ವೈರಲ್ ಆಯ್ತು ಸೊಳ್ಳೆಯನ್ನು ಹೊಡೆಯುವ ವಿಚಿತ್ರ ಐಡಿಯಾ; “ಈ ಐಡಿಯಾ ಮೊದಲು ನಮಗೇಕೆ ಹೊಳೆಯಲಿಲ್ಲ?” ಎಂದ ನೆಟ್ಟಿಗರು!
ಒಂದು ಸಣ್ಣ ಸೊಳ್ಳೆ ಮನುಷ್ಯನ ನೆಮ್ಮದಿಯನ್ನು ಹಾಳು ಮಾಡಿಬಿಡುತ್ತದೆ. ಸೊಳ್ಳೆಗಳ ರಕ್ತದ ದಾಹದಿಂದ ಅದು ತನ್ನ ಚೂಪಾದ ಕೊಂಡಿಯಂತಹ ಭಾಗದಿಂದ ಮನುಷ್ಯನನ್ನು ಕಚ್ಚಿ ರಕ್ತ ಹೀರುವುದು ಮಾತ್ರವೇ ಅಲ್ಲದೇ, ಅದರ ಜೊತೆಗೆ ಡೆಂಗ್ಯೂ, ಮಲೇರಿಯಾದಂತಹ ರೋಗ ಗಳನ್ನು ಕೂಡಾ ನೀಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸೊಳ್ಳೆಗಳು ಕಚ್ಚುವುದರಿಂದ ಉಂಟಾಗುವ ತುರಿಕೆ ಹಾಗೂ ಹಾಗೂ ಕಚ್ಚಿದ ಜಾಗದಲ್ಲಿ ಊತ ಬಂದಾಗ, ಕಚ್ಚಿಸಿಕೊಂಡ ವ್ಯಕ್ತಿಗೆ ಸೊಳ್ಳೆಯನ್ನು ಹೊಡೆದು ಸಾಯಿಸಬೇಕು ಎನ್ನುವಷ್ಟು ಸಿಟ್ಟು ಬರುತ್ತದೆ. ಕೆಲವರಿಗಾದರೆ ಅವುಗಳನ್ನು ಹೊಡೆದು ಸಾಯಿಸುವವರೆಗೂ ಸಮಾಧಾನ ಸಿಗುವುದಿಲ್ಲ. ರಕ್ತ ಕುಡಿಯಲು ಬರುವ ಇಂತಹ ಸಣ್ಣ ಬೇ ಟೆಗಾರರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಹಳಷ್ಟು ಜನ ತಮ್ಮದೇ ಆದ ರೀತಿಯಲ್ಲಿ ಉಪಾಯಗಳನ್ನೂ ಮಾಡುತ್ತಾರೆ.
ಹೀಗೆ ಸೊಳ್ಳೆಗಳನ್ನು ಟ್ರ್ಯಾಪರ ಮಾಡಲು ಬಳಸುವ ಒಂದು ವಿಚಿತ್ರವಾದ ಐಡಿಯಾ ಕುರಿತಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗುವ ಮೂಲಕ ಎಲ್ಲರ ಗಮನವನ್ನೂ ಸೆಳೆದಿದೆ. ಈ ಆಸಕ್ತಿಕರವಾದ ಫೋಟೋವನ್ನು ಟ್ವಿಟರ್ ನಲ್ಲಿ ಜೂಡಿಯಾನ ಎನ್ನುವವರು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದ ಕಡೆ ನಾವು ಗಮನ ನೀಡಿದಾಗ ಅದರಲ್ಲಿ ನಮಗೆ 4 ವಸ್ತುಗಳು ಕಾಣಿಸುತ್ತದೆ. ಮೊದಲ ವಸ್ತು ಉಪ್ಪು, ಎರಡನೆಯದು ಟಕಿಲಾ ತುಂಬಿರುವ ಕೂಲ್ ಡ್ರಿಂಕ್ ಒಂದರ ಮುಚ್ಚಳ, ಮೂರನೆಯದು ಒಂದು ಸಣ್ಣ ಕೋಲು ಹಾಗೂ ನಾಲ್ಕನೆಯದು ಒಂದು ಕಲ್ಲು. ಹೀಗೆ ನಮಗೆ 4 ವಿಭಿನ್ನವಾದ ವಸ್ತುಗಳು ಅಲ್ಲಿ ಕಾಣುತ್ತವೆ.

ಫೋಟೋ ಶೇರ್ ಮಾಡಿಕೊಂಡವರು ಹ್ಯಾಷ್ ಟ್ಯಾಗ್ ಬಳಸಿ, ಈ ಪೇಟೆಂಟ್ ನ ಮೂಲಕ ನಾನು ಶ್ರೀಮಂತನಾಗಲು ಹೊರಟಿದ್ದೇನೆ ಎಂದು ಹೇಳಿದ್ದಾರೆ.
ಇನ್ನು ಈ ಟ್ವೀಟ್ ಅನ್ನು ಈಗಾಗಲೇ ಅನೇಕ ಮಂದಿ ರಿಟ್ವೀಟ್ ಮೂಲಕ ಶೇರ್ ಮಾಡಿಕೊಂಡಿದ್ದಾರೆ. 2000 ಕ್ಕಿಂತಲೂ ಅಧಿಕ ಮಂದಿ ಇದಕ್ಕೆ ಮೆಚ್ಚುಗೆಯನ್ನು ನೀಡಿದ್ದಾರೆ. ಇಷ್ಟೊಂದು ಗಮನ ಸೆಳೆದ ಈ ಫೋಟೋ ಶೇರ್ ಮಾಡಿಕೊಂಡವರು, ಆ ನಾಲ್ಕು ವಸ್ತುಗಳ ಉಪಯೋಗ ಕುರಿತಾಗಿ ಮಾಹಿತಿಯನ್ನು ನೀಡಿದ್ದಾರೆ. ಅವರು ತಮ್ಮ ಪೋಸ್ಟ್ ನಲ್ಲಿ ಅವುಗಳ ಬಗ್ಗೆ ಬರೆದು ವಿವರಣೆ ನೀಡಿದ್ದಾರೆ.

ಇದೊಂದು ಮಸ್ಕಿಟೋ ಟ್ರಾಪ್. ಇಲ್ಲಿ ಸೊಳ್ಳೆಯು ಸಕ್ಕರೆ ಎಂದು ತಿಳಿದು ಉಪ್ಪಿನ ಮೇಲೆ ಕುಳಿತುಕೊಳ್ಳುತ್ತದೆ. ಅನಂತರ ಅದಕ್ಕೆ ಬಾಯಾರಿಕೆ ಯಾಗುತ್ತದೆ. ಆಗ ನೀರು ಎಂದು ಕೊಂಡು ಟಕಿಲಾ ವನ್ನು ಕುಡಿಯುತ್ತದೆ. ಅದಕ್ಕೆ ಮತ್ತೇರಿ ಹತ್ತಿರದಲ್ಲೇ ಇರುವ ಕೋಲಿನ ಮೇಲೆ ಏರಿ, ಪಕ್ಕದಲ್ಲೇ ಇರುವ ಕಲ್ಲಿಗೆ ತನ್ನ ತಲೆಯನ್ನು ಚಚ್ಚಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ವೈರಲ್ ಆದ ಈ ಫೋಟೋಗೆ ಅನೇಕ ಮಂದಿ ಕಾಮೆಂಟುಗಳ ಮೂಲಕ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟ್ಟಿಗರೊಬ್ಬರು,” ಸೊಳ್ಳೆ ಕೊಲ್ಲಲು ಇದು ಬಹಳ ಸುಲಭ ಉಪಾಯ” ಎಂದು ಹಾಸ್ಯ ಮಾಡಿದ್ದಾರೆ.
Mosquito trap.
— Judianna – Boomity Variant (@Judianna) June 25, 2021
The mosquito lands on the salt, thinking it's sugar. They get thirsty for water, but the cap has tequila in it.
The mosquito gets drunk, trips on the stick and bangs its head on the rock.#IAmGoingToBeRichWithThisPatent pic.twitter.com/wQfAXlbB3j
ಮತ್ತೊಬ್ಬರು, “ನಿಜಕ್ಕೂ ಇದೊಂದು ಬುದ್ಧಿವಂತಿಕೆಯ ಉಪಾಯ” ಎಂದಿದ್ದಾರೆ. ಮತ್ತೊಬ್ಬ ಟ್ವಿಟರ್ ಬಳಕೆದಾರರು, ” ನಾನು ಭೂಮಿಯ ಮೇಲೆ ಏಕೆ ಇದ್ದೇನೆ, ಇಂತಹ ಸರಳ ಉಪಾಯ ನನಗೆ ಏಕೆ ಬರಲಿಲ್ಲ ” ಎಂದು ವ್ಯಂಗ್ಯವಾಡಿದ್ದಾರೆ. ಹೀಗೆ ಬಹಳಷ್ಟು ಜನ ಬಹಳಷ್ಟು ರೀತಿಯಲ್ಲಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಇದೇ ವೇಳೆ ಟ್ವಿಟ್ಟರ್ ಬಳಕೆದಾರರೊಬ್ಬರು, ಈ ಜೋಕ್ ಬಹಳ ದಿನಗಳಿಂದಲೂ ಬಹಳಷ್ಟು ಕಡೆಗಳಲ್ಲಿ ಹರಿದಾಡುತ್ತಿದೆ. ಇದು ಬಹಳಷ್ಟು ಜನರಿಗೆ ಇಷ್ಟವಾಗಿದೆ ಹಾಗೂ ನಗುವಂತೆ ಮಾಡುತ್ತಿದೆ ಎನ್ನುವ ವಿಚಾರ ನನಗೆ ಖುಷಿಯನ್ನು ನೀಡಿದೆ. ನಾವೆಲ್ಲರೂ ಸದಾ ನಗುತ್ತಾ ಇರಬೇಕು. ಅದಕ್ಕೆ ಈ ಫೋಟೋ ನೆರವಾಗಿದೆ. ನಾನು ಹೇಳುತ್ತಿರುವ ಮಾತುಗಳು ಸರಿಯಾಗಿದೆ ಅಲ್ಲವೇ?? ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.