Viral Video: ವಿಷಪೂರಿತ ಹಾವಿನಿಂದ ತಪ್ಪಿಸಿಕೊಂಡ ವ್ಯಕ್ತಿ: ರೋಚಕ ವೀಡಿಯೋ ನೋಡಿದರೆ ಮೈ ನಡಗುವುದು ನಿಜ!
ಹಾವು ಎನ್ನುವ ಹೆಸರು ಕೇಳಿದರೆ ಜನ ಭಯ ಪಡುತ್ತಾರೆ. ಹಾವೇನಾದರೂ ಕಂಡರೆ ಮಾರು ದೂರ ಓಡುತ್ತಾರೆ, ಇನ್ನೂ ಕೆಲವರು ಭಯದಿಂದಾಗಿಯೇ ಕಂಡ ಹಾವನ್ನು ಕೊಂ ದು ಹಾಕುವವರೆಗೆ ಸುಮ್ಮನಾಗುವುದಿಲ್ಲ. ಹಾವನ್ನು ಪೂಜಿಸುವುದು ಕೂಡಾ ದಿಟವಾದರೂ, ಅದೇ ಹಾವು ನಿಜವಾಗಿ ಎದುರಾದರೆ ಓಡುವುದು ಕೂಡಾ ವಾಸ್ತವ. ಇದಕ್ಕೆ ಪ್ರಮುಖ ಕಾರಣ ಹಾವು ಕಚ್ಚಿದರೆ ಅದರ ವಿಷದಿಂದ ಪ್ರಾಣಕ್ಕೆ ಸಂ ಚ ಕಾ ರ ಎನ್ನುವ ಭಯ ಎಲ್ಲರಲ್ಲೂ ಇದೆ. ಹಾವುಗಳಲ್ಲಿ ಅನೇಕ ಪ್ರಬೇಧಗಳು ಕೂಡಾ ಇದ್ದು ಅದರಲ್ಲಿ ರ್ಯಾಟಲ್ ಸ್ನೇಕ್ ವಿಶ್ವದಲ್ಲಿ ಬಹಳ ಭ ಯಂ ಕರವಾದ ವಿಷವನ್ನು ಹೊಂದಿರುವ ಹಾವುಗಳ ಜಾತಿಗೆ ಸೇರಿದ ಹಾವಾಗಿದೆ.
ಸಾಮಾನ್ಯವಾಗಿ ಹಾವೆಂದರೆ ಭಯ ಪಡುವಾಗ ಇಂತಹ ವಿಷಪೂರಿತ ಹಾವೊಂದು ಪಕ್ಕದಲ್ಲಿ ಬಂದು ಕೂತರೇ, ತಪ್ಪಿಸಿಕೊಳ್ಳಲು ನಾವು ಸ್ವಲ್ಪ ಪಕ್ಕಕ್ಕೆ ಸರಿದರೂ ಹಾವು ಕಚ್ಚಬಹುದು ಎನ್ನುವ ಪರಿಸ್ಥಿತಿ ಎದುರಾದರೆ ನಿಜಕ್ಕೂ ಅದು ಸಾ ವನ್ನು ಬಹಳ ಹತ್ತಿರದಿಂದ ನೋಡಿದಂತೆ ಅಲ್ಲವೇ? ಊಹೆ ಮಾಡಿಕೊಳ್ಳುವುದಕ್ಕೆ ಭಯ ಎನಿಸುವ ಇಂತಹುದೊಂದು ವಿಲಕ್ಷಣ ಘಟನೆ ವಾಸ್ತವವಾಗಿ ನಡೆದರೆ ಹೇಗಿರಬೇಕಲ್ಲವೇ? ಒಮ್ಮೆ ಯೋಚಿಸಿ ನೋಡಿ. ಇಂತಹುದೊಂದು ಘಟನೆ ಒಂದು ಕಡೆ ನಡೆದಿದ್ದು, ಆ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಕೂಡಾ ಆಗಿದೆ.
ಕಾಡಿನಲ್ಲಿ ಆ ವ್ಯಕ್ತಿಯ ಎದುರು ಹಾವು, ಆತ ಕುಳಿತ ಕಡೆಯಿಂದ ನಿಧಾನವಾಗಿ ಕದಲಿದರೂ ಕೂಡಾ ಹಾವು ಕಚ್ಚುವ ಸಾಧ್ಯತೆ ದಟ್ಟವಾಗಿರುವಂತಹ ಪರಿಸ್ಥಿತಿ ಅದು. ಆತ ಅದರ ಬಗ್ಗೆ ಹೇಳುತ್ತಾ ಈ ಹಾವನ್ನು ಅತ್ತ ಪೊದೆಗಳ ಕಡೆ ಕಳುಹಿಸಬೇಕು. ನಾನೇ ಮೇಲೆದ್ದು ತಪ್ಪಿಸಿಕೊಳ್ಳಲು ಹೋದರೆ ಅದು ಅ ಪಾಯ ಎಂದು, ಹಾವಿನ ಬಾಲವನ್ನು ಮುಟ್ಟಿ ಅದನ್ನು ಬೇರೆ ದಿಕ್ಕಿನ ಕಡೆ ಚಲಿಸುವಂತೆ ಮಾಡುವ ಪ್ರಯತ್ನ ಮಾಡುತ್ತಾನೆ. ಆದರೆ ಹಾಗೆ ಮಾಡಿದ ಕೂಡಲೇ ಆ ಭ ಯಾ ನಕ ಹಾವು ಬೇರೆಡೆ ಹೋಗುವ ಬದಲು ಅವನ ಮೈಮೇಲೆ ಬಂದು ಬಿಡುತ್ತದೆ. ಆ ಕ್ಷಣ ವೀಡಿಯೋ ನೋಡುವವರಿಗೂ ಭ ಯ ಉಂಟಾಗಿಬಿಡುತ್ತದೆ.
ಆದರೆ ಆತ ನಿಧಾನವಾಗಿ ಬಹಳ ಚಾಕಚಾಕ್ಯತೆಯಿಂದ ತನ್ನ ಮೈಮೇಲೆ ಏರಿದ ಹಾವನ್ನು ತನ್ನ ಹಿಂದೆ ಇರುವ ಪೊದೆಯ ಕಡೆ ಹೋಗುವಂತೆ ಅದನ್ನು ಮುಟ್ಟಿ, ಸದ್ದು ಮಾಡುತ್ತಾನೆ. ಅದೃಷ್ಟವಶಾತ್ ಅವನು ಸಫಲನಾಗುತ್ತಾನೆ. ಅವನ ಮೇಲಿದ್ದ ಹಾವು ಸರ ಸರನೆಂದು ಹರಿದು ಅವನ ಹಿಂದೆ ಇದ್ದ ಪೊದೆಯೊಳಗೆ ಹೋದ ಕೂಡಲೇ ಆತ ಅದೇ ಸರಿಯಾದ ಸಮಯ, ಒಂದು ಕ್ಷಣ ಕೂಡಾ ವ್ಯರ್ಥ ಮಾಡಬಾರದು ಎಂದು ಬದುಕಿದೆಯಾ ಬಡಜೀವ ಎಂದು ತ್ವರಿತವಾಗಿ ಮೇಲೆದ್ದು ಓಡಿ ಬರುತ್ತಾನೆ. ಆತನ ಮೈಯಲ್ಲಿ ಒಂದು ನಡುಕು ಹುಟ್ಟಿದ್ದ ಬಗ್ಗೆ ಹೇಳುತ್ತಾನೆ. ಅಲ್ಲದೇ ಪೊದೆಯ ಬಳಿ ಬಾಲ ಆಡಿಸುವ ಹಾವನ್ನು ತೋರಿಸಿ ಬಹುಶಃ ಅದು ಭಯಪಟ್ಟಿರಬೇಕು ಎನ್ನುತ್ತಾನೆ.
ಒಟ್ಟಿನಲ್ಲಿ ಈ ವೀಡಿಯೋ ನೋಡುಗನ ಮೈಯಲ್ಲಿ ಮಿಂಚಿನ ಸಂಚಾರವಾದ ಅನುಭವ ನೀಡಿದರೆ, ಹಾವು ಅವನ ಮೇಲೆ ಬಂದಾಗ ನೋಡುಗನಲ್ಲಿ ಭಯ ಹುಟ್ಟಿಸುವುದು ಕೂಡಾ ಖಚಿತ. ಈ ರೋಚಕ ವೀಡಿಯೋವನ್ನು ಈಗಾಗಲೇ ಒಂಬತ್ತು ಲಕ್ಷ 69 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದರೆ, ಸಾವಿರಾರು ಜನ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಏಳು ಸಾವಿರಕ್ಕಿಂತ ಅಧಿಕ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. ಕಾಮೆಂಟ್ ಗಳಲ್ಲಿ ಅನೇಕರು ರೋಮಾಂಚಕಾರಿ ವೀಡಿಯೋ ಎಂದರೆ ಕೆಲವರು, ಹಾವಿನಿಂದ ವ್ಯಕ್ತಿಯನ್ನು ಕಾಪಾಡದೇ ವೀಡಿಯೋ ಮಾಡಿದ ವ್ಯಕ್ತಿಯನ್ನು ಟೀ ಕೆ ಕೂಡಾ ಮಾಡಿದ್ದಾರೆ.