Viral Video: 30-40 ಹಿಪ್ಪೋಗಳ ಮಧ್ಯದಲ್ಲಿ ಸಿಲುಕಿಕೊಂಡ ಮೊಸಳೆ; ಮೊಸಳೆಯ ಅವಸ್ಥೆ ನೋಡಿ ಅ#ಯ್ಯೋ ಪಾ#ಪ ಎಂದ ಜನ!
ಎಲ್ಲರನ್ನೂ ಬೆದರಿಸುತ್ತಾ, ದೈ”ತ್ಯಾಕಾರದ ಪ್ರಾಣಿಗಳನ್ನು ಕೂಡಾ ತನ್ನ ಹಿಡಿತದಲ್ಲಿ ಬಂಧಿಸುವ, ದೂರದಿಂದ ನೋಡಿದರೇನೇ ಮೈಯಲ್ಲೊಂದು ಕಂಪನವನ್ನು ಹುಟ್ಟಿಸುವ ಪ್ರಾಣಿ ಯಾವುದೆಂದರೆ ಅನೇಕರ ತಲೆಯಲ್ಲಿ ಅನೇಕ ಪ್ರಾಣಿಗಳ ಚಿತ್ರ ಮೂಡಿದರೂ, ಅದರಲ್ಲಿ ಮೊಸಳೆ ಕೂಡಾ ಇದ್ದೇ ಇರುತ್ತದೆ ಎಂಬುದು ಮಾತ್ರ ಒಪ್ಪಲೇಬೇಕು. ಹೌದು ಮೊಸಳೆಗಳ ದೇಹಾಕೃತಿಯನ್ನು ನೋಡಿದಾಗಲೇ ನಮಗೆ ಭಯವನ್ನು ಉಂಟು ಮಾಡುತ್ತದೆ. ಮೊಸಳೆಯ ಚಲನೆಯನ್ನು ನೋಡಿದಾಗಲೂ ಕೆಲವರಿಗೆ ಭಯ ಉಂಟಾಗುವುದು ಸಹಜ. ಮೊಸಳೆಗಳು ಒಂದು ರೀತಿಯಲ್ಲಿ ಜೀವ ಜಗತ್ತಿನಲ್ಲಿ ಭಯ ಹುಟ್ಟಿಸುವ ಪ್ರಾಣಿಗಳು ಎಂಬುದರಲ್ಲಿ ಅನುಮಾನ ಇಲ್ಲ. ಹಲವು ಬಾರಿ ಅವುಗಳ ಬೇರೆ ಪ್ರಾಣಿಗಳನ್ನು ಹಿಡಿಯುವ ಸನ್ನಿವೇಶಗಳನ್ನು ನೋಡಿದಾಗಲಂತೂ ಮೊಸಳೆಗಳ ಶಕ್ತಿ ಸಾಮರ್ಥ್ಯ ಏನೆಂಬುದು ನಮ್ಮ ಅರಿವಿಗೆ ಬರುತ್ತದೆ.
ಮೊಸಳೆಯ ಬಾಯಿಗೆ ಸಿಕ್ಕಿದ ಪ್ರಾಣಿಗಳು ಅವುಗಳ ಹಿಡಿತದಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡರೆ ಅದು ನಿಜಕ್ಕೂ ಅವುಗಳ ಅದೃಷ್ಟವೇ ಎನ್ನಬಹುದು. ಏಕೆಂದರೆ ಮೊಸಳೆಯ ಬಾಯಿಗೆ ಸಿಕ್ಕಿದ ಪ್ರಾಣಿಗಳು ಪ್ರಾಣ ಉಳಿಸಿಕೊಂಡ ಉದಾಹರಣೆಗಳು ಮಾತ್ರ ಅಪರೂಪ ಅಥವಾ ವಿರಳ ಎಂದು ಹೇಳಬಹುದು. ಸೋಶಿಯಲ್ ಮೀಡಿಯಾದಲ್ಲಿ ಕೂಡಾ ಆಗಾಗ ಮೊಸಳೆಗಳು ಹೇಗೆ ಬೇಟೆಯಾಡುತ್ತವೆ ಎಂಬ ವೀಡಿಯೋಗಳು ಗಮನವನ್ನು ಸೆಳೆಯುತ್ತವೆ. ಆ ವೀಡಿಯೋಗಳು ರೋಚಕ ಎನಿಸುವ ಜೊತೆಗೆ ಮೊಸಳೆಯ ಭೀ” #ಕರ ಎನಿಸುವ ಬೇಟೆಯ ಚಿತ್ರಣ ತಲ್ಲಣವನ್ನು ಕೂಡಾ ಉಂಟು ಮಾಡುತ್ತದೆ, ಮನುಷ್ಯ ಅದರ ಕೈಗೆ ಸಿಕ್ಕರೇನು ಗತಿ ಎನಿಸಿ ಬಿಡುತ್ತದೆ.
ಇಂತಹ ಶಕ್ತಿಶಾಲಿ ಹಾಗೂ ಬಲಾಡ್ಯ ಎನಿಸಿರುವ ಪ್ರಾಣಿಯಾದ ಮೊಸಳೆ ಕೂಡಾ ಭಯದಿಂದ ಅರಚಿದರೆ, ಪ್ರಾಣ ಉಳಿಸಿಕೊಳ್ಳಲು ಪಡಿಪಾಟಲು ಪಟ್ಟರೆ, ತನ್ನ ಸುತ್ತಲೂ ಭಯ ಹುಟ್ಟಿಸುವ ಪ್ರಾಣಿಗಳ ದಂಡೇ ಸುತ್ತುವರೆದಾಗ ಅದರ ಪರಿಸ್ಥಿತಿ ಹೇಗಿರಬಹುದು ಅಲ್ಲವೇ? ಊಹೆ ಮಾಡಿಕೊಳ್ಳಲು ಕಷ್ಟ ಆಗೋದಾದ್ರೆ ಜಾಸ್ತಿ ರಿಸ್ಕ್ ತಗೋಬೇಡಿ ಯಾಕಂದ್ರೆ ಇಂತಹ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಿರೋ ಒಂದು ಮೊಸಳೆಯ ಪರಿಸ್ಥಿತಿ ಹೇಗಿರುತ್ತೆ ಅನ್ನೋ ವೀಡಿಯೋ ಒಂದು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಾ ಸಾಗಿದೆ. ಏನದು ವೀಡಿಯೋ ಅಂತೀರಾ?
ಟ್ವಿಟರ್ ಬಳಕೆದಾರರು ಒಬ್ಬರು ಶೇರ್ ಮಾಡಿರೋ ಒಂದು ವೀಡಿಯೋವನ್ನು ಈಗಾಗಲೇ ಹತ್ತು ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಅನೇಕರು ಮೆಚ್ಚುಗೆ ಸೂಚಿಸಿ, ರೀಟ್ವೀಟ್ ಮಾಡಿದ್ದಾರೆ. ಈ ವೀಡಿಯೋದಲ್ಲಿ ಹಿಪ್ಪೊಪಾಟಮಸ್ ಅಥವಾ ನೀರು ಕುದುರೆಗಳ ದೊಡ್ಡ ದಂಡೊಂದು ನೀರಿನಲ್ಲಿ ಇದ್ದು ಅವುಗಳ ಮಧ್ಯೆ ಒಂದು ಮೊಸಳೆ ಸಿಕ್ಕಿ ಕೊಂಡಿದೆ. ನೀರು ಕುದುರೆಗಳ ನಡುವೆ ಸಿಲುಕಿದ ಮೊಸಳೆ ಅಲ್ಲಿಂದ ತಪ್ಪಿಸಿಕೊಳ್ಳಲು ಪರದಾಟ ಪಡುತ್ತಿದೆ. ಮೂವತ್ತು, ನಲ್ವತ್ತು ಹಿಪ್ಪೋಗಳು ಒಟ್ಟಾಗಿರುವ ಗುಂಪಿನಲ್ಲಿ ಮೊಸಳೆ ಸಿಕ್ಕಿ ಹಾಕಿಕೊಂಡಿದೆ. ಅದನ್ನು ಹಿಪ್ಪೋಗಳು ಹುರಿದು ಮುಕ್ಕುತ್ತಿವೆ, ಮೊಸಳೆಗಳು ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಅಸಹಾಯಕವಾಗಿದೆ.
ವಿಡಿಯೋ ನೋಡಿ
Crocodile swims into a herd of 30 hippos pic.twitter.com/yLf3pppp8j
— The Dark Side Of Nature (@Darksidevid) September 9, 2020
ಈ ವೀಡಿಯೋ ನೋಡಿದ ನೆಟ್ಟಿಗರು ಮೊಸಳೆ ಹಿಪ್ಪೋಗಳ ಗ್ಯಾಂಗನ್ನು ಮೊಸಳೆ ಬಾರಿಸುತ್ತಿದೆ ಎಂದರೆ, ಮತ್ತೆ ಕೆಲವರು ಮೂರ್ಖ ಮೊಸಳೆ ಹಿಪ್ಪೋಗಳ ಮೇಲೆ ಧಾಳಿ ಮಾಡಿದೆ, ಅದರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ. ಮೊಸಳೆಯ ಮೂರ್ಖ ಪ್ರಯತ್ನ ಎಂದು ಒಬ್ಬರು ಅದರ ಬಗ್ಗೆ ಹೇಳಿದ್ದಾರೆ. ಮತ್ತೊಬ್ಬರು ಈ ವೀಡಿಯೋ ನೋಡೋದಕ್ಕೆ ಬಹಳ ಚೆನ್ನಾಗಿದೆ ಎಂದು ಕೂಡಾ ಹೇಳಿದ್ದಾರೆ.ಒಟ್ಟಾರೆ ಮೊಸಳೆ ಅಸಹಾಯಕತೆ ಯನ್ನು ನೋಡಿದಾಗ ನಮಗೂ ಅಯ್ಯೋ ಪಾಪ ಎನಿಸುತ್ತದೆ.