Viral Video: ಬೇಸರದಲ್ಲಿರುವ ಮನಸ್ಸಿಗೂ ಬೂಸ್ಟ್ ನೀಡುತ್ತಿದೆ ಬೀವರ್ಸ್ ಗಳ ಈ ಸುಂದರವಾದ ವಿಡಿಯೋ
ಯಾವುದಾದರೂ ಒಂದು ಕೆಲಸವನ್ನು ಮಾಡಲು ಯಾರಿಗಾದರೂ ಕೊಟ್ಟಾಗ, ಅಥವಾ ನಾವೇ ಕೆಲಸವನ್ನು ಮಾಡುವಾಗ ಬಹಳ ಜಾಗೂರಕತೆಯಿಂದ ಹಾಗೂ ಅಚ್ಚುಕಟ್ಟಾಗಿ ಮಾಡಬೇಕು ಎಂದು ಸಲಹೆಗಳನ್ನು ನೀಡುತ್ತಾರೆ. ನಾವು ಕೂಡಾ ನಮ್ಮ ಕೆಲಸ ವನ್ನು ಬಹಳ ಜಾಗರೂಕತೆಯಿಂದ ಮಾಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಂಡೇ ಕೆಲಸಕ್ಕೆ ತೊಡಗುತ್ತೇವೆ. ಆದರೆ ಕೆಲವರು ತಮ್ಮ ಕೆಲಸಗಳ ಬಗ್ಗೆ ಅಷ್ಟೇನೂ ಕಾಳಜಿಯನ್ನು, ಆಸ್ಥೆಯನ್ನು ವಹಿಸದೆ ಮನಸೋ ಇಚ್ಛೆ ಕಾರ್ಯವನ್ನು ಮಾಡಿ, ಅದನ್ನು ಹಾ ಳು ಮಾಡಿ, ಮತ್ತೆ ಇನ್ನಾರೋ ಅದನ್ನು ಸರಿಯಾಗಿ ಮಾಡಬೇಕಾಗುತ್ತದೆ. ಕೆಲವರು ಮಾತ್ರವೇ ಪ್ರತಿಯೊಂದು ಕೆಲಸದ ಬಗ್ಗೆಯೂ ಕೂಡಾ ಬಹಳ ಶ್ರದ್ಧೆಯನ್ನು ವಹಿಸಿ ಮಾಡುವುದನ್ನು ನಾವು ಕಾಣಬಹುದು.
ಸಾಮಾನ್ಯವಾಗಿ ಕಷ್ಟಪಟ್ಟು, ಶ್ರದ್ಧೆಯಿಂದ ನಮ್ಮ ಕೆಲಸವನ್ನು ನಾವು ಮಾಡಿದರೆ ಅದರ ಫಲ ತಡವಾಗಿಯಾದರೂ ದಕ್ಕುವುದು ಎಂದು ಹಿರಿಯರು ಹೇಳುವ ಮಾತನ್ನು ನಾವು ಕೇಳಿದ್ದೇವೆ. ಅಲ್ಲದೇ ಸರಿಯಾಗಿ ಕೆಲಸವನ್ನು ಮಾಡದೇ ಸೋಮಾರಿತನ ತೋರುವ, ಆಲಸಿಗಳಂತೆ ಜಡ್ಡುಗಟ್ಟಿದಂತೆ ಇರುವವರಿಗೆ ಶ್ರಮ ವಹಿಸಿ ಕೆಲಸ ಮಾಡುವವರ ಉದಾಹರಣೆಗಳನ್ನು ನಾವು ನೀಡುತ್ತೇವೆ. ಹಾಗೆ ಉದಾಹರಣೆ ನೀಡುವ ವೇಳೆ ನಾವು ಮನುಷ್ಯರನ್ನು ಮಾತ್ರವೇ ಅಲ್ಲ ಕೆಲವು ಪ್ರಾಣಿಗಳನ್ನು ಕೂಡಾ ಉದಾಹರಣೆಯಾಗಿ ತೋರಿಸಿ ಕೆಲಸ ಹಾಗೆ ಮಾಡಬೇಕು ಎಂದು ಹೇಳುತ್ತೇವೆ.
ಆಂಗ್ಲ ಭಾಷೆಯಲ್ಲಿ ಕೆಲಸದ ವಿಚಾರ ಬಂದಾಗ ಕೆಲಸ ಹೇಗೆ ಮಾಡಬೇಕು ಎನ್ನುವಾಗ Work like a beaver ಎಂದು ಹೇಳಲಾಗುವುದು. ಹೌದು ಬೀವರ್ ನೋಡಲು ಹೆಗ್ಗಣದ ಹಾಗೆ ಕಾಣುವ ಆದರೆ ಗಾತ್ರದಲ್ಲಿ ಅದಕ್ಕಿಂತ ದೊಡ್ಡದಾದ ಹಾಗೂ ಬಹಳ ಮುಗ್ಧ ವಾದ ಪ್ರಾಣಿಯಂತೆ ಕಾಣುತ್ತದೆ. ಇದರ ಮುಖ ನೋಡಿದರೆ ಯಾರಿಗೂ ಕೋಪ ಕೂಡಾ ಬಾರದು. ಶ್ರಮವಹಿಸಿ ಕೆಲಸ ಮಾಡುವ ಜೀವಿಗಳು ಇವು. ಈಗ ಸೋಶಿಯಲ್ ಮೀಡಿಯಾದಲ್ಲಿ ಎರಡು ಬೀವರ್ ಗಳ ವೀಡಿಯೋ ಒಂದು ವೈರಲ್ ಆಗಿ ಲಕ್ಷಾಂತರ ಜನರ ವೀಕ್ಷಣೆಯನ್ನು ಪಡೆದಿದ್ದು, ಜನರು ಬೀವರ್ ಗಳ ಕಾರ್ಯವನ್ನು ನೋಡಿ ಬಹಳ ಮೆಚ್ಚುಗೆಗಳನ್ನು ಸೂಚಿಸುತ್ತಿದ್ದಾರೆ.
ವೈರಲ್ ಆಗಿರುವ ವೀಡಿಯೋದಲ್ಲಿ ಬೀವರ್ ಗಳಿಗೆ ಆಹಾರವಾಗಿ ಕ್ಯಾರೆಟನ್ನು ನೀಡಲಾಗಿದೆ. ಅದರಲ್ಲಿ ಒಂದು ಬೀವರ್ ಸ್ವಲ್ಪ ಹೆಚ್ಚು ಕ್ಯಾರಟ್ ತುಂಡುಗಳನ್ನು ಕಚ್ಚಿಕೊಂಡು ರಸ್ತೆಯಲ್ಲಿ ನಡೆದು ಬರುತ್ತಿದೆ. ದಾರಿಯಲ್ಲಿ ಒಂದೆರಡು ಬಾರಿ ಕ್ಯಾರೆಟ್ ತುಂಡು ಕೆಳಗೆ ಬಿದ್ದಾಗ ಅದನ್ನು ಜೋಪಾನವಾಗಿ ಎತ್ತಿಕೊಂಡು ಮುಂದಕ್ಕೆ ಬಂದಿದೆ. ಅದರ ಹಿಂದೆಯೇ ಮತ್ತೊಂದು ಬೀವರ್ ಕೂಡಾ ಬಾಯಲ್ಲಿ ಕ್ಯಾರೆಟ್ ಹಿಡಿದು ನಿಧಾನವಾದ ಹೆಜ್ಜೆ ಹಾಕುತ್ತಾ ಬಂದಿದ್ದು, ಒಂದಷ್ಟು ದೂರವನ್ನು ಕ್ರಮಿಸಿದ ನಂತರ ಅವುಗಳಿಗಾಗಿ ನಿರ್ಮಾಣ ಮಾಡಿರುವ ಪುಟ್ಟ ಪುಟ್ಟ ಪ್ಲಾಸ್ಟಿಕ್ ಗೂಡುಗಳ ಒಳಗೆ ಕ್ಯಾರೆಟ್ ಇಟ್ಟು ತಾವು ಒಳಗೆ ಸೇರಿವೆ.
ವಿಡಿಯೋ ನೋಡಿ
In case you needed a reason to smile today 😊 pic.twitter.com/hX5xzDNi1Q
— Crazy Panda (@CrazyPa50956318) October 11, 2020
ಈಗಾಗಲೇ ನಾಲ್ವತ್ತಯ ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿರುವ ಈ ವೀಡಿಯೋ ಏಳು ಸಾವರಿಕ್ಕಿಂತ ಅಧಿಕ ಲೈಕ್ ಪಡೆದು, ಎರಡು ಸಾವಿರಕ್ಕಿಂತ ಅಧಿಕ ರೀಟ್ವೀಟ್ ಆಗಿದೆ. ವೀಡಿಯೋ ಹಂಚಿಕೊಂಡವರು ಶೀರ್ಷಿಕೆಯಲ್ಲಿ ಇಂದು ಮುಗುಳ್ನಗಲು ಕಾರಣ ಬೇಕಿದ್ದರೆ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ. ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಸ್ಟ್ರೆಸ್ ಮತ್ತು ಬೇಸರದಲ್ಲಿದ್ದ ನಮಗೆ ಈ ವೀಡಿಯೋ ಖುಷಿ ನೀಡಿದೆ ಎಂದಿದ್ದಾರೆ. ಇನ್ನೂ ಕೆಲವರು ಬೀವರ್ ಗಳನ್ನು ನೋಡಿ ಅಮಾಯಕ ಜೀವಿಗಳು ಎಂದಿದ್ದಾರೆ. ಕೆಲವರು ಎಷ್ಟು ಸ್ಮಾರ್ಟ್ ಇವು ಎಂದು ಹೊಗಳಿದ್ದಾರೆ.