Viral Video: ಹಸಿರು ಸೀರೆ ಉಟ್ಟು ಭರ್ಜರಿ ಡಾನ್ಸ್ ಮಾಡಿದ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೇ; Video ನೋಡಿ ಖುಷಿ ಪಟ್ಟ ಫ್ಯಾನ್ಸ್
ಬಾಲಿವುಡ್ ನಟಿ ಅಂಕಿತಾ ಲೊಖಂಡೆ ಹೆಚ್ಚು ಜನಪ್ರಿಯತೆ ಪಡೆದಿದ್ದು ಕಿರುತೆರೆಯಲ್ಲಿ, ಅಲ್ಲದೇ ಈಕೆ ಅಗಲಿದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಪ್ರೇಯಸಿ ಎನ್ನುವ ವಿಷಯ ಕೂಡಾ ರಹಸ್ಯವಂತೂ ಅಲ್ಲವೇ ಅಲ್ಲ. ಸುಶಾಂತ್ ಸಿಂಗ್ ಹಾಗೂ ಅಂಕಿತಾ ಲೋಖಂಡೆ ಇಬ್ಬರಿಗೂ ಕೂಡಾ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿದ್ದು ಏಕ್ತಾ ಕಪೂರ್ ನಿರ್ಮಾಣದ ಪವಿತ್ರ ರಿಶ್ತಾ ಸೀರಿಯಲ್. ಇದರಲ್ಲಿ ಜೋಡಿಯಾಗಿ ನಟಿಸಿದ ಸುಶಾಂತ್ ಮತ್ತು ಅಂಕಿತಾ ನಡುವೆ ರಿಯಲ್ ಲೈಫ್ ನಲ್ಲಿ ಕೂಡಾ ಪ್ರೇಮಾಂಕುರವಾಗಿ ಸುಶಾಂತ್ ಒಂದು ಡಾನ್ಸ್ ರಿಯಾಲಿಟಿ ಶೋನಲ್ಲೇ ಅಂಕಿತಾಗೆ ಪ್ರಪೋಸ್ ಮಾಡಿದ್ದು ಉಂಟು. ಆದರೆ ಸುಶಾಂತ್ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಮೇಲೆ ಎಲ್ಲವೂ ಮೊದಲಿನಂತೆ ಉಳಿಯಲಿಲ್ಲ. ಅವರ ಜೀವನದಲ್ಲಿ ಬೇರೆ ಗೆಳತಿಯರು ಬಂದದ್ದು ನಿಜ.
ಅಂಕಿತಾ ಅಷ್ಟಾಗಿ ಎಲ್ಲೂ ಸುದ್ದಿಯಲ್ಲಿ ಇರಲಿಲ್ಲವಾದರೂ ಕಂಗನಾ ಜೊತೆ ಮಣಿಕರ್ಣಿಕಾ ಸಿನಿಮಾ ಬಂದಾಗ ಮತ್ತೆ ಸುದ್ದಿಯಾದರು. ಅದಾದ ನಂತರ ನಟ ಸುಶಾಂತ್ ಸಾ ವಿನ ಹಿನ್ನೆಲೆಯಲ್ಲಿ ಅಂಕಿತಾ ಸುಶಾಂತ್ ಗೆ ನ್ಯಾಯ ದೊರಕಬೇಕೆಂದು ಮಾತನಾಡುತ್ತಾ ಮತ್ತೊಮ್ಮೆ ದೊಡ್ಡ ಸುದ್ದಿಯಾದರು. ಸುಶಾಂತ್ ಸಾ ವಿಗೆ ಕಂಬನಿಗರೆದರು. ಕೆಲವು ದಿನ ಅದೇ ಗುಂಗಿನಲ್ಲಿ ಆಕೆ ಬೇಸರದಿಂದ ದಿನಗಳನ್ನು ಕಳೆಯುತ್ತಿದ್ದರು. ಸುಶಾಂತ್ ನಿ ಧನರಾಗಿ ಈಗಾಗಲೇ ನಾಲ್ಕು ತಿಂಗಳು ಕಳೆದುಹೋಗಿದೆ. ಸಿಬಿಐ ತನ್ನ. ತ ನಿ ಖೆ ನಡೆಸುತ್ತಿದೆ. ಈ ನಡುವೆ ನಟಿ ಅಂಕಿತಾ ಆ ಬೇಸರದಿಂದ ಹೊರ ಬರುತ್ತಿರುವ ಸೂಚನೆ ಎಂಬಂತೆ ಆಕೆಯ ಒಂದು ವೀಡಿಯೋ ವೈರಲ್ ಆಗಿದೆ.
ಹೌದು ಬಹು ದಿನಗಳ ನಂತರ ಅಂಕಿತಾ ಲೋಖಂಡೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದು ವೀಡಿಯೋವನ್ನು ಹಂಚಿಕೊಂಡಿದ್ದು ಅದೀಗ ಅವರ ಅಭಿಮಾನಿಗಳು ಹಾಗೂ ನೆಟ್ಟಿಗರು ಗಮನವನ್ನು ಸೆಳೆದು ಭರ್ಜರಿ ವೈರಲ್ ಆಗಿದೆ. ಈ ವೀಡಿಯೋ ದಲ್ಲಿ ಅಂಕಿತಾ ಹಸಿರು ಸೇರೆಯನ್ನು ಉಟ್ಟು ಭರ್ಜರಿ ಡಾನ್ಸ್ ಒಂದನ್ನು ಮಾಡಿದ್ದಾರೆ. ವೀಡಿಯೋದಲ್ಲಿ ನೋಡಿದಾಗ ಅಂಕಿತಾ ಹವಾ ಕೇ ಜೋಂಕೆ ಎನ್ನುವ ಹಾಡಿಗೆ ಜಬರ್ದಸ್ತ್ ಎನಿಸುವ ಡಾನ್ಸ್ ಮಾಡಿದ್ದು, ಅವರ ಅಭಿಮಾನಿಗಳಿಗೆ ಈ ವೀಡಿಯೋ ತುಂಬಾ ಖುಷಿಯನ್ನು ನೀಡಿದ್ದು, ಅಭಿಮಾನಿಗಳು ವೀಡಿಯೋಗೆ ತಮ್ಮ ಅಪಾರವಾದ ಮೆಚ್ಚುಗೆಯನ್ನು ನೀಡುತ್ತಿದ್ದಾರೆ.
ಅಂಕಿತಾ ಈ ಹಾಡಿಗೆ ಡಾನ್ಸ್ ಮಾಡಿರುವ ವೀಡಿಯೋ ಶೇರ್ ಮಾಡುತ್ತಾ ಅದರ ಶೀರ್ಷಿಕೆಯಲ್ಲಿ ಸೀರೆಯಲ್ಲಿ ಡಾನ್ಸ್, ಒಂದೊಳ್ಳೆ ಸಂಗೀತ ಎಂತಹ ಅದ್ಭುತ ಸಂಯೋಜನೆ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ. ಈ ವೀಡಿಯೋ ನೋಡಿದ ಅವರ ಅಭಿಮಾನಿಗಳು ಅಂಕಿತಾರ ಡಾನ್ಸ್ ಮೂವ್ ಗಳನ್ನು ನೋಡಿ ಫಿದಾ ಆಗಿ ಪ್ರತಿಕ್ರೆಯಗಳ ಮೂಲಕ ತಮ್ಮ ಮೆಚ್ಚುಗೆಯನ್ನು ಹರಿಸಿದ್ದಾರೆ. ಅಂಕಿತಾ ರ ವೀಡಿಯೋ ದೊಡ್ಡ ಮಟ್ಟದ ವೀಕ್ಷಣೆಗಳನ್ನು ಪಡೆದುಕೊಳ್ಳುತ್ತಿದೆ. ಇನ್ನು ಅಂಕಿತಾರ ನಟನಾ ಜೀವನದ ಬಗ್ಗೆ ತಿಳಿಯುವುದಾದರೆ ಅವರ ಕೆರಿಯರ್ ಇಂಡಿಯನ್ ಬೆಸ್ಟ್ ಸಿನೆಸ್ಟರ್ ಖೋಜ್ ಎನ್ನುವ ಶೋ ಮೂಲಕ ಆರಂಭವಾಯಿತು.
ವಿಡಿಯೋ ನೋಡಿ
ಅನಂತರ 2009 ರಲ್ಲಿ ಬಾಲಾಜಿ ಟೆಲಿಫಿಲ್ಮ್ಸ್ ನ ಪವಿತ್ರಾ ರಿಶ್ತಾ ಮೂಲಕ ಅವರ ಸೀರಿಯಲ್ ಪಯಣ ಆರಂಭವಾಯಿತು. ಸುಶಾಂತ್ ಅವರ ನಟನ ಕೆರಿಯರ್ ಕೂಡಾ ಇಲ್ಲಿಂದಲೇ ಆರಂಭವಾಗಿತ್ತು. ಅಂಕಿತಾ ಅವರ ವೃತ್ತಿ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳು ಕಂಡವು. ವೈಯಕ್ತಿಕವಾಗಿ ಕೂಡಾ ಸುಶಾಂತ್ ಜೊತೆ ಮದುವೆ ಆಗುತ್ತದೆ ಎನ್ನುವ ಹಂತಕ್ಕೆ ಹೋಗಿದ್ದ ಅವರ ಸಂಬಂಧ ಅದೇಕೋ ಮುರಿದು ಬಿದ್ದಿತ್ತು. ಅನಂತರ ಅಂಕಿತಾ ಕಂಗನಾರ ಮಣಿಕರ್ಣಿಕಾ ಸಿನಿಮಾ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದರು.