ವಿರಾಟ್ ಕೊಹ್ಲಿಯ ಕಾರಣದಿಂದಾಗಿ ರೋಹಿತ್ ಶರ್ಮಾ ಬ್ರೇಕ್ ಅಪ್ ಆಗಿತ್ತಂತೆ..! ಹೇಗೆ ನೋಡಿ

ವಿರಾಟ್ ಕೊಹ್ಲಿ ಭಾರತ ತಂಡದ ಮೂರು ಮಾದರಿ ಕ್ರಿಕೆಟ್ ತಂಡಗಳ ನಾಯಕ ಹಾಗೆಯೇ ಹಿಟ್ ಮ್ಯಾನ್ ಎಂದೇ ಖ್ಯಾತಿ ಪಡೆದಿರುವ ರೋಹಿತ್ ಶರ್ಮಾ ಅವರು ಕೂಡ ಭಾರತ ತಂಡದ ಏಕದಿನ ಹಾಗೂ ಟಿ-20 ತಂಡದ ಉಪ ನಾಯಕ. ವಿರಾಟ್ ಮತ್ತು ರೋಹಿತ್ ಶರ್ಮಾ ಅವರು ಇಬ್ಬರೂ ಕೂಡ ಆಟದಲ್ಲಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾದಲ್ಲೂ ಕೂಡ ಆಕ್ಟಿವ್ ಇರುವ ವಿಷಯ ನಿಮಗೆಲ್ಲ ಗೊತ್ತೇ ಇದೆ.

ಇಷ್ಟೇ ಅಲ್ಲದೇ ಇವರಿಬ್ಬರ ನಡುವೆ ಒಂದು ರೋಚಕ ಘಟನೆ ನಡೆದಿದ್ದು ಈ ಹಿಂದೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು, ಬನ್ನಿ ಅದೇನೆಂದು ನೋಡೋಣ… ಹೌದು 2012 ರಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಹಾಗೂ ಲಂಡನ್ ಮೂಲದ ಸಿಂಗರ್, ಆ್ಯಕ್ಟರ್ ಹಾಗೂ 2013 ರ 7 ನೇ ಹಿಂದಿ ಬಿಗ್ ಬಾಸ್ ಸೀಸನ್ ನ ಸ್ಪರ್ಧಿಯೂ ಆಗಿದ್ದ ಚೆಲುವೆ ಸೋಫಿಯಾ ಹಯಾತ್ ಅವರ ನಡುವೆ ಡೇಟಿಂಗ್ ಹಾಗೂ ಪ್ರೇಮಾಂಕುರವಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು.

ಆದರೆ ಸುದ್ದಿಯಾದಷ್ಟೇ ವೇಗವಾಗಿ ಇವರ ಬ್ರೇಕ್ ಅಪ್ ಸುದ್ದಿ ಕೂಡ ಬಂದಿತ್ತು. ಈ ವಿಷಯವನ್ನು ಸ್ವತಃ ಸೋಫಿಯ ಅವರೇ ಟ್ವೀಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದರು ಎಂಬುದು ವಿಶೇಷ. ಆದರೆ ಬ್ರೇಕಪ್ ಹಿಂದಿನ ಕಾರಣವೇ ಬೇರೆ ಇದೆ.

ಇವರಿಬ್ಬರ ಸಂಬಂಧ ಹದಗೆಡಲು ವಿರಾಟ್ ಕೊಹ್ಲಿ ಕಾರಣ!
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅಂದಿನ ದಿನಗಳಲ್ಲಿ ಅಂದರೆ 2012 ರಲ್ಲಿ ಜೊತೆಯಲ್ಲಿಯೇ ಕ್ರಿಕೆಟ್ ಆಡುತ್ತಿದ್ದ ನವ ಯುವಕರಾಗಿದ್ದರು, ರೋಹಿತ್ ಹಾಗೂ ಸೋಫಿಯ ನಡುವಿನ ಸಂಬಂಧ ಮುರಿದು ಹೋಗಲು ವಿರಾಟ್ ಕೊಹ್ಲಿಯೇ ಕಾರಣವಂತೆ! ಅದು ಹೇಗೆಂದರೆ ಸ್ವತಃ ಸೋಫಿಯ ಅವರೇ ತಮ್ಮ ಖಾತೆಯಲ್ಲಿ I turned Rohit down because Virat is better player in and off the pitch ಎಂದು ಬರೆದುಕೊಂಡಿದ್ದರು!

ಇದರ ನಂತರ ರೋಹಿತ್ ಶರ್ಮಾ ಅವರಿಗೆ ರೀತಿಕಾ ಸಜ್ದೇಹ್ ಅವರೊಂದಿಗೆ ಪ್ರೀತಿ ಹುಟ್ಟಿ ಕೊನೆಗೆ 2015 ರಲ್ಲಿ ಅವರನ್ನೇ ವಿವಾಹವಾಗಿ ಸದ್ಯ ಒಂದು ಮಗುವಿನ ತಂದೆಯಾಗಿದ್ದಾರೆ. ಯಶಸ್ವಿ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಈ ಹ್ಯಾಟ್ರಿಕ್ ದ್ವಿಶತಕವೀರ ರೋಹಿತ್. ಮತ್ತೊಂದೆಡೆ ಈ ಸೋಫಿಯ ಅವರ ಸಂಬಂಧ ವಿರಾಟ್ ಜೊತೆಗೂ ಕೊನೆಗೊಂಡು ಸದ್ಯ ವ್ಲಾಡ್ ಸ್ಥಾನೆಸ್ಕೂ ಎಂಬುವರೊಂದಿಗೆ ವಿವಾಹವಾಗಿದ್ದರೆ.

ಇತ್ತ ವಿರಾಟ್ ಕೊಹ್ಲಿ ಕೂಡ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾಗಿ ಒಂದು ಮಗುವಿನ ತಂದೆಯಾಗಿರುವ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಹೀಗೆ ೆಲ್ಲೊ ಸೇರಬೇಕಾದವರು ಯಾರದೊ ಕಾರಣಕ್ಕೆ ಮತ್ತೆಲ್ಲೋ ಸೇರಿದರು. ಈ ವಿಷಯ ತುಂಬಾ ಜನರಿಗೆ ಗೊತ್ತಿಲ್ಲ.
-ಮಂಜುನಾಥ್