Viral Video: ಹಿಂದೂ ಮದುವೆ, ಇಂಗ್ಲೀಷ್ ನಲ್ಲಿ ಮಂಗಲಾಷ್ಟಕ ಶುಭಮಂಗಲ್ ಸಾವಧಾನ!

ನೀವು ಅನೇಕ ವಿವಾಹಗಳಲ್ಲಿ ನೋಡಿರಬಹುದು. ಮಂಗಲಾಷ್ಟಕದ ಮಧ್ಯದಲ್ಲಿ ವಿವಿಧ ಮಂತ್ರಗಳು ಹೇಳಿರುವದು ನೀವು ಕೇಳಿರಬಹುದು. ಆದರೆ ಒಂದು ಮರಾಠಿಯ ಮದುವೆಯಲ್ಲಿ ಶಾಸ್ತ್ರಿ ಚೊಕ್ಕ ಇಂಗ್ಲಿಷ್ ನಲ್ಲಿ ಮಂಗಲಾಷ್ಟಕ ಹೇಳಿ ಮದುವೆ ಮಾಡಿರುವ ವೀಡಿಯೋ ಸದ್ಯಕ್ಕೆ ಶೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ವೀಡಿಯೋವೊಂದರಲ್ಲಿ ಭಟ್ಜಿಯೊಬ್ಬರು ಮದುವೆಯ ಸಂದರ್ಭದಲ್ಲಿ ಮಂಗಳಾಷ್ಟಕವನ್ನು ಇಂಗ್ಲಿಷ್‌ನಲ್ಲಿ ಹೇಳುತ್ತಿರುವುದು ಕಂಡುಬಂದಿದೆ. ಮಂಗಳಾಷ್ಟಕ ನಡೆಯುತ್ತಿರುವಾಗ ಸುತ್ತಮುತ್ತಲಿನ ಮಹಿಳೆಯರು ನಗುವುದನ್ನು ಈ ವಿಡಿಯೋದಲ್ಲಿ ಕೇಳಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋ ನೋಡಿ

 

View this post on Instagram

 

A post shared by Jignesh Vanmali (@jignesh_1mali)

ಏತನ್ಮಧ್ಯೆ, ಇಂತಹ ವಿಭಿನ್ನ ಪ್ರಯೋಗಗಳ ಅನೇಕ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಹೀಗಾಗಿ ಇಂಗ್ಲಿಷ್ ನಲ್ಲಿ ಮಂಗಳಾಷ್ಟಕ ಹೇಳಿರುವ ಈ ವೀಡಿಯೋವನ್ನು ಸುಮಾರು 1 ಲಕ್ಷ 40 ಸಾವಿರಕ್ಕೂ ಹೆಚ್ಚು ನೆಟ್ಟಿಗರು ಲೈಕ್ಸ್ ಮಾಡಿದ್ದಾರೆ ಅಲ್ಲದೆ ಸುಮಾರು 18 ಲಕ್ಷಕ್ಕೂ ಹೆಚ್ಚು ಜನರು ವಿಡಿಯೋವನ್ನು ವೀಕ್ಷಣೆ ಮಾಡಿದ್ದಾರೆ.