ವಿರಾಟ್ ಕೊಹ್ಲಿ ಅವರ 2006 ರಲ್ಲಿಯ 17 ವರ್ಷ ಹಳೆಯ Video ಆಗುತ್ತಿದೆ ಭರ್ಜರಿ ವೈರಲ್! ಹೀಗಿದ್ದರೂ RCB ಮಾಜಿ ನಾಯಕ.
ಭಾರತ ಕ್ರಿಕೆಟ್ ಕಂಡ ಅದ್ಭುತ, ಅದ್ವಿತೀಯ ಆಟಗಾರ ವಿರಾಟ್ ಕೊಹ್ಲಿ. ಪ್ರತಿಯೊಂದು ಪಂದ್ಯದಲ್ಲಿ ಕಂಡು ಬರುವ ಅವರ ಎಫರ್ಟ್, ಜಿದ್ದು ಅವರ್ಣನೀಯವಾಗಿದೆ. ಈ ಆಟಗಾರ ಮೊದಲಿನಿಂದಲೂ ಕ್ರಿಕೆಟ್ ರಸಿಕರನ್ನು ತನ್ನತ್ತ ಸೆಳೆಯುತ್ತಾ ಬಂದಿದ್ದಾರೆ. ಅದಕ್ಕೆ ಕಾರಣ ಅವರಲ್ಲಿರುವ ಕ್ರಿಕೆಟ್ ಕೌಶಲ್ಯ.
ದೆಹಲಿಯಲ್ಲಿ ಜನಿಸಿದ ಈ ಯುವಕ ಕ್ರಿಕೆಟ್ ಪ್ರತಿ ಇರುವ ನಿಷ್ಠೆ, ಹವ್ಯಾಸ, ಕಟ್ಟುನಿಟ್ಟಾದ ಅಭ್ಯಾಸ, ಪರಿಶ್ರಮಗಳಿಂದಾಗಿ ದಿನದಿಂದ ದಿನಕ್ಕೆ ಒಂದೊಂದೇ ಮೆಟ್ಟಲುಗಳನ್ನು ಏರುತ್ತಾ ಹೋಗಿ ಕ್ರಿಕೆಟ್ ನಲ್ಲಿ ಈ ವರೆಗೆ ಯಾರೂ ಕಾಣದ ಯಶಸ್ಸು ಸಾಧಿಸಿದ ವ್ಯಕ್ತಿ. ಇಂದು ವಿರಾಟ್ ಕೊಹ್ಲಿ ಅವರು ಬರಿ ಭಾರತ ಅಷ್ಟೇ ಅಲ್ಲ, ಇಡೀ ಜಗತ್ತಿನ ತುಂಬಾ ಅಸಂಖ್ಯ ಸಂಖ್ಯೆಯಲ್ಲಿ ತಮ್ಮ ಅಭಿಮಾನಿಗಳನ್ನು ಹೊಂದಿದ್ದಾರೆ.
ಸದ್ಯ ವಿರಾಟ್ ಕೊಹ್ಲಿ ಅವರ 17 ವರ್ಷಗಳ ಹಿಂದಿನ ಹಳೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ನೋಡಲು ಸಿಗುತ್ತಿದೆ. ಈ ವಿಡಿಯೋ ಕ್ರಿಕೆಟ ರಸಿಕರಿಗೆ ವಿಶೇಷವಾಗಿ ವಿರಾಟ್ ಫ್ಯಾನ್ಸ್ ಗಳಿಗೆ ತುಂಬಾ ಇಷ್ಟವಾಗಿದೆ. ಪ್ರಸ್ತುತ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅವರು ಕೇವಲ 17 ವರ್ಷ ಪ್ರಾಯದವರಾಗಿದ್ದಾರೆ. ಈ ಸಂದರ್ಭದಲ್ಲಿ ಅವರು ಮತ್ತು ಅವರ ಸಂಗಡಿಗರು ಊಟ ಮಾಡುವ ಹಾಗೂ ಮಸ್ತಿ ಮೂಡ್ ನಲ್ಲಿ ಇದ್ದಾರೆ.
ಪ್ರಸ್ತುತ ಈ ಹಳೆಯ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅವರ ಹೊರತಾಗಿ ಇನ್ನೂ ಅನೇಕ ಆಟಗಾರರು ನೋಡಲು ಸಿಗುತ್ತಾರೆ. ಅವರಲ್ಲಿ ಮುಖ್ಯವಾಗಿ ಪಿಯೂಷ್ ಚಾವ್ಲಾ, ಚೇತೇಶ್ವರ್ ಪೂಜಾರಾ ಅವರು ಸಹ ಕಂಡು ಬರುತ್ತಿದ್ದಾರೆ. ಒಟ್ಟಿನಲ್ಲಿ ಈ ಎಲ್ಲ ಆಟಗಾರರು ಫುಲ್ ಮಸ್ತಿ ಮೂಡ್ ನಲ್ಲಿರುವದು ಕಂಡು ಬರುತ್ತಿದೆ.
ವಿಡಿಯೋ ನೋಡಿ.
View this post on Instagram
ಇನ್ಸ್ಟಾಗ್ರಾಮ್ ನಲ್ಲಿ cousins6810 ಹೆಸರಿನಿಂದ ಶೇರ್ ಮಾಡಲಾದ ಈ ವಿಡಿಯೋ ಇಲ್ಲಿಯವರೆಗೆ 1.2 ಮಿಲಿಯನ್ ಗಳ ವರೆಗೆ ವೀಕ್ಷಣೆಯನ್ನು ಪಡೆದಿದ್ದು 1 ಲಕ್ಷ 21 ಸಾವಿರ ಜನರು ಈ ವಿಡಿಯೋಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಮಾಡಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಅನೇಕ ನೆಟ್ಟಿಗರು ವಿರಾಟ್ ಬಗ್ಗೆ ವಿಶೇಷ ಕಾಮೆಂಟ್ ಗಳು ಮಾಡಿದ್ದಾರೆ. ಅವರಲ್ಲಿ ಒಬ್ಬನು, ಅಣ್ಣನ ಸ್ವ್ಯಾಗ್ ಮೊದಲಿನಿಂದಲೂ ಹಾಗೆ ಇದೆ ಎಂದಿದ್ದಾನೆ. ಇನ್ನೊಬ್ಬ ವ್ಯಕ್ತಿ ಕ್ಯಾಮೆರಾ ಮ್ಯಾನ್ ಗೆ ಒಳ್ಳೆಯ ಭವಿಷ್ಯಗಾರ ಎಂದಿದ್ದಾನೆ, ಕಾರಣ ಆತನಿಗೆ ಗೊತ್ತಿತ್ತು ಭವಿಷ್ಯದಲ್ಲಿ ಮಹಾನ್ ಸ್ಟಾರ್ ಆಟಗಾರ ಈತನೇ ಎಂದು.