Viral Video; ಹುಡುಗರಿಗೆ ಶೆಡ್ಡು ಹೊಡೆದು ಕಿಕ್ಕಿರಿದು ತುಂಬಿದ ಚಲಿಸುವ ಬಸ್ಸು ಏರಿ ಕಿಟಕಿಯಿಂದ ಒಳಗೆ ನುಗ್ಗಿದ ಗಟ್ಟಿಗಿತ್ತಿ ಕಾಲೇಜು ಕನ್ಯೆ..!

ಪ್ರತಿಯೊಂದು ಕ್ಷೇತ್ರದಲ್ಲಿ ಹುಡುಗಿಯರು ಹುಡುಗರಿಗೆ ಓವರ್ ಟೆಕ್ ಮಾಡಿ ಮುಂದೆ ಹೋಗುತ್ತಿದ್ದಾರೆ. ಹೀಗಾಗಿ ಪಾಪ ಬಡಪಾಯಿ ಹುಡುಗರು ಮುಂದೆ ಏನು ಮಾಡಬೇಕು ಎಂಬ ಪೀಕಲಾಟದಲ್ಲಿ ಸಿಕ್ಕಿರುವಾಗ ಇಲ್ಲಿ ಹುಡುಗಿಯೊಬ್ಬಳು ಪೋಲಿ ಹುಡುಗರು ತುಂಬಾ ಜಾಲಿಯಾಗಿ ಮಾಡುವ ಮತ್ತೊಂದು ಕೆಲಸಕ್ಕೆ ಕೈಹಾಕಿ ಇದು ಸಹ ನಮಗೆ ಬರುತ್ತದೆ ಎಂದು ತೋರಿಸಿದ್ದಾಳೆ.

ಬಸ್ ಸ್ಟ್ಯಾಂಡಿನಲ್ಲಿ ಗದ್ದಲವಿರುವಾಗ ಜನರು ಬಸ್ಸಿನಲ್ಲಿ ಜಾಗ ಹಿಡಿಯಲು ವಿಧ ವಿಧ ಐಡಿಯಾಗಳನ್ನು ವರ್ಕೌಟ್ ಮಾಡಲು ನೋಡುತ್ತಾರೆ. ಬಸ್ಸಿನಲ್ಲಿ ಜಾಗ ಹಿಡಿಯುವಾಗ ಹೆಚ್ಚಾಗಿ ಹರೆಯದ ಹುಡುಗರು ತುಂಬಾ ಮುಂಚೂಣಿಯಲ್ಲಿರುತ್ತಾರೆ. ಇವರು ಬಸ್ಸು ನಿಲ್ದಾಣಕ್ಕೆ ಬಂದು ನಿಲ್ಲುತ್ತಿದ್ದಂತೆಯೇ ಹೇಗಾದರೂ ಮಾಡಿ ಜಾಗ ಹಿಡಿದು ಕೂಡುವಲ್ಲಿ ಸಫಲರಾಗುತ್ತಾರೆ. ಸದ್ಯ ಇದೇ ಕೆಲಸವನ್ನು ಗಟ್ಟಿಗಿತ್ತಿ ಹುಡುಗಿಯೊಬ್ಬಳು ಮಾಡಿ ತೋರಿಸಿದ್ದಾಳೆ ಅದು ಜನರಿಂದ ಕಿಕ್ಕಿರಿದು ತುಂಬಿದ ಚಲಿಸುವ ಬಸ್ಸಿನಲ್ಲಿ.

ಪ್ರಸ್ತುತ ವಿಡಿಯೋದಲ್ಲಿ ಬಸ್ಸು ಜನರಿಂದ ಕಿಕ್ಕಿರಿದು ತುಂಬಿ ಹೆಚ್ಚಾಗಿ ನಿಲ್ದಾಣದಿಂದ ಬಿಡುತ್ತಿರುವಾಗ ಹುಡುಗಿಯೊಬ್ಬಳು ಚಲಿಸುತ್ತಿರುವ ಬಸ್ಸನ್ನು ಹಿಡಿದು ಏರಿ ಕಿಟಕಿಯಿಂದಲೇ ಒಳಗೆ ಪ್ರವೇಶ ಮಾಡುವ ದೃಶ್ಯವನ್ನು ನೀವಿಲ್ಲಿ ನೋಡಬಹುದು. ಹುಡುಗರ ಇದೊಂದು ಕೆಲಸ ಬಾಕಿ ಉಳಿದಿತ್ತು, ಇದೊಂದು ಕಸಿದುಕೊಂಡು ಬಿಟ್ಟಳು ಎನಿಸುತ್ತಿದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by TheNeetesh Kushwah (@neetesh2426)

ಪ್ರಸ್ತುತ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ neetesh_2426 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 3.9 ಮಿಲಿಯನ್ ವೀಕ್ಷಣೆಯನ್ನು ಪಡೆದಿದ್ದು ಸುಮಾರು ಲಕ್ಷ ಜನರು ಈ ವೀಡಿಯೋವನ್ನು ಲೈಕ್ ಮಾಡಿದ್ದಾರೆ.