Viral Video: ಪತ್ನಿಯ ಜೊತೆ ಭರ್ಜರಿಯಾಗಿ ಡಾನ್ಸ್ ಪ್ಲೋರ್ ನಲ್ಲಿ ಕುಣಿದ ಸರ್ದಾರ್ ಜಿ : ಮುದುಕರಾದ ಮೇಲೆ ಜೀವನ ಹೀಗಿದ್ದರೆ ಸಾಕೆಂದ ನೆಟ್ಟಿಗರು!
ಸೋಶಿಯಲ್ ಮೀಡಿಯಾ ಎನ್ನುವುದೇ ಒಂದು ವಿಶ್ವ ವ್ಯಾಪಿ ಅಥವಾ ಜಾಗತಿಕ ಮಟ್ಟದ ವೇದಿಕೆಯಾಗಿ ಬದಲಾಗಿದೆ. ಇದರಲ್ಲಿ ಯಾರು, ಯಾವಾಗ ಹಾಗೂ ಹೇಗೇ ಬೇಕಾದರೂ ಕೂಡಾ ಸದ್ದು ಮಾಡಿ, ಸುದ್ದಿ ಯಾಗಿ ಬಿಡಬಹುದು. ಇತ್ತೀಚಿನ ವರ್ಷಗಳಲ್ಲಂತೂ ಸೋಶಿಯಲ್ ಮೀಡಿಯಾಗಳಿಂದ ಯಾವುದೇ ವಿಷಯವಾದರೂ ಕೂಡಾ ಬಹಳ ಬೇಗ ಇಲ್ಲಿ ಹರಿದಾಡಿ ಬಿಡತ್ತದೆ. ಅನೇಕ ಸಂದರ್ಭಗಳಲ್ಲಿ ಸೋಶಿಯಲ್ ಮೀಡಿಯಾದಿಂದಲೇ ನಿನ್ನೆಯವರೆಗೆ ಸಾಮಾನ್ಯ ಜನರಲ್ಲಿ ಒನ್ನರಾಗಿರುವವರು ಕೂಡಾ ಸೆಲೆಬ್ರಿಟಿಗಳ ಹಾಗೆ ಮೆರೆಯುವುದನ್ನು ಕೂಡಾ ನಾವು ನೋಡಬಹುದಾಗಿದೆ. ಸೋಶಿಯಲ್ ಮೀಡಿಯಾ ಒಂದು ಪ್ರಬಲ ಅಸ್ತ್ರವಾಗಿ ಜನರ ಕೈಗೆ ಸಿಕ್ಕಿದೆ ಕೂಡಾ.
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸಂದರ್ಭಗಳಲ್ಲಿ ನಮಗೆ ಬಹಳ ಸುಂದರವಾದ, ಪ್ರೀತಿ ಪಾತ್ರವಾದ ದೃಶ್ಯಗಳು, ಘಟನೆಗಳು ಹಾಗೂ ಅನುಭೂತಿಯನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ. ಅವುಗಳ ಮೇಲಿಂದ ನೋಟ ಸರಿಸುವುದು ಕೂಡಾ ಕ ಠಿ ಣವೆನಿಸಿದರೆ ಇನ್ನೂ ಅನೇಕ ಬಾರಿ ಅವುಗಳನ್ನು ಮತ್ತೆ ಮತ್ತೆ ನೋಡಬೇಕು ಎನಿಸತೊಡಗುತ್ತದೆ ಕೂಡಾ. ಈಗ ಸೋಶಿಯಲ್ ಮೀಡಿಯಾದಲ್ಲಿ ಅಂತಹುದೇ ಒಂದು ಸುಂದರವಾದ ವೀಡಿಯೋ, ಒಮ್ಮೆ ನೋಡಿದರೆ ಮತ್ತೊಮ್ಮೆ ಮಗದೊಮ್ಮೆ ನೋಡಿ ಬೇಕೆನಿಸುವ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲೊಂದು ದೊಡ್ಡ ಸದ್ದನ್ನು ಮಾಡುತ್ತಿದೆ.
ಕಲಾಕಾರ್ಸ್ ಎನ್ನುವ ಫೇಸ್ ಬುಕ್ ಪೇಜ್ ನಲ್ಲಿ ಒಂದು ಸುಂದರವಾದ ವೀಡಿಯೋವನ್ನು ಶೇರ್ ಮಾಡಲಾಗಿದೆ. ಈ ವೀಡಿಯೋದಲ್ಲಿ ಒಬ್ಬ ಸರ್ದಾರ್ಜಿ ಡಾಮ್ಸ್ ಫ್ಲೋರ್ ಮೇಲೆ ಒಬ್ಬರೇ ಬಹಳ ಭರ್ಜರಿಯಾದ ಹೆಜ್ಜೆಗಳನ್ನು ಹಾಕುತ್ತಾ ಕುಣಿದಿದ್ದಾರೆ. ಅನಂತರ ಅವರು ತಮ್ಮ ಪತ್ನಿಯನ್ನು ಕರೆದು ತನ್ನೊಡನೆ ಡಾನ್ಸ್ ಮಾಡುವಂತೆ ಸೂಚನೆ ನೀಡುತ್ತಾರೆ. ಆಗ ಆಕೆ ಕೂಡಾ ಡಾನ್ಸ್ ಮಾಡುತ್ತಿದ್ದ ಪತಿಯ ಜೊತೆಗೆ ಸೇರಿ ಡಾನ್ಸ್ ಫ್ಲೋರ್ ನಲ್ಲಿ ಕುಣಿಯುವುದಕ್ಕೆ ಆರಂಭಿಸುತ್ತಾರೆ. 49 ಸೆಕೆಂಡ್ ಗಳ ಈ ವೀಡಿಯೋ ನೋಡಿದಾಗ ವಯಸ್ಸು ಎನ್ನುವುದು ಕೆಲವರಿಗೆ ಅದೊಂದು ಸಂಖ್ಯೆ ಮಾತ್ರವೇ ಹೊರತು ಬೇರೇನೂ ಅಲ್ಲ ಎನಿಸುತ್ತದೆ.
ಈ ವೀಡಿಯೋವನ್ನು ಶೇರ್ ಮಾಡಿಕೊಂಡಿರುವರು ಈ ಜೋಡಿಯು ನಿಮಗೆ ಫರ್ಪೆಕ್ಟ್ ಜೋಡಿಯ ಸವಾಲನ್ನು ನೀಡುತ್ತಿದೆ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಇನ್ನು ಈ ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಒಬ್ಬರಿಗಿಂತ ಮತ್ತೊಬ್ಬರು ಎನ್ನುವಂತೆ ಪ್ರತಿಕ್ರೆಯಗಳ ಮೂಲಕ ತಮ್ಮ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ. ಅದರಲ್ಲೊಬ್ಬರು ಇಂದಿಗೂ ಕೂಡಾ ಚಾಚಾ ಚಾಚಿಯನ್ನು ತನ್ನ ನಿಯಂತ್ರಣದಲ್ಲೇ ಕುಣಿಸುತ್ತಿದ್ದಾರೆ ಎಂದಿದ್ದಾರೆ. ಮತ್ತೊಬ್ಬರು ನನಗೆ ವಯಸ್ಸಾದ ಮೇಲೆ ನನ್ನ ಜೀವನ ಕೂಡಾ ಹೀಗೆ ಇರಲಿ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದು ವೀಡಿಯೋಗೆ ತಮ್ಮ ಮೆಚ್ಚುಗೆಯನ್ನು ಕೂಡಾ ಅವರು ನೀಡಿದ್ದಾರೆ.
ವಿಡಿಯೋ ನೋಡಿ
ಒಟ್ಟಾರೆ ವಯಸ್ಸಾದ ವ್ಯಕ್ತಿ ಹಾಗೂ ಅವರ ಪತ್ನಿ ಮಾಡಿದ ಡಾನ್ಸ್ ವೀಡಿಯೋ ಸಕತ್ ಹಿಟ್ ಆಗಿದೆ. ಇಂತಹುದೇ ಒಂದು ವೀಡಿಯೋ ಕೆಲವು ವರ್ಷಗಳಿಂದ ವೈರಲ್ ಆಗಿತ್ತು. ಅದರಲ್ಲಿ ಕೂಡಾ ಒಬ್ಬ ಅಂಕಲ್ ನಟ ಗೋವಿಂದ ಅವರ ಸಿನಿಮಾಗಳ ಹಾಡುಗಳಿಗೆ ಮದುವೆ ರೆಸೆಪ್ಷನ್ ಒಂದರಲ್ಲಿ ಮಾಡಿದ ಡಾನ್ಸ್ ಕೂಡಾ ವೈರಲ್ ಆಗಿತ್ತು. ಈಗ ಅದರ ರೀತಿಯಲ್ಲೇ ಯಾವುದೋ ಒಂದು ಸಮಾರಂಭದಲ್ಲಿ ನಡೆದ ದೃಶ್ಯಾವಳಿಗಳು ವೈರಲ್ ಆಗಿದ್ದು ಒಂದು ನೆನಪು ಅಷ್ಟೇ. ಒಟ್ಟಾರೆ ಸರ್ದಾರ್ ಜಿ ಮತ್ತು ಅವರ ಪತ್ನಿಯ ಭರ್ಜರಿ ಡಾನ್ಸ್ ವೀಡಿಯೋ ಡಾನ್ಸ್ ಪ್ರಿಯರಿಗೆ ಒಳ್ಳೆ ಮನರಂಜನೆ ಕೊಡ್ತಾ ಇದೆ.