Viral Video: ಅಬ್ಬಾ! ಆಟೋದಲ್ಲಿ ಹತ್ತಿದ್ದು ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ 27 ಜನ; ಕ್ಲಾಸ್ ತೆಗೆದುಕೊಂಡ ಪೊಲೀಸ್.

ಸಾಮಾನ್ಯವಾಗಿ ಆಟೋದಲ್ಲಿ ಇಬ್ಬರೋ ಮೂವರು ಪ್ರವಾಸ ಮಾಡುವದನ್ನು ನೋಡಿದ್ದೇವೆ. ಇನ್ನು ಅತೀ ಹೆಚ್ಚೆಂದರೆ 5 ಅಥವಾ 6 ಜನ, ಜಾಸ್ತಿಯಾಯಿತು ಅಲ್ವಾ? ಆದರೆ ಉತ್ತರಪ್ರದೇಶದ ಫತೆಹಪೂರ್ ಜಿಲ್ಲೆಯಿಂದ ಬೆಚ್ಚಬೀಳಿಸುವ ಘಟನೆಯೊಂದು ವರದಿಯಾಗಿದೆ. ಏನದು ನೋಡಿ.

ಇಲ್ಲಿ ಪೊಲೀಸರೊಬ್ಬರು ರಸ್ತೆಯ ಮೇಲೆ ನಡೆದಿದ್ದ ಆಟೋವನ್ನು ಆಕಸ್ಮಿಕವಾಗಿ ದಾರಿ ಮಧ್ಯೆ ನಿಲ್ಲಿಸಿದ ನಂತರ ಒಳಗಿನ ದೃಶ್ಯವನ್ನು ನೋಡಿ ಸ್ವತಃ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಪೊಲೀಸರ ಎಣಿಕೆಯ ಪ್ರಕಾರ ಆಟೋದಲ್ಲಿ ಒಟ್ಟು 26 ಜನರು ಸಂಚರಿಸುತ್ತಿದ್ದರು. ಚಾಲಕನನ್ನು ಹಿಡಿದು ಒಟ್ಟು 27 ಜನರು ಆಟೋದಲ್ಲಿ ಕುಳಿತು ಪ್ರವಾಸ ಮಾಡುತ್ತಿದ್ದರು. ಇದೇ ಘಟನೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಪೊಲೀಸರು ಆಟೋ ನಿಲ್ಲಿಸಿ ಒಬ್ಬೊಬ್ಬರನ್ನು ಬದಿಗೆ ನಿಲ್ಲಿಸಿ ಕೌಂಟ್ ಮಾಡಿದಾಗ ಅದರಲ್ಲಿ ಒಟ್ಟು 27 ಜನರು ಸಂಚರಿಸುತ್ತಿರುವದು ತಿಳಿದು ಬಂದಿದೆ.

ನೋಡಿ ಈ ವಿಡಿಯೋ…

ಇಷ್ಟೊಂದು ಜನರನ್ನು ಕುಳ್ಳಿರಿಸಿ ಆಟೋ ಚಲಾಯಿಸುವದನ್ನು ಕಂಡ ಪೊಲೀಸ್ ಹುಬ್ಬು ಗಂಟಿಕ್ಕಿದ್ದಾನೆ. ಮತ್ತು ಚಾಲಕನಿಗೆ ಫೈನ್ ಹಾಕಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡು ನಂತರ ಆಟೋ ಸೀಜ್ ಮಾಡಿದ್ದಾನೆ. ಈ ವಿಡಿಯೋ ನೋಡಿದ ನೆಟಿಜನ್ಸ್ ಗಳು ಸಹ ಆಶ್ಚರ್ಯ ವ್ಯಕ್ತ ಮಾಡಿದ್ದಾರೆ. ಹಾಗೂ ಇಷ್ಟೊಂದು ಜನರು ಒಳಗೆ ಕೂಡಲು ಸಾಧ್ಯವೇ ಎಂಬ ಪ್ರಶ್ನೆ ಎಲ್ಲರಿಗೆ ಕಾಡುತ್ತಿದೆ.