Viral Video: ಹೊಳೆ ದಾಟುತ್ತಿರುವ ಸಮಯದಲ್ಲಿ ಕಾಡಿನ ರಾಜ ಸಿಂಹವನ್ನೇ ತಿನ್ನಲು ಬಂದ ಮೊಸಳೆ! ಮುಂದೇನಾಯಿತು ನೋಡಿ ಈ ವಿಡಿಯೋ..

ಜೀವ ಜಗತ್ತು ಅನೇಕ ವೈವಿದ್ಯತೆಗಳಿಂದ ತಿಳಿದಷ್ಟೂ, ಅರಿತುಕೊಂಡಷ್ಟೂ, ಅರ್ಥ ಮಾಡಿಕೊಂಡಷ್ಟೂ ಕೂಡಾ ಭಿನ್ನ, ವಿಭಿನ್ನವಾಗಿ, ವೈವಿದ್ಯಮಯವಾದ ವಿಷಯಗಳಿಂದಾಗಿ ಹಾಗೂ ತನ್ನಲ್ಲಿ ಅಡಗಿಸಿಕೊಂಡಿರುವ ಅನೇಕ ವಿಸ್ಮಯಗಳಿಂದಾಗಿ ಹಾಗೂ ರೋಚಕತೆಯಿಂದಾಗಿ ಒಂದು ಕುತೂಹಲಕಾರಿ ವಿಷಯವಾಗಿ ಉಳಿದಿದ್ದು ಸಂಶೋಧನಾ ಪ್ರವೃತ್ತಿ ಹಾಗೂ ಸಾಹಸಿ ಮನೋವೃತ್ತಿ ಇರುವವರಿಗೆ ಜೀವ ಜಗತ್ತು ತನ್ನ ಜೀವ ವೈವಿದ್ಯತೆಯ ಮೂಲಕ ಸದಾ ಸ್ವಾಗತವನ್ನು ಕೋರುತ್ತಲೇ ಇದೆ. ಅದಕ್ಕೆ ಸಾಕ್ಷಿ ಎನ್ನುವ ಹಾಗೆ ಕೆಲವು ವೀಡಿಯೋಗಳು ಮಾನವ ಜಗತ್ತಿಗೆ ಹೊರತಾದ ವನ್ಯ ಜೀವಿಗಳ ವಿಸ್ಮಯ ಜಗತ್ತನ್ನು ನಮ್ಮ ಮುಂದೆ ತಂದಿಟ್ಟು ನಮ್ಮನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತಿರುತ್ತವೆ.

ವನ್ಯ ಜೀವಿಗಳ ಜೀವನ ನಿಜಕ್ಕೂ ಕತ್ತಿಯ ಅಲಗಿನ ಮೇಲೆ ನಡೆಯುವಂತಹ ಜೀವನ. ನಮಗೆ ಅವು ಓಡಾಡುವ, ಅಲೆದಾಡುವ ಕಾಡು ಮೇಡುಗಳ ಸುಂದರತೆಯು ಕಂಡರೆ, ಅದರ ಜೊತೆಗೆ ಆ ಜೀವಿಗಳು ಯಾವುದೇ ದಿಕ್ಕಿನಿಂದ ಬರಬಹುದಾದ ಅನಿರೀಕ್ಷಿತವಾದ ಅಪಾಯಗಳನ್ನು ಅರಿತು ಹೆಜ್ಜೆ ಇಡಬೇಕಾಗಿರುತ್ತದೆ‌. ಹಾಗೆ ಮೈ ಎಲ್ಲಾ ಕಣ್ಣಾಗಿರುವ ಪ್ರಾಣಿಗಳು ಅಪಾಯ ಬಂದರೂ ಕೂಡಾ ಪ್ರಾಣ ಉಳಿಸಿಕೊಂಡರೆ, ಸ್ವಲ್ಪ ಎಚ್ಚರ ತಪ್ಪಿದರೂ ಪ್ರಾಣ ಕಳೆದುಕೊಳ್ಳುವ ಸಂಭವ ಇರುತ್ತದೆ. ಆದರೆ ಪ್ರಕೃತಿಯಲ್ಲಿನ ಆಹಾರ ಸರಪಳಿಯಲ್ಲಿ ಒಂದು ಇನ್ನೊಂದಕ್ಕೆ ಆಹಾರವಾಗಬೇಕಿರುವುದು ಕೂಡಾ ಸತ್ಯವೇ.

ಕಾಡಿನ ರಾಜ ಸಿಂಹ. ತನ್ನ ಗಾಂಭೀರ್ಯ, ಶಕ್ತಿ ಹಾಗೂ ಭಯ ಹುಟ್ಟಿಸುವ ಘರ್ಜನೆಗೆ ಇದು ಜನಪ್ರಿಯ. ಸಿಂಹವನ್ನು ನೋಡಿದರೆ ಸಣ್ಣ ಪುಟ್ಟ ಪ್ರಾಣಿಗಳು ಹೆದರಿ ತಮ್ಮ ಪ್ರಾಣ ರಕ್ಷಣೆಗೆ ಓಡಿ ಬಿಡುತ್ತದೆ. ಸಿಂಹದ ಕೈಗೆ ಸಿಕ್ಕರೆ ಅದು ಆ ಪ್ರಾಣಿಗೆ ಕೊನೆಯ ಉಸಿರು ಅದೇ ಆಗಿ ಬಿಡುತ್ತದೆ. ಆದರೆ ಇಂತಹ ಸಿಂಹ ಬೇರೊಂದು ಪ್ರಾಣಿಗೆ ಆಹಾರವಾಗಿ ಸಿಕ್ಕಿ, ಅನಂತರ ಅದೃಷ್ಟವಶಾತ್ ಅದು ತನ್ನ ಪ್ರಾಣ ವನ್ನು ಉಳಿಸಿಕೊಂಡ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂಚಲವನ್ನು ಹುಟ್ಟು ಹಾಕಿದೆ, ನೋಡುಗರ ಮೈ ರೋಮಾಂಚನ ವಾಗುವ ಹಾಗಿದೆ.

ನದಿಯೊಂದರ ದಂಡೆಯಲ್ಲಿ ಬಂದು ನಿಂತ ಸಿಂಹವೊಂದು ಒಂದು ದಡದಿಂದ ಇನ್ನೊಂದು ಬದಿಗೆ ಹೋಗಲು ನೀರ ಕಡೆ ನೋಡಿದೆ. ಅನಂತರ ಅದು ನದಿಯನ್ನು ಈಜಿ ದಾಟುವುದಕ್ಕಾಗಿ ನೀರೊಳಗೆ ಇಳಿದಿದೆ. ಸಿಂಹ ನೀರಿಗೆ ಇಳಿಯುವವರೆಗೆ ಆ ನೀರಿನಲ್ಲಿ ಬೇರೇನೋ ಕಾಣುವುದಿಲ್ಲ. ಆದರೆ ಸಿಂಹ ನೀರಿನಲ್ಲಿ ಇಳಿದು ಸ್ವಲ್ಪ ಮುಂದಕ್ಕೆ ಬರುವ ವೇಳೆಗೆ ನೀರಿನಲ್ಲೊಂದು ಚಲನೆ ಕಂಡಿದೆ. ಅದು ಸಾಧಾರಣ ಚಲನೆಯಲ್ಲಿ ಖಂಡಿತ ಅಲ್ಲಾ, ಅದು ಇಷ್ಟು ಹೊತ್ತು ಬೇಟೆಗಾಗಿ ನೀರಿನಲ್ಲಿ ಅವಿತು ಕುಳಿತಿದ್ದ ಒಂದು ಮೊಸಳೆಯ ಚಲನೆ. ಇಷ್ಟು ಹೊತ್ತು ಸಿಂಹವನ್ನು ನೋಡಿದ್ದ ಅದು ನೀರಿಗೆ ಇಳಿದ ಸಿಂಹದ ಮೇಲೆ ಅಚಾನಕ್ಕಾಗಿ ಧಾಳಿಯಿಟ್ಟದೆ. ಸಿಂಹವನ್ನು ಅದು ಗಟ್ಟಿಯಾಗಿ ಹಿಡಿದು ನೀರೊಳಗೆ ಮುಳುಗಿಸಿದೆ.

ವಿಡಿಯೋ ನೋಡಿ

ವೀಡಿಯೋ ನೋಡುವಾಗ ಒಂದು ಕ್ಷಣ ಅರೆರೆ ಸಿಂಹ ಮೊಸಳೆಗೆ ಆಹಾರವಾಯಿತೆಲ್ಲಾ ಎಂದು ಬೇಸರ ಮಾಡಿಕೊಳ್ಳುವ ಮೊದಲು, ಹಾಗೇ ಮುಂದೆ ನೋಡಿದಾಗ ಸಿಂಹ ಆ ಮೊಸಳೆಯ ಬಾಯಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದು ಕೂಡಲೇ ಅದ್ದು ಅಲ್ಲಿಂದ ನೀರಿನಲ್ಲಿ ಈಜಿ ಸುರಕ್ಷಿತ ಸ್ಥಾನಕ್ಕೆ ಬಂದಿದೆ.
ಈ ರೋಚಕ ವೀಡಿಯೋವನ್ನು ಈಗಾಗಲೇ ಎರಡೂ ವರೆ ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದು, ನೂರಾರು ಮಂದಿ ಇಷ್ಟಪಟ್ಟು ರೀಟ್ವೀಟ್ ಕೂಡಾ ಮಾಡಿಕೊಂಡಿದ್ದಾರೆ. ವೀಡಿಯೋ ನೋಡಿದವರು ಗ್ರೇಟ್ ಎಸ್ಕೇಪ್, ಸಿಂಹದ ಅದೃಷ್ಟ, ರೋಚಕ ಸನ್ನಿವೇಶ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.