Viral Video: ರಿಪೋರ್ಟರ್ ಕಾಲೇಜ್ ಹುಡುಗಿಗೆ, ಗಣರಾಜ್ಯೋತ್ಸವದ ದಿನ ಏನು ಮಾಡಲಾಗುತ್ತದೆ? ಎಂದು ಕೇಳಿದಾಗ… ಆಕೆಯ ರಿಯಾಕ್ಷನ ಅಬ್ಬಾ! ಸುಪ್ಪರ್!

ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ಅದ್ಭುತವಾದ ಸೀನ್ ಗಳು ನೋಡಲು ಸಿಗುತ್ತವೆ. ಜನರ ಮನರಂಜನೆ ಸೋಶಿಯಲ್ ಮೀಡಿಯಾದಿಂದ ಹೇಳತೀರದಷ್ಟು ಆಗುತ್ತಿದೆ. ಸದ್ಯ ಕಾಲೇಜು ಹುಡುಗಿಯ ವಿಡಿಯೋ ಒಂದು ನೇಟಿಜನ್ಸಗಳಿಗೆ ತುಂಬಾ ಮನರಂಜನೆ ನೀಡುತ್ತಿದೆ.

ಈ ವಿಡಿಯೋದಲ್ಲಿ ಕಾಲೇಜು ಹುಡುಗಿಗೆ ರಿಪೋರ್ಟರ್ ಒಬ್ಬ ಕ್ಯಾಮೆರಾದ ಮುಂದೆ ಪ್ರಶ್ನೆ ಒಂದು ಕೇಳುತ್ತಾನೆ. ಈ ಪ್ರಶ್ನೆಗೆ ಹುಡುಗಿಯು ಕೊಟ್ಟ ರಿಯಾಕ್ಷನ್ ತುಂಬಾ ವಿಚಿತ್ರ ಹಾಗೂ ಮನರಂಜನೆ ನೀಡುವಂತದ್ದಾಗಿದೆ.

ವರದಿಗಾರ ಪ್ರಶ್ನೆಯನ್ನು ಕೇಳುವ ಮುನ್ನ ಕಾಲೇಜ್ ಹುಡುಗಿಗೆ ತನ್ನ ಹೆಸರು ಹೇಳಲು ಹೇಳುತ್ತಾನೆ. ನಂತರ ತನ್ನ ಪ್ರಶ್ನೆಯಲ್ಲಿ ಗಣರಾಜ್ಯೋತ್ಸವ ಯಾಕೆ ವಿಶೇಷವಾಗಿದೆ? ಅಂದು ಏನು ನಡೆದಿತ್ತು? ಎಂದು ಕೇಳುತ್ತಾನೆ. ಪ್ರಶ್ನೆಯನ್ನು ಕೇಳಿದ ಹುಡುಗಿ ತಕ್ಷಣ ಉತ್ತರಿಸಲು ಮುಂದಾಗುತ್ತಾಳೆ. ಮೊದಲು ಆಕೆ ತನ್ನ ಹೆಸರನ್ನು ನೇಹಾ ಪ್ರಜಾಪತ್ ಎಂದು ಸರಿಯಾಗಿ ಹೇಳುತ್ತಾಳೆ, ತದನಂತರ ಮುಖ್ಯ ಪ್ರಶ್ನೆಯ ಉತ್ತರವನ್ನು ನೀಡುವಾಗ ಒಮ್ಮೆಲೇ ಕನ್ಫ್ಯೂಸ್ ಆಗಿ ಬಿಡುತ್ತಾಳೆ. ಆಕೆಗೆ ಕ್ಯಾಮೆರಾದ ಮುಂದೆ ಏನು ಉತ್ತರಿಸಬೇಕೆಂಬವೇ ತಿಳಿಯುವುದಿಲ್ಲ. ತನ್ನ ಹೆಸರು ಹೇಳಿದ ನಂತರ ಹುಡುಗಿ ಕೆಲವು ಕ್ಷಣ ಪಾಜ್ ಆಗುತ್ತಾಳೆ. ಆಮೇಲೆ ಗಣರಾಜ್ಯೋತ್ಸವ ದಿನ…..ಇಷ್ಟನ್ನು ಹೇಳಿ ಹುಡುಗಿ ತನ್ನ ಮುಖ ಮುಚ್ಚಿಕೊಂಡು ನಾಚಿಕೆಯಿಂದ ಅಲ್ಲಿಂದ ಜಾರಿ ಬಿಡುತ್ತಾಳೆ.

ವಿಡಿಯೋ ನೋಡಿ

 

View this post on Instagram

 

A post shared by Bhutni_ke (@bhutni_ke_memes)

ಕಾಲೇಜು ಹುಡುಗಿಯ ಈ ವಿಡಿಯೋ ಸತ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ bhutni_ke_memes ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಗಣರಾಜ್ಯೋತ್ಸವದ ದಿವಸ ಜನವರಿ 26 ರಂದು ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. 1950 ಜನವರಿ 26 ರ ಇದೇ ದಿವಸ ಭಾರತದಲ್ಲಿ ಸಂವಿಧಾನ ಜಾರಿಗೆ ಬಂದಿತು. ಪ್ರತಿ ವರ್ಷ ಜನವರಿ 26 ರಂದು ಭಾರತದ ಸೈನ್ಯ ರಾಜ್ ಪಥದಲ್ಲಿ ತನ್ನ ಶಸ್ತ್ರಗಳ ಪ್ರದರ್ಶನವನ್ನು ಸಹ ಮಾಡುತ್ತದೆ.