗಿಲ್ಲ.

ವಿಡಿಯೋ ನೋಡಿ

ಈ ಮಹಿಳೆಯರು ಮಾಡುತ್ತಿರುವ ಡಾನ್ಸ್ ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಅದೇ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಹೆಚ್ಚಾಗಿ ಚಿಕ್ಕಮಕ್ಕಳ ವಿಡಿಯೋಗಳು ಈ ರೀತಿ ವೈರಲ್ ಆಗುತ್ತವೆ ಆದರೆ ಮೆಟ್ರೋದಲ್ಲಿ ಶೂಟ್ ಆದ ಈ ವಿಡಿಯೋದಲ್ಲಿ ಯುವತಿಯರೇ ಡ್ಯಾನ್ಸ್ ಮಾಡಿದ್ದಾರೆ.