Viral Video: ಹಾಡು ಹಗಲೇ ಅಂಗಡಿಯಿಂದ ಚಿಪ್ಸ್ ಪ್ಯಾಕೆಟ್ ಕದ್ದ ಪಕ್ಷಿ! ಪಕ್ಷಿಯ ಚಾಣಾಕ್ಷತನಕ್ಕೆ ಮಾರು ಹೋದ ನೆಟ್ಟಿಗರು!

ಕಡಲತೀರದಲ್ಲಿ ಜನರು ಹಿತಕರವಾದಂತಹ ವಾತಾವರಣದಲ್ಲಿ ಕೆಲಕಾಲ ಕುಳಿತು, ಓಡಾಡುತ್ತಾ ಸಮಯವನ್ನು ಕಳೆಯುತ್ತಾರೆ. ಇಂತಹ ಸಮಯದಲ್ಲಿ ಕೆಲವು ಸಮುದ್ರ ತೀರಗಳಲ್ಲಿ ಸೀಗಲ್ ಗಳು ಅಲ್ಲಿಗೆ ಬರುವ ಜನರ ಕೈಯಿಂದ ಆಹಾರವನ್ನು ಅನಗತ್ಯವಾಗಿ ಕದಿಯುವ ಮೂಲ ಕೆಟ್ಟ ಹೆಸರು ಗಳಿಸಿಕೊಂಡಿವೆ. ಸೀಗಲ್ ಗಳು ಆಹಾರವನ್ನು ಕದಿಯುವ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ಜನರ ಗಮನವನ್ನು ಸೆಳೆದಿವೆ. ಪಕ್ಷಿಗಳು ಕೂಡಾ ಕದಿಯುವುದನ್ನು ನೋಡಿ ಜನರು ವಿಸ್ಮಿತರಾಗಿದ್ದು ಕೂಡಾ ನಿಜ. ಆದರೆ ಈಗ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈ ವೀಡಿಯೋ ನೋಡಿದವರೆಲ್ಲಾ ಸೀಗಲ್ ನ ಚಾಣಾಕ್ಷತನವನ್ನು ನೋಡಿ ಅಬ್ಬಾ ಎಷ್ಟು ಚಾಲಾಕಿ ಹಕ್ಕಿ ಇದು ಎಂದು ಉದ್ಗಾರವನ್ನು ತೆಗೆಯುತ್ತಿದ್ದಾರೆ.‌

ಸೀಗಲ್ ಎಷ್ಟು ಚಾಕಚಕ್ಯತೆ ಹಾಗೂ ತನ್ನ ಚಾಣಾಕ್ಷತನವನ್ನು ಪ್ರದರ್ಶನ ಮಾಡಿ ಕಳ್ಳತನ ಮಾಡಿದೆ ಎಂಬುದಕ್ಕೆ ಈ ವೀಡಿಯೋ ಒಂದು ಅತ್ಯುತ್ತಮ ಉದಾಹರಣೆ ಆಗಿದ್ದು, ವೀಡಿಯೋ ನೋಡಿದವರಿಗೆ ಸೀಗಲ್ ಮಾಡಿದ ಕಳ್ಳತನಕ್ಕಿಂತ, ಅದರ ಕೌಶಲ್ಯವು ಮೆಚ್ಚುಗೆಯಾಗಿದ್ದು, ವೀಡಿಯೋ ನೋಡಿದವರಿಗೆಲ್ಲಾ ಅದು ಬಹಳ ಇಷ್ಟವಾಗುತ್ತಿದ್ದು, ಅದೇ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಲು ಕೂಡಾ ಕಾರಣವಾಗಿದೆ. ಹಾಗಾದರೆ ಈ ಸೀಗಲ್ ಮಾಡಿದ ಕಳ್ಳತನ ಏನು ಎಂಬುದನ್ನು ವಿವರಿಸುತ್ತೇವೆ ಬನ್ನಿ. ವೀಡಿಯೋದಲ್ಲಿ ಸೀಗಲ್ ಒಂದು ಅಂಗಡಿಯಿಂದ ಚಿಪ್ಸ್ ಪ್ಯಾಕ್ ಒಂದನ್ನು ಕದ್ದು, ಓಡಿ ಹೋಗುವುದನ್ನು ನಾವು ನೋಡಬಹುದಾಗಿದೆ.‌

ತಮಾಷೆಯಂತೆ ಕಾಣುವ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಜನರ ಅಪಾರ ಮೆಚ್ಚುಗೆಯನ್ನು ಪಡೆಯುತ್ತಾ ಸಾಗಿದೆ. ಸೀಗಲ್ ಕಳ್ಳನಂತೆ ಸದ್ದು ಮಾಡದೆ, ಯಾರ ಗಮನಕ್ಕೂ ಬಾರದಂತೆ ಅಂಗಡಿಯೊಳಕ್ಕೆ ಪ್ರವೇಶವನ್ನು ಮಾಡಿ, ಅಲ್ಲಿ ಒಂದು ಪ್ಯಾಕೆಟ್ ಚಿಪ್ಸ್ ಅನ್ನು ಕಚ್ಚಿಕೊಂಡು, ಇನ್ನು ತಡ ಮಾಡಿದರೆ ಸಿಕ್ಕಿ ಬೀಳುವುದು ಖಚಿತ ಎನ್ನುವ ಹಾಗೆ ಅಲ್ಲಿಂದ ವೇಗವಾಗಿ ಓಡುವುದನ್ನು ನಾವು ವೀಡಿಯೊದಲ್ಲಿ ಕಾಣಬಹುದು. ಈ ವೀಡಿಯೋವನ್ನು ಮೊದಲು ಟಂಬ್ಲರ್ ನಲ್ಲಿ ಶೇರ್ ಮಾಡಲಾಗಿತ್ತು. ಅನಂತರ ಟ್ವಿಟರ್ ನಲ್ಲಿ ಕೂಡ ಶೇರ್ ಮಾಡಿದ ಮೇಲೆ ಈ ವೀಡಿಯೋ ಭರ್ಜರಿಯಾಗಿ ವೈರಲ್ ಆಗುತ್ತಾ ಸಾಗಿದೆ.

ಪ್ರಸಿದ್ಧ ಟಿವಿ ಪರ್ಸನಾಲಿಟಿ ಜಿಯಾ ಟಾಂಗ್ ಈ ವೀಡಿಯೊವನ್ನು ಹಂಚಿಕೊಂಡಿದ್ದು, ಅದರ ಜೊತೆಗೆ. “ನೋಡಿ ಹೇಗೆ ಈ ಸೀಗಲ್ ಆರಾಮವಾಗಿ ಬರುತ್ತದೆ ಮತ್ತು ಕದ್ದು ತಕ್ಷಣ ಓಡಿ ಹೋಗುತ್ತದೆ, ಬಹುಶಃ ಇದು ಬಹಳ ಅನುಭವಿ ಅಂಗಡಿ ಕಳ್ಳ” ಎಂದು ಬರೆದುಕೊಂಡಿದ್ದಾರೆ. ಅಗಸ್ಟ್ 9 ರಂದು ಶೇರ್ ಮಾಡಿರುವ ಈ ವೀಡಿಯೋವನ್ನು ಈಗಾಗಲೇ 5.6 ಮಿಲಿಯನ್ ಗಿಂತ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ. 4 ಲಕ್ಷಕ್ಕಿಂತ ಅಧಿಕ ಜನರು ಪ್ರತಿಕ್ರಿಯೆಗಳನ್ನು ನೀಡಿದ್ದರೆ, ಒಂದು ಲಕ್ಷಕ್ಕಿಂತ ಅಧಿಕ ರೀಟ್ವೀಟ್ ಗಳನ್ನು ಪಡೆದಿರುವುದು ನೋಡಿದರೆ ವೀಡಿಯೋ ಯಾವ ಮಟ್ಟಕ್ಕೆ ವೈರಲ್ ಆಗಿದೆ ಎಂಬುದು ನಮ್ಮ ಗಮನಕ್ಕೂ ಬರುತ್ತದೆ.

ಈ ವೀಡಿಯೋ ನೋಡಿದ ನೆಟ್ಟಿಗರು ಕೂಡಾ ವೀಡಿಯೋವನ್ನು ನೋಡಿ ಸೀಗಲ್ ನ ಬುದ್ಧಿಮತ್ತೆಗೆ, ಅದು ಕದಿಯುವ ಚಾಲಾಕಿತನಕ್ಕೆ ತಮ್ಮ ಮೆಚ್ಚುಗೆಯನ್ನು ವಿವಿಧ ರೀತಿಯಲ್ಲಿ ವರ್ಣಿಸಿ, ಬಗೆಬಗೆಯ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಾಗಿರುವುದು ಕೂಡಾ ನಿಜ. ಒಟ್ಟಾರೆ ಸೀಗಲ್ ನ ಕದಿಯುವ ಕೌಶಲ್ಯ ಅದಕ್ಕೆ ಪ್ರಕೃತಿ ಕಲಿಸಿದ ಪಾಠ ಎನ್ನುವಂತೆ ಇದ್ದು, ನೋಡಲು ಮಾತ್ರ ಖುಷಿ ಕೊಡುವುದರಲ್ಲಿ ಎರಡು ಮಾತಿಲ್ಲ.